Emotional Mother: ಆಟೋದಲ್ಲಿ ಕೂತು ಕೂಗುವ ತನ್ನ ಕಂದನಿಗಾಗಿ ಐದಾರು ಕಿ.ಮೀ ಓಡಿದ ಹಸು – ಕರುಳಿನ ಸಂಬಂಧ ಕಂಡು ಕಣ್ಣೀರಾದ ಜನ

Emotional Mother: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವಳ ಋಣ ತೀರಿಸಲು ಕೂಡಾ ಸಾಧ್ಯವಿಲ್ಲ. ಇದೀಗ ಬುದ್ಧಿ ಜೀವಿ ಮನುಷ್ಯರನ್ನು ಮೀರಿ, ಒಂದು ಪ್ರಾಣಿಯಲ್ಲಿ ಕೂಡಾ ತನ್ನ ಕರುಳ ಕುಡಿಯ ಮೇಲಿನ ಪ್ರೀತಿಯನ್ನು ಕಾಣಬಹುದು.

ಹೌದು, ಆಟೋ ಚಾಲಕ ಮಾಲೀಕ ಶಬರಿನಾಥನ್ ಕರುವನ್ನು ಆಟೋದಲ್ಲಿ ಕೂರಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ತಾಯಿ ಹಸು ತನ್ನ ಕರುವನ್ನು ಮಾತ್ರ ಬಿಟ್ಟಿರಲಾರದೆ ಆಟೋ ಹಿಂದೆಯೇ ಓಡೋಡಿ ಬಂದಿದೆ. ಒಟ್ಟು ಆಟೋ ಹಿಂದೆ ಸುಮಾರು 5 ಕಿಲೋಮೀಟರ್ಗಿಂತ ಹೆಚ್ಚು ದೂರ ಓಡೋಡಿ ಬಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಕರುಣಾಜನಕ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ (Thanjavur Sekkadi In Tamil Nadu) ಬೆಳಕಿಗೆ ಬಂದಿದೆ. ತಮಿಳುನಾಡಿನ ತಂಜಾವೂರು ಸೆಕ್ಕಾಡಿ ಮೂಲದ ಶಬರಿನಾಥನ್ ಎಂಬ ವ್ಯಕ್ತಿ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದಾರೆ. ಇವರು ತಮ್ಮ ಮನೆಯಲ್ಲಿ ವೀರಲಕ್ಷ್ಮಿ ಎಂಬ ಹಸುವನ್ನು ಸಾಕಿದ್ದಾರೆ. ಎಂದಿನಂತೆ ಮೊನ್ನೆ ಸೋಮವಾರವೂ ಜಾನುವಾರುಗಳು ತೊಂಬನ್ ಗುಡಿ ಭಾಗದಲ್ಲಿ ಮೇವು ಮೇಯಲು ಹೋಗಿದ್ದವು. ಆದರೆ ಅದೇ ದಿನ ಸಂಜೆ ಆ ಹಸು ಕರುವಿಗೆ ಜನ್ಮ ನೀಡಿದೆ. ಆದರೆ ಬಹಳ ಹೊತ್ತಿನವರೆಗೆ ಹಸು ಬಾರದ ಹಿನ್ನೆಲೆಯಲ್ಲಿ ಹಸುವಿನ ಮಾಲೀಕ, ಆಟೋ ಚಾಲಕ ಹಲವೆಡೆ ಹುಡುಕಾಟ ನಡೆಸಿದಾಗ ಒಂದು ಸ್ಥಳದಲ್ಲಿ ತನ್ನ ಹಸುಗೂಸು ಜೊತೆಗೆ ಹಸು ಕಣ್ಣಿಗೆ ಬಿದ್ದಿದೆ. ನಂತರ ಆಟೋ ಆತ ಕರುವನ್ನು ಆಟೋದಲ್ಲಿ ಹಾಕಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ತಾಯಿ ಹಸು ತನ್ನ ಕರುಳ ಕುಡಿಯನ್ನು ಮಾತ್ರ ಬಿಟ್ಟಿರಲಾರದೆ ಆಟೋ ಹಿಂದೆಯೇ ಓಡೋಡಿಬಂದಿದೆ.

ಮಾಲೀಕ ಶಬರಿನಾಥನ್​ ದಾರಿ ಮಧ್ಯೆ ಹಸುವಿನ ಕಾಳಜಿ (Emotional Mother)ಅರ್ಥಮಾಡಿಕೊಂಡು ಕರುವನ್ನು ಆಟೋದಿಂದ ಇಳಿಸಿ, ಅದರ ಜೊತೆ ಇರಲು ಬಿಟ್ಟಿದ್ದಾರೆ. ಕೂಡಲೇ ತಾಯಿ ಹಸು, ತನ್ನ ಕಂದನನ್ನು ತಬ್ಬಿ, ಸ್ವಲ್ಪ ಹೊತ್ತು ಹಾಲುಣಿಸಿದೆ. ಅದಾದ ಮೇಲೆ ಆತ ಕರುವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುವ ಬದಲು, ಒಟ್ಟಿಗೆ ತಾಯಿ ಹಸುವಿನ ಜೊತೆಗೆ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಈ ತಾಯಿ ಮಗುವಿನ ದೃಶ್ಯ ನೋಡಿದವರಿಗೆ ಎಂತಹ ಕಲ್ಲು ಮನಸ್ಸು ಕೂಡಾ ಕರಗಬಲ್ಲದು.

 

ಇದನ್ನು ಓದಿ: HSRP Number Plate: ವಾಹನ ಮಾಲಿಕರಿಗೆ ಬೆಳ್ಳಂಬೆಳಗ್ಗೆಯೇ ಗುಡ್ ನ್ಯೂಸ್ – ನಂಬರ್ ಪ್ಲೇಟ್ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ !!

Leave A Reply

Your email address will not be published.