Health Tips: ರಾತ್ರಿ ತುಂಬಾ ಲೇಟ್ ಆಗಿ ಮಲಗ್ತೀರಾ ?! ಹಾಗಿದ್ರೆ ಈ ಕಾಯಿಲೆ ಬರೋದು ಫಿಕ್ಸ್ ಬಿಡಿ !

Health Tips Do you sleep too late at night then this problem is arise

Health Tips: ರಾತ್ರಿ ತುಂಬಾ ಲೇಟಾಗಿ ಮಲಗೋದು ಆರೋಗಕ್ಕೆ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಅಧ್ಯಯನದ ಪ್ರಕಾರ, ಪ್ರತಿದಿನ 1.5 ಗಂಟೆಗಳ ತಡವಾಗಿ ಮಲಗುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ (Health Tips).

ನಿದ್ರಾಹೀನತೆಯು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಮಲಗುವವರಿಗೆ ಹೃದ್ರೋಗ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವು ಕಂಡುಹಿಡಿದಿದೆ. ನಿದ್ರೆಯ ಕೊರತೆಯು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಅತಿಯಾದ ಒತ್ತಡವು ನಿದ್ರೆಯ ಸಮಸ್ಯೆಗಳನ್ನ ಉಂಟು ಮಾಡಬಹುದು. ಆದ್ದರಿಂದ, ಒತ್ತಡವನ್ನ ನಿರ್ವಹಿಸುವುದು ಬಹಳ ಮುಖ್ಯ. ಧ್ಯಾನ, ಯೋಗ, ವಾಕಿಂಗ್ ಇತ್ಯಾದಿ ನಿಮ್ಮ ಒತ್ತಡವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ವ್ಯಾಯಾಮ ಮುಖ್ಯ, ವ್ಯಾಯಾಮವು ದೇಹವನ್ನ ಆರೋಗ್ಯವಾಗಿರಿಸುತ್ತದೆ. ಅಲ್ಲದೇ, ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಆದ್ರೆ, ವ್ಯಾಯಾಮದ ನಂತರ ತಕ್ಷಣ ಮಲಗುವುದು ತಪ್ಪು.

ನಿದ್ರೆಯ ವಿಳಂಬವು ಸೆಲ್ಯುಲಾರ್ ಹಾನಿ, ಉರಿಯೂತ ಮತ್ತು ಹೃದ್ರೋಗದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ, ಉತ್ತಮ ನಿದ್ರೆ ಪಡೆಯಿರಿ. ಮಲಗುವ ಮುನ್ನ ಫೋನ್ ಬಳಸುವ ಅಭ್ಯಾಸ ನಮಗಿದೆ. ಅದರಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಗೆ ಭಂಗ ತರುತ್ತದೆ, ಫೋನ್ ಬಳಸುವುದರಿಂದ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ. ಆದ್ದರಿಂದ ಮಲಗುವ ಒಂದು ಗಂಟೆ ಮೊದಲು ಫೋನ್ ಬಳಸುವುದನ್ನ ನಿಲ್ಲಿಸಿ.

ಇದನ್ನೂ ಓದಿ: Gruhalakshmi Scheme: ಈ ತಿಂಗಳಲ್ಲಿ ಗೃಹಲಕ್ಷ್ಮೀ ಅರ್ಜಿ ಹಾಕಿರೋರಿಗೆ ಬಂತು ಬಿಗ್ ಅಪ್ಡೇಟ್ !! ನೀವು ಯಾವಾಗ ಹಾಕಿದ್ದು? ಈಗಲೇ ಚೆಕ್ ಮಾಡಿ !

Leave A Reply

Your email address will not be published.