Kitchen Hacks: ಮನೆಗೆ ನಿಂಬೆಹಣ್ಣು ತಂದ್ರೆ ಬೇಗ ಹಾಳಾಗ್ತಿದಿಯಾ ?! ಇದೊಂದು ಟ್ರಿಕ್ಸ್ ಯೂಸ್ ಮಾಡಿ, ಎಷ್ಟೂ ದಿನ ಇಟ್ರು ಹಾಳಾಗದಂತೆ ಕಾಪಾಡಿ

Kitchen Hacks: ಮನೆಯಲ್ಲಿ ಹೆಚ್ಚಾಗಿ ನಿಂಬೆ ಹಣ್ಣನ್ನು ದಿನನಿತ್ಯದ ಅಡುಗೆಗಳಲ್ಲಿ , ಅದೇ ರೀತಿ, ವಿವಿಧ ಜ್ಯೂಸ್ಗಳಲ್ಲಿ ಬಳಕೆ ಮಾಡಲಾಗುತ್ತದೆ. ನಿಂಬೆ (Lemon), ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಗುಣಲಕ್ಷಣಗಳು ಮತ್ತು ಪೋಷಕಾಂಶಗಳನ್ನು ಒಳಗೊಂಡು ಸಮೃದ್ಧವಾಗಿದೆ. ಇದಲ್ಲದೆ, ತೂಕ ಇಳಿಸುವ ಪಾನೀಯಗಳಿಂದ ಹಿಡಿದು ಸಲಾಡ್‌ಗಳಿಗೆ ಪರಿಮಳವನ್ನು ಸೇರಿಸುವವರೆಗೆ ನಿಂಬೆ ಹಣ್ಣನ್ನು ಬಳಕೆ ಮಾಡುವುದು ಸಹಜ. ಆದರೆ, ನೀವು ಹೆಚ್ಚು ನಿಂಬೆಯನ್ನು ಮನೆಗೆ ತಂದಿಟ್ಟರೆ ಬಹು ಬೇಗನೇ ಹಾಳಾಗುತ್ತದೆ. ಹೇಗೆ ನಿಂಬೆ ಕೆಡದಂತೆ ಶೇಖರಣೆ ಮಾಡೋದು ಎಂದು ಚಿಂತಿಸುತ್ತಿದ್ದರೆ, ಈ ಕೆಲವು ಕಿಚನ್‌ ಟ್ರಿಕ್ಸ್ (Kitchen Tricks)ಅನುಸರಿಸಿದರೆ ದೀರ್ಘಕಾಲದವರೆಗೆ ನಿಂಬೆ ಹಾಳಾಗದೆ ಫ್ರೆಶ್ (Fresh) ಆಗಿರುವಂತೆ ಮಾಡಬಹುದು.

ನಿಂಬೆ ಹಣ್ಣನ್ನು ಹೇಗೆ ಸಂಗ್ರಹಿಸಬೇಕು ಎಂಬುದು ತಿಳಿಯದೇ ಅದೆಷ್ಟೋ ಬಾರಿ ಮನೆಗೆ ನಿಂಬೆ ತಂದಿಟ್ಟು ಬೇಗ ಹಾಳಾಗಿ ಬಿಟ್ಟಿರಬಹುದು.ಹೀಗಾಗಿ, ನಿಂಬೆಯನ್ನು ದೀರ್ಘಕಾಲದವರೆಗೆ ತಾಜಾ (Fresh)ವಾಗಿಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ:

# ಈ ರೀತಿ ಫ್ರಿಜ್ ನಲ್ಲಿ ಸಂಗ್ರಹಿಸಿ
ನಿಂಬೆಯನ್ನು ಫ್ರಿಡ್ಜ್ ನಲ್ಲಿ ಸರಿಯಾಗಿ ಸಂಗ್ರಹಿಸದೆ ಇದ್ದರೆ, ರೆಫ್ರಿಜರೇಟರ್‌ನಲ್ಲಿಯೂ ಕೂಡ ನಿಂಬೆ ಒಣಗುತ್ತದೆ. ಹೀಗಾಗಿ, ಮೊದಲು ನಿಂಬೆಹಣ್ಣುಗಳನ್ನು ಪ್ರತ್ಯೇಕವಾಗಿ ಪೇಪರ್‌ನಲ್ಲಿ ಕಟ್ಟಿ ಇಟ್ಟು ಆ ಬಳಿಕ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ, ರೆಫ್ರಿಜರೇಟರ್‌ನಲ್ಲಿ ಇರಿಸಬೇಕು. ಹೀಗೆ ಮಾಡುವುದರಿಂದ ನಿಂಬೆ ಫ್ರೆಶ್ ಆಗಿರುತ್ತದೆ.

ರೆಫ್ರಿಜರೇಟರ್ ಇಲ್ಲದೆ ನಿಂಬೆ ಸಂಗ್ರಹಿಸುವುದು ಹೇಗಪ್ಪಾ?? ಎಂದು ನೀವು ಕೇಳಬಹುದು!! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ, ನಿಂಬೆಯನ್ನು ಹೆಚ್ಚು ಕಾಲ ತಾಜಾವಾಗಿಡಲು ಈ ಟ್ರಿಕ್ಸ್ ಫಾಲೋ ಮಾಡಿ!! ಒಂದು ಜಾರ್‌ನಲ್ಲಿ ನೀರು, ಉಪ್ಪು ಮತ್ತು ಜೇನುತುಪ್ಪದ ಮಿಶ್ರಣವನ್ನು ತಯಾರಿಸಿ ಮತ್ತು ನಿಂಬೆಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ಅದರಲ್ಲಿ ಇರಿಸಬೇಕು. ಇದಾದ 10-12 ಗಂಟೆಗಳ ಬಳಿಕ, ಈ ಮಿಶ್ರಣವನ್ನು ಪ್ರತ್ಯೇಕಿಸಿ, ನಿಂಬೆಯನ್ನು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇಟ್ಟು, ನಿಮ್ಮ ಅವಶ್ಯಕತೆ ಅನುಸಾರ ಬಳಸಿ.

# ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಿ
ನಿಂಬೆಹಣ್ಣನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ನಿಂಬೆ ಹಣ್ಣನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿಡಬೇಕು. ಈ ರೀತಿ ಮಾಡುವುದರಿಂದ ನಿಂಬೆ ತೇವಾಂಶ ಉಳಿಯದು. ಹೀಗಾಗಿ, ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

# ನಿಂಬೆ ಮೇಲೆ ಎಣ್ಣೆಯನ್ನು ಹಚ್ಚಿ
ನೀವು ಒಂದೇ ಬಾರಿಗೆ ಹಲವಾರು ನಿಂಬೆಹಣ್ಣುಗಳನ್ನು ಖರೀದಿ ಮಾಡಿದ್ದರೆ, ಸಾಸಿವೆ ಅಥವಾ ಸಂಸ್ಕರಿಸಿದ ಎಣ್ಣೆಯನ್ನು ನಿಂಬೆಯ ಮೇಲೆ ಬಳಸಿ ದೀರ್ಘಕಾಲದವರೆಗೆ ನಿಂಬೆ ತಾಜಾ ಇರುವಂತೆ ಮಾಡಬಹುದು. ಇದನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿ ಫ್ರಿಜ್ ಇಲ್ಲವೇ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಂಬೆ ಹಾಳಾಗದೆ ತಾಜಾವಾಗಿರುತ್ತದೆ.

 

ಇದನ್ನು ಓದಿ: ತಲೆ ಕೂದಲು ಉದುರುವಿಕೆಗೆ ರೋಸಿ ಹೋಗಿದ್ದೀರಾ ?! ಇಂದಿನಿಂದಲೇ ನೀವು ಮಾಡೋ ಈ 3 ಕೆಲಸ ನಿಲ್ಲಿಸಿ, ಎರಡೇ ದಿನದಲ್ಲಿ ಆಗೋ ಚಮತ್ಕಾರ ನೋಡಿ

Leave A Reply

Your email address will not be published.