Loan: ಬ್ಯಾಂಕಿನಲ್ಲಿ ಲೋನ್ ಮಾಡೋರಿಗೆ ಮಹತ್ವದ ಸುದ್ದಿ- ಪರ್ಸನಲ್ ಲೋನ್ ಗಿಂತಲೂ ಹೆಚ್ಚಿನ ಲಾಭ ಕೊಡುತ್ತೆ ಈ ಹೊಸ ಲೋನ್ !!

Business news this loan gives more profit than personal loan latest news

Loan: ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಜನಪ್ರಿಯತೆ ಪಡೆದಿರುವಂತದ್ದಾಗಿದೆ. ಸರ್ಕಾರದ ಈ ಪಿಪಿಎಫ್ (PPF) ಯೋಜನೆಯು ಹೂಡಿಕೆ (investment) ಮಾಡಲು ಇರುವ ಸುರಕ್ಷಿತ ಯೋಜನೆಯಾಗಿದೆ. ಪಿಪಿಎಫ್ ಮೂಲಕ, ಜನರಿಗೆ ಸರ್ಕಾರವು ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಯೋಜನೆಯಲ್ಲಿ ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ರೂವರೆಗೂ ಹಣ ಹೂಡಿಕೆ ಮಾಡಬಹುದಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯಲ್ಲಿ ಹೂಡಿಕೆದಾರರು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ.

ಸದ್ಯ ಬ್ಯಾಂಕಿನಲ್ಲಿ ಲೋನ್ (Loan) ಮಾಡೋರಿಗೆ ಮಹತ್ವದ ಸುದ್ದಿ ಇಲ್ಲಿದೆ. ಪರ್ಸನಲ್ ಲೋನ್ (Personal Loan) ಗಿಂತ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಲೋನ್ (PPF Loan) ಮಾಡುವುದು ಲಾಭದಾಯಕವಾಗಿದೆ. ಇಲ್ಲಿ ಬೇರೆಯೆಲ್ಲ ಸೌಲಭ್ಯಗಳ ಜೊತೆಗೆ ಸಾಲ ಸೌಲಭ್ಯವನ್ನು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ.

ಪಿಪಿಎಫ್ (PPF) ನಲ್ಲಿ ಹೂಡಿಕೆ (Investment) ಮಾಡಿದರೆ ನಿಮ್ಮ ಹೂಡಿಕೆಯ ಜೊತೆಗೆ ಕಷ್ಟಕಾಲದಲ್ಲಿ ಲೋನ್ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಪಿಪಿಎಫ್ ಅಕೌಂಟ್ (PPF Account) ನಲ್ಲಿ ಇರುವಂತಹ ನಿಮ್ಮ ಹಣದ ಆಧಾರದ ಮೇಲೆ ನಿಮಗೆ ಸಾಲ ಸಿಗುತ್ತದೆ. ಹಾಗೂ ಗಿರವಿ ನೀಡಬೇಕಾದ ಅಗತ್ಯವಿಲ್ಲ. ನಿಮಗೆ ಪಿಪಿಎಫ್ ಲೋನ್ (PPF Loan) ಖಾತೆಯ ಮೇಲೆ 7.1 ಪ್ರತಿಶತ ಬಡ್ಡಿ ಸಿಗುತ್ತಾ ಇರುತ್ತೆ. ಹೀಗಾಗಿ ಇದರ ಮೇಲೆ ಪಡೆದುಕೊಳ್ಳುವಂತಹ ಲೋನ್ ಮೇಲೆ ನಿಮಗೆ 8.1 ಪ್ರತಿಶತ ಬಡ್ಡಿದರ ಇರುತ್ತದೆ.

ಸಾಲವನ್ನು ಪಡೆದುಕೊಳ್ಳಲು ನಿಮ್ಮ ಪಿಪಿಎಫ್ ಅಕೌಂಟ್ (PPF Account) ಒಂದು ವರ್ಷ ಹಳೆಯದಾಗಿರಬೇಕು. ಈ ಖಾತೆಯ ಐದು ವರ್ಷದ ನಂತರ ಯಾವುದೇ ಪರ್ಸನಲ್ ಲೋನ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಇದು ಆದ ನಂತರ ನೀವು ನಿಮ್ಮ ಪಿಪಿಎಫ್ ಖಾತೆಯಿಂದ ಹಣವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ನಿಮ್ಮ ಖಾತೆಯಲ್ಲಿ ಇರುವ ಒಟ್ಟಾರೆ ಹಣದ 25 ಪ್ರತಿಶತ ಮಾತ್ರ ಸಾಲ ಸೌಲಭ್ಯದ ರೂಪದಲ್ಲಿ ಪಡೆದುಕೊಳ್ಳಬಹುದು.

ಒಟ್ಟಾರೆ ಅವಧಿಯಲ್ಲಿ ಒಮ್ಮೆ ಮಾತ್ರ ನೀವು ಪಿಪಿಎಫ್ (PPF) ನಿಂದ ಹಣವನ್ನು ಲೋನ್ ರೂಪದಲ್ಲಿ ಪಡೆದುಕೊಳ್ಳಬಹುದು. ಲೋನ್ ಪಡೆದುಕೊಳ್ಳಲು ಯಾವ ಬ್ಯಾಂಕಿನಲ್ಲಿ ಪಿಪಿಎಫ್ ಖಾತೆ ಮಾಡಿದ್ದೀರೋ ಅಲ್ಲಿಗೆ ಹೋಗಿ ಫಾರಂ ತುಂಬಿ ಬೇಕಾಗುವಂತಹ ಹಣ ಹಾಗೂ ಕಟ್ಟುವಂತಹ ಅವಧಿಯನ್ನು ಸಂಪೂರ್ಣವಾಗಿ ನಮೂದಿಸಿದ ನಂತರ ಬೇಕಾಗುವಂತಹ ವಿವರಗಳನ್ನು ನೀಡಿದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: CM Siddaramaiah: ಬೆಳ್ಳಂಬೆಳಗ್ಗೆಯೇ ರಾಜ್ಯದ ವಿಪಕ್ಷಗಳಿಗೆ ಬಿಗ್ ಶಾಕ್- ಇಡೀ ರಾಜ್ಯದ ರಾಜಕೀಯಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ ಸಿದ್ದು

Leave A Reply

Your email address will not be published.