Vikram-Pragyan: ಚಂದ್ರನ ಮೇಲಿರೋ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸ್ಫೋಟ ?! ಚಂದ್ರನಂಗಳದಲ್ಲಿ ಸಂಭವಿಸಿದ್ದೇನು?!

chandrayana news Vikram-Pragyan news Vikram lander and Pragyan rover blast on moon

Vikram-Pragyan: ಭಾರತೀಯರ ಹಲವು ವರ್ಷಗಳ ಕನಸು ಚಂದ್ರಯಾನ-3 ಅಂದುಕೊಂಡಂತೆ ನನಸಾಗಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ಮಾಡಿದೆ. ಅಂದುಕೊಂಡತೆ ವಿಕ್ರಮ್ ಲ್ಯಾಂಡರ್(Vikram lander) ಹಾಗೂ ಪ್ರಗ್ಯಾನ್ ರೋವರ್(Pragyan rover) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಸಾಕಷ್ಟು ಮಾಹಿತಿ ಒದಗಿಸಿವೆ. ಇದರ ಮುಂದುವರಿದೂ ಇಸ್ರೋ ಮತ್ತೊಂದು ಸಾಧನೆ ಮಾಡಲು ಹೊರಟಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಅದು ಕೈ ಗೂಡಲಿಲ್ಲ. ಆದರೀಗ ಇಸ್ರೋ ವಿಜ್ಞಾನಿಗಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ವಿಚಾರವಾಗಿ ಮತ್ತೊಂದು ಶಾಕ್ ಎದುರಾಗಿದೆ.

ಆ. 23ರಂದು ಸಂಜೆ 6 ಗಂಟೆಗೆ ಸರಿಯಾಗಿ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆಯಿತು. ಇದಾದ ಮಾರನೇ ದಿನವೇ ಲ್ಯಾಂಡರ್​ ಒಳಗಿದ್ದ ಪ್ರಗ್ಯಾನ್​ ರೋವರ್​ ಚಂದ್ರನ ಮೇಲ್ಮೈಗೆ ಬಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ನಂತರ 14 ದಿನಗಳ ಕಾಲ ಪ್ರಜ್ಞಾನ್ ರೋವರ್ ಭೂಮಿಗೆ ನಿರಂತರವಾಗಿ ಅನೇಕ ಮಾಹಿತಿಗಳನ್ನು ರವಾನಿಸಿತು. ಅಂದರೆ ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮ. ಹೀಗಾಗಿ ನಂತರ ಚಂದ್ರನಲ್ಲಿ ಕತ್ತಲಾಗುವುದರಿಂದ ಈ 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್​ ರೋವರ್​ ಮತ್ತು ವಿಕ್ರಮ್​ ಲ್ಯಾಂಡರ್​ ಸದ್ಯ ವಿಶ್ರಾಂತಿಗೆ ಜಾರಿಸಲಾಯಿತು. ಮುಂದೆ ಚಂದ್ರನಲ್ಲಿ ಬೆಳಕಾದಾಗ ಮತ್ತೆ ಇವು ಕಾರ್ಯರಂಭ ಮಾಡುತ್ತವೆ ಎಂಬ ಇಸ್ರೋ ಭರವಸೆ ನೆರವೇರಲಿಲ್ಲ. ಈ ಹಿನ್ನೆಲೆಯಲ್ಲಿ ಇಸ್ರೋಗೆ ಕೊಂಚ ನಿರಾಸೆಯುಂಟಾಯಿತು. ಆದರೀಗ ಮತ್ತೊಂದು ದೊಡ್ಡ ಆಘಾತ ಇಸ್ರೋಗೆ ಎದುರಾಗಿದೆ.

ಹೌದು, ವಿಕ್ರಮ್​ ಮತ್ತು ಪ್ರಗ್ಯಾನ್​ ಮೇಲೆ ಅಪಾಯಕಾರಿ ಮೈಕ್ರೊಮೀಟರಾಯ್ಡ್ ಪರಿಣಾಮ ಬೀರುವ ಸಾಧ್ಯತೆ. ಅದೇನೆಂದರೆ ಮೈಕ್ರೊಮೀಟರಾಯ್ಡ್ ಸಣ್ಣ ಕಣಗಳು ನಿರಂತರವಾಗಿ ಚಂದ್ರನ ಮೇಲ್ಮೈ ಮೇಲೆ ದಾಳಿ ಮಾಡಲಿದ್ದು, ವಿಕ್ರಮ್​ ಮತ್ತು ಪ್ರಗ್ಯಾನ್​ಗೆ ಅಪಾಯ ತಂದೊಡ್ಡಲಿವೆ. ಚಂದ್ರನ ವಾತಾವರಣ ಮತ್ತು ಆಮ್ಲಜನಕದ ಕೊರತೆಯು ಸವೆತವನ್ನು ತಡೆಯುತ್ತದೆ, ಈ ಸಣ್ಣ ಕಣಗಳಿಂದ ಸಂಭವನೀಯ ಹಾನಿ ಮತ್ತು ಚಂದ್ರನ ರಾತ್ರಿಯ ಸಮಯದಲ್ಲಿನ ವಿಪರೀತ ಚಳಿಯು ತುಂಬಾ ಕಳವಳಕಾರಿಯಾಗಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಇದನ್ನು ವಿವರಿಸಿದ್ದಾರೆ.

ಇಷ್ಟೇ ಅಲ್ಲದೆ ಚಂದ್ರನ ಮೇಲೆ ಯಾವುದೇ ವಾತಾವರಣ ಇಲ್ಲ. ಹೀಗಾಗಿ ಚಂದ್ರನ ಮೇಲ್ಮೈ ಮೇಲೆ ಅನೇಕ ಅಗ್ನಿಶಿಲೆಗಳು ಬೀಳುತ್ತವೆ. ಅಲ್ಲದೆ, ನೌಕೆಯ ಮೇಲೆ ನಿರಂತರ ಸೂರ್ಯನ ವಿಕಿರಣಗಳ ಬೀಳುವುದರಿಂದ ಲ್ಯಾಂಡರ್​ ಮತ್ತು ರೋವರ್​ ಸ್ಫೋಟ ಸಂಭವಿಸುವ ಸಾದ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಕೊಂಚ ತಳಮಳ ಉಂಟಾಗಿರಬಹುದು. ಆದರೆ ಭಾರತೀಯರಾದ ನಾವು ಈ ರೀತಿ ಆಗದಿರಲಿ, ನಮ್ಮ ಚಂದ್ರಯಾನ-3ಯ ಗುರುತು ಚಂದ್ರನಂಗಳದಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ಪ್ರಾರ್ಥಿಸೋಣ.

 

ಇದನ್ನು ಓದಿ: Tiger Claw Pendent: ಹುಲಿ ಉಗುರು ಪ್ರಕರಣ- ಮಹತ್ವದ ಸಂದೇಶ ರವಾನಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ

Leave A Reply

Your email address will not be published.