Dakshina kannada: ಕೆರೆಗೆ ಬಿದ್ದು ಮಹಿಳೆ ಮೃತ್ಯು

Share the Article

ಪುತ್ತೂರು : ಎಡಮಂಗಲ ಗ್ರಾಮದ ಕೇರ್ಪಡ ಸುಂದರ ಗೌಡರ ತೋಟದಲ್ಲಿರುವ ಕೆರೆಗೆ ಮಹಿಳೆಯೋರ್ವರು ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಬೆಳಿಗ್ಗೆ ಮನೆಯವರು ತೋಟಕ್ಕೆ ಅಡಿಕೆ ಹೆಕ್ಕಲೆಂದು ಹೋದಾಗ ಮೃತದೇಹ ತೇಲುತ್ತಿರುವುದು ಕಂಡುಬಂತು. ನಂತರ ಊರವರು ಸ್ಥಳಕ್ಕೆ ಆಗಮಿಸಿದ್ದು, ನಂತರ ಮೃತರ ಗುರುತು ಪತ್ತೆ ಹಚ್ಚಲಾಯಿತು.

ಮೃತರನ್ನು ಕೇರ್ಪಡ ದಿ. ಹುಕ್ರ ಎಂಬವರ ಪತ್ನಿ ಗಿರಿಜಾ (50 ವ.) ಎಂದು ಗುರುತಿಸಲಾಗಿದೆ. ಗಿರಿಜಾ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ಪುತ್ರ ಲೋಕೇಶ್ ಎಂಬವರನ್ನು ಅಗಲಿದ್ದಾರೆ.

 

ಇದನ್ನು ಓದಿ: Kitchen Hacks: ಮನೆಗೆ ನಿಂಬೆಹಣ್ಣು ತಂದ್ರೆ ಬೇಗ ಹಾಳಾಗ್ತಿದಿಯಾ ?! ಇದೊಂದು ಟ್ರಿಕ್ಸ್ ಯೂಸ್ ಮಾಡಿ, ಎಷ್ಟೂ ದಿನ ಇಟ್ರು ಹಾಳಾಗದಂತೆ ಕಾಪಾಡಿ

Leave A Reply