Gruha Lakshmi Yojana: ಯಜಮಾನಿಯರೇ ಗಮನಿಸಿ- ಮುಂದಿನ ತಿಂಗಳ ‘ಗೃಹಲಕ್ಷ್ಮೀ’ ಹಣ ಬೇಕಂದ್ರೆ ಈ 4 ದಾಖಲೆಗಳನ್ನು ರೆಡಿ ಮಾಡಿ

Gruha Lakshmi Scheme Submission of these 4 documents is mandatory to get the next installment amount latest updates

Gruha Lakshmi Yojana Updates: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ‌ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಆದರೆ, ಈ ನಡುವೆ, ಹೆಚ್ಚಿನ ಮಂದಿಗೆ ಎರಡನೇ ಕಂತಿನ ಹಣ ಜಮೆ ಆಗಿಲ್ಲ. ಮುಂದಿನ ತಿಂಗಳು ಗೃಹಲಕ್ಷ್ಮೀ ಯೋಜನೆಯ ಹಣವನ್ನು (Gruha Lakshmi Yojana Updates)ಪಡೆಯಬೇಕಾದರೆ ಕಡ್ಡಾಯವಾಗಿ ಈ ನಾಲ್ಕು ದಾಖಲೆಗಳನ್ನು ನೀವು ಸಲ್ಲಿಸಲೇಬೇಕು.

ಇದೀಗ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಕೂಡ ಇಲ್ಲಿಯವರೆಗೆ ಹಣ ಸಿಗದೇ ಇದ್ದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಯವರಿಗೆ ಕೂಡಲೇ ಈ 4 ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ ಮತ್ತು ಅರ್ಜಿ ಸ್ವೀಕೃತಿ ಪತ್ರದ ಪ್ರತಿಯನ್ನು ನೀಡಬೇಕು. ಈ ನಾಲ್ಕು ದಾಖಲೆಗಳನ್ನು ಸಿಡಿಪಿಓ ಅವರಿಗೆ ಸಲ್ಲಿಸಿದರೆ ನಿಮಗೆ ಯಾವ ಕಾರಣಕ್ಕೆ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂಬ ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ: AIUDF: ರೇಪ್, ಕಳ್ಳತನ ಮಾಡೋದ್ರಲ್ಲಿ ಮುಸ್ಲಿಮರೇ ಮೊದಲಿಗರು- ಶಾಕಿಂಗ್ ಹೇಳಿಕೆ ನೀಡಿದ ಮುಸ್ಲಿಂ ನಾಯಕ

Leave A Reply

Your email address will not be published.