Whatsapp: ನಿಮ್ಮ ಪ್ರೀತಿ ಪಾತ್ರರು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದರೆ ತಿಳಿಯುವುದು ಹೇಗೆ ?!

Technology new how to know someone blocked on WhatsApp

Whatsapp: ಇಂದು ಜಗತ್ಪ್ರಸಿದ್ಧಿ ಹೊಂದಿ ಎಲ್ಲರ ಮೊಬೈಲ್ ನಲ್ಲೂ ಇರವ ಆಪ್ ಅಂದರೆ ಅದು ವಾಟ್ಸಪ್(Whatsapp). ಇಂದು ಅನೇಕ ಸಂಭಾಷಣೆಗಳು ನಡೆವುದು, ನೋವು- ನಲಿವುಗಳನ್ನು ಎಲ್ಲರೂ ಹಂಚಿಕೊಳ್ಳುವುದು ಇದೇ ವಾಟ್ಸಪ್ ಮುಖಾಂತರ. ಅಷ್ಟೇ ಏಕೆ ಇಂದು ಪ್ರೀತಿ-ಪ್ರೇಮಗಳು ಹೆಚ್ಚಾಗಿ ಚಿಗುರೊಡೆಯುವುದೇ ಈ ವಾಟ್ಸಪ್ ಮೂಲಕ. ಅಂಚೆ ಕಚೇರಿಗೆ ರೀಪ್ಲೇಸ್ ಆಗಿ ವಾಟ್ಸಪ್ ತರಾಯಾಗುತ್ತಿದೆಯೇನೋ ಅನ್ನಬಹುದು. ಅಲ್ಲದೆ ಯಾರಾದರೂ ಪರಿಚಯ ಆದ ಕೂಡಲೇ ನಿಮ್ಮ ವಾಟ್ಸಪ್ ನಂಬರ್ ಕೊಡಿ ಎಂದೇ ಎಲ್ಲರೂ ಕೇಳುವುದು. ಅಷ್ಟರ ಮಟ್ಟಿಗೆ ಈ ವಾಟ್ಸಪ್ ಹವಾ ಗಳಿಸಿದೆ. ಅಂದಹಾಗೆ ಈ ವಾಟ್ಸಪ್ ನಲ್ಲಿ ಯಾರಾದರು ನಿಮ್ಮನ್ನು ಬ್ಲಾಕ್ ಮಾಡಿದರೆ ತಿಳಿಯುವುದು ಹೇಗೆ ಗೊತ್ತಾ ?!

ಹೌದು, ಸ್ನೇಹ, ಪ್ರೀತಿಗಳು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ, ಏನೇನೋ ಮಿಸ್ ಅಂಡ್ರಸ್ಟಾಂಡಿಂಗ್ ಆಗಿ ಏನೇನೋ ಗಲಾಟೆ ಗೊಂದಲಗಳು ಆಗುವುದುಂಟು. ಈ ಪ್ರೀತಿ, ಸ್ನೇಹಗಳು ಬೆಳೆಯಲು ಕಾರಣವಾಗುವ ವಾಟ್ಸಪ್ ನಲ್ಲೇ ಅವುಗಳ ಅಂತ್ಯ ಕೂಡ ಆಗಬಹುದು. ಇದೆಲ್ಲದಕ್ಕೂ ಸಹಕಾರ ನೀಡುವುದು ವಾಟ್ಸಪ್ ನಲ್ಲಿರುವ ‘ಬ್ಲಾಕ್’ ಆಪ್ಶನ್. ಒಬ್ಬರನ್ನು ಬ್ಲಾಕ್ ಮಾಡಿದರೆ ಮುಗಿಯಿತು ಇನ್ಮುಂದೆ ಅಲ್ಲಿ ಯಾವುದೇ ಸಂಭಾಷಣೆಗಳು, ಫೋನುಗಳು ಇರುವುದಿಲ್ಲ. ಯಾಕೆಂದರೆ ಮಾಡಲು ಆಗುವುದೇ ಇಲ್ಲ. ಪ್ರೇಮಿಗಳಿಗಂತೂ ಇದು ದೊಡ್ಡ ತಲೆನೋವು. ಹೀಗಾಗಿ ನಮ್ಮನ್ನು ನಮ್ಮ ಪ್ರೀತಿ ಪಾತ್ರರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯುವುದು ಹೇಗೆ? ಇಲ್ಲಿದೆ ನೋಡಿ ಡೀಟೇಲ್ಸ್

ಅಂದಹಾಗೆ ಮುಖ್ಯವಾಗಿ ಯಾರಾದರು ನಮ್ಮನ್ನು ಬ್ಲಾಕ್​ ಮಾಡಿದಾಗ ಬ್ಲಾಕ್​ಗೆ ಒಳಗಾದವರಿಗೆ ಯಾವುದೇ ನೋಟಿಫಿಕೇಷನ್ ಬರುವುದಿಲ್ಲ ಇಲ್ಲವೇ ಬ್ಲಾಕ್​ಗೆ ಒಳಗಾಗಿದ್ದನ್ನು ತಿಳಿದುಕೊಳ್ಳುವ ಖಚಿತ ಮಾರ್ಗವೂ ಇಲ್ಲ. ಅದಾಗ್ಯೂ ಬ್ಲಾಕ್​ಗೆ ಒಳಗಾಗಿದ್ದನ್ನು ಕೆಲವೊಂದು ವಿಷಯಗಳಿಂದ ತಿಳಿದುಕೊಳ್ಳಬಹುದಾಗಿದೆ. ಅವುಗಳು ಈ ಕೆಳಗಿನಂತಿವೆ.

• ಬ್ಲಾಕ್​ ಮಾಡಿದರೆ ಅಂಥವರ ಲಾಸ್ಟ್ ಸೀನ್ ಹಾಗೂ ಆನ್​ಲೈನ್ ಮಾಹಿತಿ ಗೋಚರಿಸುವುದಿಲ್ಲ.
• ಬ್ಲಾಕ್ ಮಾಡಿದವರ ಡಿಪಿ, ಸ್ಟೇಟಸ್ ಸೇರಿದಂತೆ ಪ್ರೊಫೈಲ್ ಅಪ್​ಡೇಟ್ಸ್​ ಗೊತ್ತಾಗುವುದಿಲ್ಲ.
• ಯಾವುದೇ ಮೆಸೇಜ್ ಕಳಿಸಿದಾಗ ಸಿಂಗಲ್ ಟಿಕ್ ಬರುತ್ತವೆ ವಿನಃ ಡಬಲ್ ಕ್ಲಿಕ್ ಕಾಣಿಸುವುದಿಲ್ಲ.
• ಅಂಥವರ ಸಂಖ್ಯೆಗೆ ಕರೆ ಮಾಡಿದರೂ ಕನೆಕ್ಟ್ ಆಗುವುದಿಲ್ಲ.
ಒಂದೇ ಕಾಂಟ್ಯಾಕ್ಟ್​ನಲ್ಲಿ ಈ ಎಲ್ಲ ಸಂಗತಿ ಒಟ್ಟಿಗೆ ಅಥವಾ ಇದರಲ್ಲಿನ ಬಹುತೇಕವು ಒಟ್ಟಿಗೆ ಸಂಭವಿಸಿದಲ್ಲಿ ಅವರು ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳಿಯಬಹುದು.

ಇದನ್ನೂ ಓದಿ: LIC Policy: LIC ಪಾಲಿಸಿ ಮಾಡಿಸಿದವರಿಗೆ ಸಂತಸದ ಸುದ್ದಿ – ಸಾಲ ಸೌಲಭ್ಯದ ಕುರಿತು ಇದೀಗ ಬಂತು ಹೊಸ ಘೋಷಣೆ

Leave A Reply

Your email address will not be published.