Ghaziabad : ‘ಜೈ ಶ್ರೀರಾಮ್’ ಎಂದ ವಿದ್ಯಾರ್ಥಿಗೆ ಕಾಲೇಜಿಂದ ಗೇಟ್ ಪಾಸ್- ಕೆಲವೇ ನಿಮಿಷಗಳಲ್ಲಿ ಕಾಲೇಜ್ ವೆಬ್ ಸೈಟ್’ನಲೆಲ್ಲಾ ರಾರಾಜಿಸಿದವು ‘ಜೈ ಶ್ರೀರಾಮ್’ ಬರಹಗಳು !!

surprise within minutes of sending a student out of the college saying 'Jai Shriram'

Ghaziabad : ಕಾಲೇಜು ಒಂದರಲ್ಲಿ ನಡೆದ ಫೆಸ್ಟ್ ಒಂದರಲ್ಲಿ ವಿದ್ಯಾರ್ಥಿಯೊಬ್ಬ ಜೈ ಶ್ರೀರಾಮ್ ಎನ್ನುವ ಘೋಷಣೆ ಮೂಲಕ ಭಾಷಣ ಆರಂಭಿಸಿದ್ದಾನೆ. ಆಗ ಕೂಡಲೇ ಎಚ್ಚೆತ್ತ ಕಾಲೇಜಿನ ಪ್ರೊಫೆಸರ್ ಒಬ್ಬರು ಆತನಿಗೆ ಗೇಟ್ ಪಾಸ್ ಮಾಡಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ವಿಚಿತ್ರ ಘಟನೆಯೊಂದು ನಡೆದು ಹೋಗಿದ್ದು, ಕಾಲೇಜಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಘಾಜಿಯಾಬಾದ್(Ghaziabad) ನ ಎಬಿಇಎಸ್ ಎಂಜಿನೀಯರಿಂಗ್ ಕಾಲೇಜು ಫೆಸ್ಟ್ ನ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜೈ ಶ್ರೀ ರಾಮ್ ಎಂದು ವಿದ್ಯಾರ್ಥಿಯೊಬ್ಬ ಮಾತು ಆರಂಭಿಸಿದ್ದು, ಆತನನ್ನು ಕಾಲೇಜಿನ ಪ್ರೋಫೆಸರ್ ಮಮತಾ ಗೌತಮ್ ವೇದಿಕೆಯಿಂದಲೇ ಹೊರಕ್ಕೆ ಕಳುಹಿಸುವ ಮೂಲಕ ಕಾಲೇಜು ಭಾರಿ ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇದೀಗ ಈ ಘಟನೆ ವಿರುದ್ದ ಪ್ರತಿಭಟನೆ ತೀವ್ರಗೊಂಡಿದೆ.

ಇನ್ನು ವಿಚಿತ್ರ ಎಂದರೆ ಈ ಘಟನೆಯ ಬೆನ್ನಲ್ಲೇ ಕಾಲೇಜಿನ ಅಧಿಕೃತ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಲಾಗಿದ್ದು, ವೆಬ್‌ಸೈಟ್‌ನ ಮುಖಪುಟದಲ್ಲಿ ಜೈಶ್ರೀರಾಮ್ ಎಂದು ಬರೆದು ಶ್ರೀರಾಮ ಗ್ರಾಫಿಕ್ ಇಮೇಜ್ ಹಾಕಲಾಗಿದೆ. ಇಷ್ಟೇ ಅಲ್ಲ ಪ್ರೊಫೆಸರ್ ಮಮತಾರನ್ನು ಶೂರ್ಪನಖಿಗೆ ಹೋಲಿಕೆ ಮಾಡಿರುವ ಫೋಟೋವನ್ನು ಹಾಕಲಾಗಿದೆ. ಈ ಮೂಲಕ ಕಾಲೇಜು ತಾನೇ ವಿವಾದವನ್ನು ಮುಮೇಲೆ ಎಳೆದುಕೊಂಡಿದೆ.

ಅಂದಹಾಗೆ ಈ ಕುರಿತಂತೆ ವಿಡಿಯೋ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಕ್ಟೋಬರ್ 20 ರಂದು ಎಬಿಇಎಸ್ ಕಾಲೇಜು ಫೆಸ್ಟ್ ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಳ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಜ್ಜಾಗಿತ್ತು. ವೇದಿಕೆಗೆ ಆಗಮಿಸಿದ ವಿದ್ಯಾರ್ಥಿ ಮಾತು ಆರಂಭಿಸುವ ಮೊದಲು ಜೈ ಶ್ರೀರಾಂ ಎಂದಿದ್ದಾನೆ. ಇತ್ತ ನೆರೆದಿದ್ದ ಅಷ್ಟೂ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಜೈಶ್ರೀರಾಂ ಎಂದು ಕೂಗಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಪ್ರೊಫೆಸರ್ ಈ ರೀತಿ ಮಾಡಿದ್ದಾರೆ.

 

https://x.com/AskAnshul/status/1715434842945732670?t=33aeijneu9_wUg7zPJNkMw&s=08

ಇದನ್ನು ಓದಿ: Heart Attack: ಇನ್ಮುಂದೆ ಹೃದಯಾಘಾತ, ಪಾರ್ಶ್ವವಾಯುವಿನ ಬಗ್ಗೆ ಬೇಡ ಭಯ – ಫ್ರೀಯಾಗೇ ಸಿಗ್ತಿದೆ ದುಬಾರಿ ಬೆಲೆಯ ಈ ಇಂಜೆಕ್ಷನ್!!

Leave A Reply

Your email address will not be published.