No Visa travel countries: ಶ್ರೀಲಂಕ ಮಾತ್ರವಲ್ಲದೇ ಈ ದೇಶಗಳಿಗೆ ವೀಸಾ ಇಲ್ಲದೇ ನೇರ ಹೋಗಬಹುದು; ಚೀಪ್ ಆ್ಯಂಡ್ ಬೆಸ್ಟ್ ಕೂಡ !

Not only Sri Lanka but also these countries can go directly without visa

No Visa travel countries : ಭಾರತೀಯರು ಯಾರೆಲ್ಲಾ ಪಾಸ್‌ಪೋರ್ಟ್‌ ಹೊಂದಿರುತ್ತಾರೋ ಅವರಿಗೆ ಶ್ರೀಲಂಕಾಕ್ಕೆ ಹೋಗಲು ವೀಸಾ ಬೇಕಿಲ್ಲ. ಶ್ರೀಲಂಕಾ ಮಾತ್ರ ಭಾರತೀಯರಿಗೆ ವೀಸಾ-ಮುಕ್ತ ಪ್ರಯಾಣವನ್ನು ಅನುಮತಿಸುತ್ತಿಲ್ಲ, ಇದರ ಜೊತೆಗೆ ಇನ್ನೂ ಕೆಲ ದೇಶಗಳು ಕೂಡ ವೀಸಾ ಮುಕ್ತ ಪ್ರವೇಶ ಅನುಮತಿಸುತ್ತಿವೆ. ಹಾಗಾದ್ರೆ ಯಾವ ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು (No Visa travel countries ) ಎಂದು ತಿಳಿಯಿರಿ.

ಮಾರಿಷಸ್: ಬಿಳಿ ಮರಳಿನ ಕಡಲತೀರಗಳಲ್ಲಿ ಸಮುದ್ರದ ಅನುಭವಗಳನ್ನು ಎಂಜಾಯ್‌ ಮಾಡಲು ಬಯಸಿದರೆ ವೀಸಾ ಚಿಂತೆ ಇಲ್ಲದೇ ನೀವು ಮಾರಿಷಸ್‌ಗೆ ತೆರಳಬಹುದು. ಶ್ರೀಲಂಕಾದಂತೆಯೇ, ಮಾರಿಷಸ್ ತನ್ನ ಕಡಲತೀರದ ಹೊರಗಿನ ಹವಾಮಾನ ಮತ್ತು ಪರ್ವತದ ಒಳಭಾಗವನ್ನು ಹೊಂದಿರುವ ಸುಂದರವಾದ ದ್ವೀಪ ರಾಷ್ಟ್ರವಾಗಿದೆ. ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ 90 ದಿನಗಳ ಕಾಲ ಮಾರಿಷಸ್‌ನಲ್ಲಿ ಉಳಿಯಬಹುದು.

ಮಾಲ್ಡೀವ್ಸ್‌: ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು ಮಾಲ್ಡೀವ್ಸ್‌. ಕಡಲ ತೀರಗಳು, ನೀರಿನೊಳಗಿನ ರೆಸಾರ್ಟ್‌ ಎಲ್ಲವೂ ಪ್ರವಾಸಕ್ಕೆ ಹೇಳಿ ಮಾಡಿಸದ ಸ್ಥಳಗಳು ಇಲ್ಲಿಗೂ ಕೂಡ ನಾವು ವೀಸಾ ಇಲ್ಲದೇ ಹೋಗಬಹುದಾಗಿದೆ. ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ 90 ದಿನಗಳ ಕಾಲ ಮಾಲ್ಡೀವ್ಸ್‌ನಲ್ಲಿ ತಂಗಬಹುದು.

ಬಾರ್ಬಡೋಸ್: ವಿಶ್ವದ ಸುಂದರವಾದ ಬೀಚ್‌ಗಳಲ್ಲಿ ಬಾರ್ಬಡೋಸ್ ಬೀಚ್‌ಗಳು ಕೂಡ ಪ್ರಮುಖವಾಗಿವೆ. ಇವುಗಳನ್ನು ಕೆರಿಬಿಯನ್‌ನ “ಜ್ಯುವೆಲ್” ಎಂದೇ ಕರೆಯಲಾಗುತ್ತದೆ. ಭಾರತೀಯ ಸಂದರ್ಶಕರು 90 ದಿನಗಳ ಅವಧಿಯವರೆಗೆ ವೀಸಾ ಇಲ್ಲದೆ ಬಾರ್ಬಡೋಸ್ ಅನ್ನು ಎಂಜಾಯ್‌ ಮಾಡಬಹುದು.

ಫಿಜಿ: 300 ಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹ ಇರುವ ರಾಷ್ಟ್ರ ಎಂದರೆ ಫಿಜಿ. ಹವಳದ ಬಂಡೆಗಳನ್ನು ಹೊಂದಿರುವ ಫಿಜಿ ಕಡಲತೀರದ ಸ್ವರ್ಗವಾಗಿದೆ. ಭಾರತೀಯ ಪ್ರವಾಸಿಗರು ವೀಸಾ ಇಲ್ಲದೆ 120 ದಿನಗಳ ಕಾಲ ಇಲ್ಲಿರಬಹುದು.

ನೇಪಾಳ: ವಿಹಂಗಮ ಪರ್ವತ ವೀಕ್ಷಣೆಗಳು, ಸುಂದರವಾದ ಪ್ರಕೃತಿ, ಕೃಷಿ ಭೂಮಿ, ತಣ್ಣನೆಯ ಹವಮಾನ ಇವನ್ನೆಲ್ಲಾ ಸವಿಯಲು ವೀಸಾ ಇಲ್ಲದೇ ನೇಪಾಳಕ್ಕೆ ಹೋಗಬಹುದು. ಈ ದೇಶಕ್ಕೆ ಹೋಗಲು ಭಾರತೀಯರಿಗೆ ಯಾವುದೇ ವೀಸಾ ಅಗತ್ಯವಿಲ್ಲ.
ಈ ದೇಶಗಳಿಗೆ ನೀವು ವೀಸಾ ಇಲ್ಲದೇ ಓಡಾಡಬಹುದು. ನೋಡಿ ನೀವು ಕೂಡ ಇನ್ನು ಮುಂದೆ ಅರಾಮಾಗಿ ಹೋಗಿಬಹುದು.

ಇದನ್ನೂ ಓದಿ: ಪಿಕ್ಸೆಲ್ ಕ್ರಿಯೇಟಿವ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪಲ್ಲತ್ತಡ್ಕ ನಿಧನ

Leave A Reply

Your email address will not be published.