Kudroli Dasara 2023: ಮಂಗಳೂರು ದಸರಾ : ಸೌಜನ್ಯಾ ಭಾವಚಿತ್ರವಿದ್ದ ಟ್ಯಾಬ್ಲೋಗೆ ಅವಕಾಶ ನೀಡದ ಪೊಲೀಸರು

Mangaluru news Kudroli Dasara 2023 Sowjanya banner in tablo stopped by police latest news

Kudroli dasara 2023: ಮಂಗಳೂರು (Managaluru)ಕುದ್ರೋಳಿ ಕ್ಷೇತ್ರದ(Kudroli dasara 2023) ದಸರಾ ಮೆರವಣಿಗೆಯ ಸಂದರ್ಭ ಧರ್ಮಸ್ಥಳದ ಸೌಜನ್ಯಾ ಫೋಟೊ (Soujanya Photo tablo)ಹಾಕಿದ್ದ ಟ್ಯಾಬ್ಲೊವನ್ನು ನಡುರಸ್ತೆಯಲ್ಲಿ ನಿಲ್ಲಿಸಿ, ಸಂಚಾರಕ್ಕೆ ಅನುವು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮಹಾತ್ಮ ಕಥಾನಕ ಬಿಂಬಿಸುವ ಚಿತ್ರಣದ ದೇವಿ ಸ್ತಬ್ಧಚಿತ್ರವನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ನೇತೃತ್ವದಲ್ಲಿ ರೂಪಿಸಲಾಗಿತ್ತು. ಟ್ಯಾಬ್ಲೊ ಎದುರಿನಲ್ಲಿ ಸೌಜನ್ಯಾ ಫೋಟೊ ಕೂಡ ಹಾಕಲಾಗಿದೆ.ಆದರೆ ಈ ಟ್ಯಾಬ್ಲೊ ರೆಡಿಯಾಗಿ ಬಂದಾಗ ಉರ್ವಾದಲ್ಲಿ ಪೊಲೀಸರು ಟ್ಯಾಬ್ಲೊ ತಡೆದು ಕ್ಷೇತ್ರದ ಆಡಳಿತ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಸೌಜನ್ಯಾಳ ಪೋಷಕರು ಮತ್ತು ಪ್ರತಿಭಟನೆಯ ಮಂದಿಗೆ ಪೊಲೀಸರು ಫೋಟೊ ಮುಚ್ಚುವಂತೆ ಸೂಚಿಸಿದ್ದಾರೆ. ಇದಕ್ಕೆ ಟ್ಯಾಬ್ಲೊದವರು ಒಪ್ಪಿ ಫೋಟೊ ಕಾಣದಂತೆ ಪರದೆ ಮುಚ್ಚಿ ಹೋಗಲು ಮುಂದಾಗಿದ್ದರು. ಆದರೆ ಕೊನೆಯಲ್ಲಿ ಟ್ಯಾಬ್ಲೆ ಸಂಚಾರ ಮಾಡಲು ಅವಕಾಶ ನೀಡಿಲ್ಲ ಎನ್ನಲಾಗಿದೆ. ಪ್ರಸನ್ನ ರವಿ ಮತ್ತು ಜೊತೆಗಿದ್ದವರು ಕ್ಷೇತ್ರದ ಕಚೇರಿಗೆ ತೆರಳಿದಾಗ, ಅಲ್ಲಿದ್ದ ಸಮಿತಿ ಪದಾಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸೌಜನ್ಯಾ ಫೋಟೊ ಹಾಕಿದರೆ ಏನು ತೊಂದರೆಯಾಗುತ್ತೆ? ಅದರಲ್ಲಿ ಯಾವ ರಾಜಕೀಯವಿದೆ. ಪುಂಡು ಪೋಕರಿಗಳ, ಸ್ಪಾನ್ಸರ್ ಕೊಟ್ಟವರ ಫೋಟೊ ಹಾಕುತ್ತಾರೆ. ಆದರೆ, ನವರಾತ್ರಿ ಸಂದರ್ಭದಲ್ಲಿ ಇವರು ಸೌಜನ್ಯಾಗೆ ದ್ರೋಹ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: NEET SS Counseling 2023:ಮೆಡಿಕಲ್ ವಿದ್ಯಾರ್ಥಿಗಳಿಗೆ ‘NEET ಕೌನ್ಸೆಲಿಂಗ್’ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!

Leave A Reply

Your email address will not be published.