Bank Loan: ಗ್ರಾಹಕರೇ.. ಇದೊಂದು ಕೆಲಸ ಮಾಡಿದ್ರೆ ಬ್ಯಾಂಕಿನವರು ಮನೆಗೇ ಬಂದು ಲೋನ್ ಕೊಡ್ತಾರೆ !!

RBI has given one good news to the people regarding loans

Bank Loan: ಬ್ಯಾಂಕುಗಳು ಜನರ ಅನುಕೂಲಕ್ಕಾಗಿ ಇಂದು ಅನೇಕ ಸೌಲಭ್ಯಗಳನ್ನು, ಯೋಜನೆಗಳನ್ನು ಕಲ್ಪಿಸಿ, ಜಾರಿಗೊಳಿಸುತ್ತಿವೆ. RBI ಕೂಡ ತನ್ನ ವ್ಯಾಪ್ತಿಯಲ್ಲಿರುವ ಬ್ಯಾಂಕುಗಳಿಗೆ ಜನರಿಗೆ ಪ್ರಯೋಜನ ಆಗುವ ಸ್ಕೀಮ್ ಗಳನ್ನು ತರಲು ನಿರ್ಧೇಶಿಸುತ್ತಿದೆ. ಹೀಗಾಗಿ FD ಬಡ್ಡಿದರದಲ್ಲೆಲ್ಲಾ ಹೆಚ್ಚಾಗಿ ಜನರು ಸಂತೋಷದಿಂದ ಇದ್ದಾರೆ. ಈ ಬೆನ್ನಲ್ಲೇ ಲೋನ್(Bank Loan) ವಿಚಾರದಲ್ಲೂ ಜನರಿಗೆ RBI ಗುಡ್ ನ್ಯೂಸ್ ಒಂದನ್ನು ನೀಡಿದೆ.

ಹೌದು, ಜನಸಾಮಾನ್ಯರು ಅನೇಕ ಆಸೆ ಆಕಾಂಕ್ಷೆಗಳಿಟ್ಟುಕೊಂಡು, ಅವುಗಳೆಲ್ಲವನ್ನು ಪೂರೈಸಲು ಬೇಕಾಗುವ ಹಣಕ್ಕಾಗಿ ಲೋನ್ ಮಾಡಿಸುತ್ತಾರೆ. ಆದರೆ
ಇಂದು ಲೋನ್ ಪಡೆವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಕಡಿಮೆ ಅವಧಿಯಲ್ಲಿ ತೀರಿಸುವ, ಕಡಿಮೆ ಬಡ್ಡಿಗೆ ಸಿಗುವ ಲೋನ್ ಅನ್ನು ಜನರು ಪಡೆಯಲು ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಈ ರೀತಿ ಲೋನ್ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಸಿಕ್ಕರೂ ದಾಖಲೆಗಳನ್ನು ಹೊಂದಿಸಿ ಬ್ಯಾಂಕಿಗೆ ಅಲೆಯುವುದು ತುಂಬಾ ತ್ರಾಸದಾಯಕ. ಆದರೆ ನಿಮ್ಮ CIBIL ಸ್ಕೋರ್ ಚೆನ್ನಾಗಿದ್ದರೆ ಆರಾಮಾಗಿ ನಿಮಗೆ ಲೋನ್ ಸಿಗುತ್ತದೆ.

CIBIL ಸ್ಕೋರ್ ಎಂದರೇನು?
ಬ್ಯಾಂಕಿನವರು ಲೋನ್ ನೀಡುವಾಗ ನಿಮ್ಮ CIBIL score(Credit Information Bureau India Limited). CIBIL score ಅಂದ್ರೆ ಬ್ಯಾಂಕಿನವರಿಗೆ ನಿಮಗೆ ಲೋನ್ ನೀಡಬೇಕಾ ಇಲ್ವಾ ಅನ್ನೋದಕ್ಕೆ ಒಂದು ಗುಣಮಟ್ಟದ ಮಾಪನ ಎಂದು ಹೇಳಬಹುದಾಗಿದೆ. ನೀವು ಈ ಹಿಂದೆ ಸಾಲವನ್ನು ಪಡೆದುಕೊಂಡು ಸರಿಯಾದ ಸಮಯದಲ್ಲಿ ಕಟ್ಟಿದ್ದೀರೋ ಇಲ್ಲವೋ ಎಂದು ತಿಳಿಸುತ್ತದೆ. ಸರಿಯಾದ ಸಮಯಕ್ಕೆ ಲೋನ್ ಕಟ್ಟಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರುತ್ತೆ. ಇಲ್ಲವಾದಲ್ಲಿ ಸಿಬಿಲ್ ಸ್ಕೋರ್ ಡೌನ್ ಆಗುತ್ತದೆ.

ಇದನ್ನು ಬ್ಯಾಂಕಿನವರು ಚೆಕ್ ಮಾಡುತ್ತಾರೆ ಹಾಗೂ ಅದು ಲೋ ಆಗಿದ್ದರೆ ಆ ಸಂದರ್ಭದಲ್ಲಿ ನಿಮಗೆ ಲೋನ್ ನೀಡುವುದಿಲ್ಲ ಹಾಗೂ ನೀವು ನಿಮ್ಮ ಕನಸುಗಳನ್ನು ಪೂರೈಸಲು ಕೂಡ ಸಾಧ್ಯ ಆಗೋದಿಲ್ಲ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನೀವು ಲೋನ್ ಪಡೆದಾಗ ಅದನ್ನು ಸರಿಯಾದ ಸಮಯಕ್ಕೆ ಕಟ್ಟಿದರೆ ಮುಂದಿನ ದಿನಗಳಲ್ಲಿ ಬ್ಯಾಂಕಿನವರೇ ನಿಮ್ಮ ಮನೆಗೆ ಹುಡುಕಿಕೊಂಡು ಬಂದು ಲೋನ್ ನೀಡುತ್ತಾರೆ. ಇನ್ನು 750 ರಿಂದ 900ರ ನಡುವೆ ಇರುವಂತಹ ಸಿವಿಲ್ ಸ್ಕೋರ್ ಅನ್ನು ಅತ್ಯಂತ ಪರ್ಫೆಕ್ಟ್ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಬ್ಯಾಂಕಿನವರು ಇಂತಹ ವ್ಯಕ್ತಿಗಳಿಗೆ ಸುಲಭವಾಗಿ ಸಾಲವನ್ನು ನೀಡುತ್ತಾರೆ.

 

ಇದನ್ನು ಓದಿ: Murder Case: ದಲಿತ ಮುಖಂಡನ ಬರ್ಬರ ಹತ್ಯೆ!

Leave A Reply

Your email address will not be published.