Toll Plaza: ದೇಶಾದ್ಯಂತ ಟೋಲ್ ಕಟ್ಟುವವರಿಗೆ ಬಂತು ಹೊಸ ರೂಲ್ಸ್- ಇದಕ್ಕಿಂದ ಹೆಚ್ಚು ಹೊತ್ತು ಕಾದರೆ ಟೋಲ್ ಕಟ್ಟಬೇಕಾಗಿಲ್ಲ !!

National news minister Nitin Gadkari give important information about toll plaza waiting time

Toll Plaza: ದೇಶದಲ್ಲಿ ವಾಹನ ಸವಾರರಿಗೆ ಹೆಚ್ಚು ತಲೆ ನೋವಾಗಿರುವಂತಹ ವಿಚಾರ ಎಂದರೆ ಟೋಲ್ ಪ್ಲಾಜಾಗಳು(Toll Plaza). ಇಲ್ಲಿ ಗೇಟ್ ಬಳಿ ಕಾಯುವುದು, ಅಲ್ಲಲ್ಲಿ ಟೋಲ್ ಕಟ್ಟಲು ನಿಲ್ಲುವುದು. ಆದರೆ ಕೇಂದ್ರ ಸರ್ಕಾರ ಈ ಟೋಲ್ ವಿಚಾರವಾಗಿ ಇದೀಗ ಹೊಸ ರೂಲ್ಸ್ ಒಂದನ್ನು ತಂದಿದ್ದು, ವಾಹನ ಸಹವಾರರಿಗೆ ಸಂತಸ ಉಂಟುಮಾಡಿದೆ.

ಹೌದು, ನಿತಿನ್ ಗಡ್ಕರಿಯವರು ಕೇಂದ್ರ ಸಾರಿಗೆ ಸಚಿವರಾದ ಬಳಿಕ ಸಾರಿಗೆ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದು ಜನರಿಗೆ ಅನುಕೂಲಮಾಡಿಕೊಡುತ್ತಿದ್ದಾರೆ. ಅದರಲ್ಲೂ ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಕಾರಣ ಟೋಲ್ ಸಂಗ್ರಹಣೆಯ ಸಾಕಷ್ಟು ನಿಯಮಗಳನ್ನು ಬದಲಾಯಿಸಿದ್ದಾರೆ. ಅಂತೆಯೇ ಇದೀಗ ಟೋಲ್ ಗೇಟ್ ಗಳಲ್ಲಿ ಟೋಲ್ ಕಟ್ಟಲು ನೀಂತು ಕಾದು ಕಾದು ಸುಸ್ತು ಹೊಡೆಯುವ ದೇಶದ ಎಲ್ಲಾ ವಾಹನ ಸವಾರರಿಗೂ ಗಡ್ಕರಿಯವರು ಗುಡ್ ನ್ಯೂಸ್ ಕೊಟ್ಟಿದ್ದು, ಟೋಲ್ ಗೇಟುಗಳಲ್ಲಿ ಇದಕ್ಕಿಂತ ಹೆಚ್ಚು ಹೊತ್ತು ಕಾದರೆ ಟೋಲ್ ಕಟ್ಟಬೇಕಾಗಿಲ್ಲ ! ಎಂದು ಆದೇಶವನ್ನು ಹೊರಡಿಸಿದ್ದಾರೆ.

ಅಂದಹಾಗೆ ಕೇಂದ್ರ ಸಾರಿಗೆ ಇಲಾಖೆಯು ಇದೀಗ ಭಾರತದ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ವಾಹನಗಳ ಸೇವಾ ಸಮಯ 10 ಸೆಕೆಂಡುಗಳಿಗಿಂತ ಹೆಚ್ಚಿರಬಾರದು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಒಂದು ವೇಳೆ ಇದರ ಹೊರತಾಗಿಯೂ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನವನ್ನು ಟೋಲ್‌ನಲ್ಲಿ ನಿಲ್ಲಿಸಿದರೆ ಅವರು ಯಾವುದೇ ರೀತಿಯ ಟೋಲ್ ಕಟ್ಟುವಂತಿಲ್ಲ ಎಂದು ಖಡಕ್ ಸಂದೇಶವನ್ನೂ ರವಾನಿಸಿದೆ.

ಇದಷ್ಟೇ ಅಲ್ಲದೆ ಟೋಲ್ ಪ್ಲಾಜಾದಲ್ಲಿ ವಾಹನಗಳ ಸಾಲು 100 ಮೀಟರ್ ಮೀರಬಾರದು. ವಾಹನಗಳ ಸಾಲು ಹೆಚ್ಚಾದಂತೆ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. ಪ್ರತಿ ಟೋಲ್ ಬೂತ್ ನಿಂದ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಇರಿಸಬೇಕು ಎಂದು ಕೂಡ ಕೇಂದ್ರ ಸಾರಿಗೆ ಸಚಿವಾಲಯವು ರೂಲ್ಸ್ ಮಾಡಿದೆ.

ಇದನ್ನೂ ಓದಿ:  Whatsapp: ನಿಮ್ಮ ಪ್ರೀತಿ ಪಾತ್ರರು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ ?!

Leave A Reply

Your email address will not be published.