State bank of India: SBI ಬ್ಯಾಂಕಿನಲ್ಲಿ ಖಾತೆ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ – ಬಡ್ಡಿ ದರದಲ್ಲಿ ಬಂಪರ್ ಏರಿಕೆ !!

Business news Good news for those have accounts in State Bank of India

State bank of India: ನಾವೆಲ್ಲರೂ ಇನ್ನು ಎರಡು ತಿಂಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತೇವೆ. ಅಂದರೆ ಈ ವರ್ಷವೂ ಮುಕ್ತಾಯವಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತೇವೆ. ವರ್ಷಾಂತ್ಯ ಅಂದಾಗ ಸರ್ಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಮಹತ್ವದ ಬದಲಾವಣೆಗಳಾಗೋದು ಸಹಜ. ಅಂತೆಯೇ ಬ್ಯಾಂಕಿಂಗ್ ವಲಯದಲ್ಲೂ ಇದು ಕಾಮನ್. ಅದರಂತೆ ಇದೀಗ ದೇಶದ ಬಹುದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಆದ SBI(State bank of India)ನಲ್ಲಿ ವ್ಯವಹಾರಗಳ ಕುರಿತು ಕೆಲವು ಮಹತ್ವದ ಬದಲಾವಣೆ ಆಗಿದ್ದು, ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ದೊರೆತಿದೆ.

ಹೌದು, ವರ್ಷಾಂತ್ಯ ಅಂದಾಗ ಬ್ಯಾಂಕ್ ಗಳು ತಮ್ಮ ವ್ಯವಹಾರಗಳಲ್ಲಿ, ಬಡ್ಡಿ ದರದಲ್ಲಿ ಹಲವು ಬದಲಾವಣೆಗಳನ್ನು ತಂದು ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತವೆ. ಅಂತೆಯೇ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಕೆಲವು ಸಣ್ಣ ಪುಟ್ಟ ಬದಲಾವಣೆಗಳಾಗಿದ್ದು, ಬದಲಾಗಿರುವಂತಹ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರದ ಬಗ್ಗೆ ತಿಳಿದುಕೊಳ್ಳೋಣ.

ದಿನಗಳ FD ಬಡ್ಡಿ ದರದಲ್ಲಿ ಮಹತ್ವದ ಬದಲಾವಣೆ:
• 7 ದಿನಗಳಿಂದ 45 ದಿನಗಳ ವರೆಗಿನ ಎಫ್ ಡಿ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ ಮೂರು ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 3.5% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
• 46 ದಿನಗಳಿಂದ 179 ದಿನಗಳವರೆಗಿನ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ 4.5 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 5% ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
• 180 ದಿನಗಳಿಂದ 210 ದಿನಗಳ ವರೆಗಿನ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 5.25 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ (Senior Citizens) 5.75% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
• 201 ದಿನಗಳಿಂದ ಒಂದು ವರ್ಷದವರೆಗೆ 5.75% ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ 6.25% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.

ವಾರ್ಷಿಕ FD ಬಡ್ಡಿ ದರದಲ್ಲಿ ಮಹತ್ವದ ಬದಲಾವಣೆ:
• ಒಂದರಿಂದ ಎರಡು ವರ್ಷದ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 6.8% ಹಾಗೂ ಹಿರಿಯ ನಾಗರಿಕರಿಗೆ 7.3% ಬಡ್ಡಿ ದರವನ್ನು ತರಲಾಗಿದೆ.
• ಎರಡರಿಂದ ಮೂರು ವರ್ಷಗಳ ಮೇಲಿನ ಹೂಡಿಕೆಗೆ ಸಾಮಾನ್ಯ ನಾಗರಿಕರಿಗೆ 7% ಹಾಗೂ ಹಿರಿಯ ನಾಗರಿಕರಿಗೆ 7.5% ಬಡ್ಡಿದರವನ್ನು ಜಾರಿ ತರಲಾಗಿದೆ.
• ಮೂರರಿಂದ ಐದು ವರ್ಷಗಳ ಮೇಲೆ ಸಾಮಾನ್ಯ ನಾಗರಿಕರಿಗೆ 6.5% ಹಾಗೂ ಹಿರಿಯ ನಾಗರಿಕರಿಗೆ 7 ಪ್ರತಿಶತ ಬಡ್ಡಿದರ.

ಇನ್ನು ಈ ಬಡ್ಡಿದರಗಳ ಮೇಲಿನ ಬದಲಾವಣೆಯನ್ನು ವರ್ಷ ಆರಂಭ ಆಗುವುದಕ್ಕೆ ಮುಂಚೇನೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬದಲಾವಣೆ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: Karkala: ಕಾರ್ಕಳ ಪರಶುರಾಮನ ಕಂಚಿನ ಪ್ರತಿಮೆ ವಿವಾದಕ್ಕೆ ರೋಚಕ ಟ್ವೀಸ್ಟ್ – ಅಘಾತಕಾರಿ ವಿಡಿಯೋ ವೈರಲ್

Leave A Reply

Your email address will not be published.