CM Siddaramaiah: ಬೆಳ್ಳಂಬೆಳಗ್ಗೆಯೇ ರಾಜ್ಯದ ವಿಪಕ್ಷಗಳಿಗೆ ಬಿಗ್ ಶಾಕ್- ಇಡೀ ರಾಜ್ಯದ ರಾಜಕೀಯಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ ಸಿದ್ದು

Karnataka politics news CM Siddaramaiah give explanation to opposition party leaders allegation

CM Siddaramaiah: ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಬಹಳಷ್ಟು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ರಾಜಕೀಯ ನಾಯಕರುಗಳ ಆರೋಪ ಹಾಗೂ ಪ್ರತ್ಯಾರೋಪಗಳಂತೂ ಮಿತಿ ಮೀರಿ ಹೋಗಿದೆ. ನಾಡಿನಲ್ಲಿ ದಸರಾ ಸಂಭ್ರಮ, ಜನರೊಂದಿಗೆ ನಾವೂ ಒಟ್ಟಾಗೀ ಸಂಭ್ರಮಿಸಬೇಕು ಎಂಬುದನ್ನೂ ನೋಡದೆ ಒಬ್ಬರ ಮೇಲೊಬ್ಬರು ರಾಜಕೀಯ ಕೆಸರೆರಚಾಟ ಮಾಡಿಕೊಂಡಿದ್ದಾರೆ. ಇದೆಲ್ಲವಾದ ಬಳಿಕ ಇದೀಗ ರಾಜ್ಯದ ಜನಪ್ರಿಯ ಸಿಎಂ ಸಿದ್ದರಾಮಯ್ಯನವರು(CM Siddaramaiah)ರಾಜ್ಯದ ಎಲ್ಲಾ ವಿಪಕ್ಷಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ರಾಜಕೀಯ ಕೆಸರೆರೆಚಾಟದಲ್ಲಿ ವಿಪಕ್ಷಗಳಂತೂ ಆಡಳಿತ ಪಕ್ಷವಾದ ಕಾಂಗ್ರೆಸ್ ಅನ್ನು ಹಿಗ್ಗಾಮುಗ ತರಾಟೆಗೆ ತೆಗೆದುಕೊಂಡಿವೆ. ಸರ್ಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಹಲವು ಯೋಜನೆಗಳನ್ನು, ಕಾನೂನುಗಳನ್ನು ಹಾಗೂ ಗ್ಯಾರಂಟಿಗಳನ್ನು ಟೀಕಿಸಿ ದಿನದಿನವೂ ಕೂಡ ಸರ್ಕಾರದ ಮೇಲೆ ವಿವಿಧ ರೀತಿಯ ಟೀಕಾ ಪ್ರಹಾರಗಳನ್ನು ಮಾಡಿವೆ. ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕವಂತೂ ಇದು ಹೆಚ್ಚೆನ್ನೆಬಹುದು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಎಂ ಸಿದ್ದರಾಮಯ್ಯನವರು ಇದೀಗ ಹೊಸದಾಗಿ ವಿಪಕ್ಷಗಳ ಬುಡಕ್ಕೇ ‘ಬಿಲ್ ಬಾಂಬ್’ ಸಿಡಿಸಿದ್ದಾರೆ.

ಹೌದು, ಬಿಲ್ ಬಾಕಿ ವಿಚಾರದ ವಿವಾದ ಯಾವ ಸರ್ಕಾರವಿದ್ದರೂ ತಪ್ಪುವುದಿಲ್ಲ. ವಿಪಕ್ಷಗಳಂತೂ ಇದನ್ನೇ ಬಂಡವಾಳಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯುತ್ತಾರೆ. ಅಂತೆಯೇ ರಾಜ್ಯದಲ್ಲೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಮಗಾರಿಗಳಿಗೆ ಕಮಿಷನ್ ಪಡೆಯುವ ಆರೋಪ ಕೇಳಿಬರುತ್ತಿದೆ. ಈ ಹಿಂದೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದೇ ಅಸ್ತ್ರ ಬಳಸಿಕೊಂಡು ವಾಗ್ದಾಳಿ ನಡೆಸಿ, ಜಯ ಸಾಧಿಸಿತ್ತು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ಚಳಿ ಬಿಡಿಸಲು ರೆಡಿಯಾಗಿದ್ದರು. ಆದರೀಗ ಇದೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಈಗ ತಕ್ಕ ಉತ್ತರ ಕೊಟ್ಟಿದ್ದು, ವಿರೋಧ ಪಕ್ಷಗಳ ವಿರುದ್ಧವೇ ಗಂಭೀರ ಆರೋಪ ಮಾಡಿದಿ ಬಿಲ್ ಬಾಕಿ ಎಂಬ ಬ್ರಹ್ಮಾಸ್ತ್ರವನ್ನೇ ಬಳಸಿದ್ದಾರೆ.

ಇದರ ಕುರಿತು ಟ್ವೀಟ್ ಮಾಡಿರೋ ಅವರು ‘ಹಿಂದಿನ ಸರ್ಕಾರ ಹಣವಿಲ್ಲದಿದ್ದರೂ ಕಾಮಗಾರಿಗಳನ್ನು ಮಂಜೂರು ಮಾಡಿ, ಟೆಂಡರ್ ಕರೆದು ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದೆ. 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ? ನಮ್ಮ ಕಾಲದ ಹಾಗೂ ಹಿಂದಿನ ಸರ್ಕಾರದ ಕಾಲದ ಆರ್ಥಿಕ ಸ್ಥಿತಿ ಕುರಿತು ವಿಧಾನಮಂಡಲದಲ್ಲಿ ಶ್ವೇತಪತ್ರ ಮಂಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದ ರಾಜಕೀಯ ವಿಪಕ್ಷಗಳಿಗೆ ಭಾರೀ ನಡುಕ ಉಂಟುಮಾಡಿದೆ.

ಇದನ್ನೂ ಓದಿ: State bank of India: SBI ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ – ಬಡ್ಡಿ ದರದಲ್ಲಿ ಬಂಪರ್ ಏರಿಕೆ !!

Leave A Reply

Your email address will not be published.