Heart Attack: ಇನ್ಮುಂದೆ ಹೃದಯಾಘಾತ, ಪಾರ್ಶ್ವವಾಯುವಿನ ಬಗ್ಗೆ ಬೇಡ ಭಯ – ಫ್ರೀಯಾಗೇ ಸಿಗ್ತಿದೆ ದುಬಾರಿ ಬೆಲೆಯ ಈ ಇಂಜೆಕ್ಷನ್!!

Important measure taken by health department to prevent the risk of heart attack and stroke latest updates

Heart Attack: ಆರೋಗ್ಯ ಇಲಾಖೆ (Health Department)ಪಾರ್ಶ್ವವಾಯು, ಹೃದಯಾಘಾತದ(Heart Attack)ಅಪಾಯ ತಡೆಗೆ ಮಹತ್ವದ ಕ್ರಮ ಕೈಗೊಂಡಿದೆ. ದುಬಾರಿ ಬೆಲೆಯ ಚುಚ್ಚುಮದ್ದುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುವ ಮೂಲಕ ರಾಜ್ಯದ ಜನತೆಗೆ ನೆರವಾಗಲು ಕ್ರಮ ಕೈಗೊಳ್ಳಲು ಮುಂದಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತದಿಂದHeart Attack ಸಾವಿನ(Death Case)ಕದ ತಟ್ಟುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ನಡುವೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹೃದಯ ಸ್ನಾಯುವಿನ ಸೋಂಕು ನಿವಾರಣೆ ಯೋಜನೆ(ಸ್ಟೆಮಿ) ಯನ್ನು ರಾಜ್ಯದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಈ ಯೋಜನೆಯಡಿ ಪಾರ್ಶ್ವವಾಯು, ಹೃದಯ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ರೋಗಿ ಪಾರ್ಶ್ವವಾಯುವಿಗೆ ತುತ್ತಾದ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರು ಮಾಡುವ ದೆಸೆಯಲ್ಲಿ ಅವಶ್ಯಕವಾದ ಹೆಚ್ಚಿನ ಬೆಲೆಯ ಚುಚ್ಚುಮದ್ದುಗಳನ್ನು (Injection)ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital)ಒದಗಿಸಲಾಗುತ್ತದೆ.

ಈ ಚುಚ್ಚುಮದ್ದುಗಳು ಸರ್ಕಾರಿ ವ್ಯವಸ್ಥೆಯಡಿ ನಿಮಾನ್ಸ್ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿಲ್ಲ. ಹೀಗಾಗಿ, ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿತ್ತು. ಪಾಶ್ವವಾಯು ನಿರ್ವಹಣೆಗೆ ಅಗತ್ಯವಿರುವ 60 ಸಾವಿರ ರೂ. ದರದ ಆರ್.ಟಿ. ಪ್ಲಸ್ ಚುಚ್ಚುಮದ್ದು, ಹೃದಯಾಘಾತ ನಿರ್ವಹಣೆಗೆ ನೀಡುವ 40 ಸಾವಿರ ರೂ. ದರದ ಟೆನೆಕ್ಟ್ ಪ್ಲಸ್ ಚುಚ್ಚುಮದ್ದುಗಳನ್ನು ಇನ್ನೂ ತಾಲೂಕು ಆಸ್ಪತ್ರೆಗಳಿಗೆ ಪೂರೈಸಲಾಗುತ್ತದೆ.ಪಾರ್ಶ್ವವಾಯು ಹೃದಯಾಘಾತಕ್ಕೆ ಒಳಗಾದವರ ಪರೀಕ್ಷೆ ನಡೆಸಿ ಚುಚ್ಚುಮದ್ದು ನೀಡಲಾಗುತ್ತದೆ. ಇದಕ್ಕಾಗಿ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸದೆ ಅವಶ್ಯಕತೆಯಿರುವ ಎಲ್ಲರಿಗೂ ಸ್ಟೆಮಿ ಯೋಜನೆಯಡಿ ಚುಚ್ಚುಮದ್ದನ್ನು ಉಚಿತವಾಗಿ ಆರೋಗ್ಯ ಇಲಾಖೆ ಒದಗಿಸುತ್ತದೆ.

Leave A Reply

Your email address will not be published.