Karnataka graduate teacher recruitment: ನೇಮಕಾತಿ ಖುಷಿಯಲ್ಲಿದ್ದ 13,000 ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್- ಮತ್ತೆ ಕಾನೂನು ಮೊರೆ ಹೋದ ಅಭ್ಯರ್ಥಿಗಳು

Govt job news Karnataka graduate teacher recruitment Big shock for 13,000 teacher post aspirants in Karnataka

Karnataka graduate teacher recruitment : ನೇಮಕಾತಿ ಖುಷಿಯಲ್ಲಿದ್ದ 13,000 ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್!! 13,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ( Karnataka graduate teacher recruitment ) ಪ್ರಕರಣ ಮತ್ತೊಂದು ಸುತ್ತಿನ ಕಾನೂನು ಹೋರಾಟದ ಹಾದಿ ಹಿಡಿದಿದೆ.

13 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ (High Court)ನಿರ್ದೇಶನದಂತೆ ಕೆಲವು ಅಭ್ಯರ್ಥಿಗಳು ತಮ್ಮ ತಂದೆಯ ಆದಾಯ ಪ್ರಮಾಣ ಪತ್ರ ಪರಿಗಣಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸದ್ಯ, ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KAT) ಮೊರೆ ಹೋಗಿದ್ದಾರೆ. ಅಕ್ಟೋಬರ್ 12ರಂದು ಹೈಕೋರ್ಟ್ ನೇಮಕಾತಿಗೆ ಸಮ್ಮತಿ ಸೂಚಿಸಿದ್ದು, ತಂದೆಯ ಆದಾಯ ಪ್ರಮಾಣ ಪತ್ರ (Income Certificate)ಕುರಿತಾಗಿ ಅಭ್ಯರ್ಥಿಗಳು ಕೆಎಟಿ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಸೂಚಿಸಿದೆ. ಬೆಂಗಳೂರಿನ ಬಿಳೇಕಹಳ್ಳಿಯ ಚೈತ್ರಾ ಸೇರಿದಂತೆ 22 ಅಭ್ಯರ್ಥಿಗಳು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ್ ಮತ್ತು ಆಡಳಿತ ಸದಸ್ಯ ಎಸ್. ಶಿವಶೈಲಂ ಅವರಿದ್ದ ಪೀಠವು ಪ್ರತಿವಾದಿ ಸರ್ಕಾರ, ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಈ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 6ಕ್ಕೆ ನಿಗದಿ ಮಾಡಲಾಗಿದೆ. ಅರ್ಜಿ ವಿಲೇವಾರಿ ಮಾಡಲು ಸರ್ಕಾರದ ಉತ್ತರ ಬೇಕಾಗಿದ್ದು, ಯಾವುದೇ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದರೆ ಅದು ಈ ಅರ್ಜಿಯ ತೀರ್ಪಿಗೆ ಒಳಪಡುತ್ತದೆ ಎಂದು ಕೆಎಟಿ ತಿಳಿಸಿದೆ.

ಇದನ್ನೂ ಓದಿ: Gruha Lakshmi Yojana: ಯಜಮಾನಿಯರೇ ಗಮನಿಸಿ- ಮುಂದಿನ ತಿಂಗಳ ‘ಗೃಹಲಕ್ಷ್ಮೀ’ ಹಣ ಬೇಕಂದ್ರೆ ಈ 4 ದಾಖಲೆಗಳನ್ನು ರೆಡಿ ಮಾಡಿ

Leave A Reply

Your email address will not be published.