Bank FD-Post Office FD: ಹಣ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬೇಕೇ ?! ಹಾಗಿದ್ರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಡೆಪಾಸಿಟ್ ನಲ್ಲಿ ಯಾವುದಕ್ಕೆ ಸಿಗುತ್ತೆ ಹೆಚ್ಚು ಬಡ್ಡಿ ?!

Business news in which we get high interest Bank FD or post office FD here is detail

 

Bank FD-Post Office FD:ಭವಿಷ್ಯದಲ್ಲಿ ಯಾವುದೇ ಅಪಾಯವಿಲ್ಲದೆ, ಅಧಿಕ ಬಡ್ಡಿ ಸಿಗುವ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದು ಮುಖ್ಯ. ಅದರಲ್ಲೂ ಹಣದ ಹೂಡಿಕೆ ಎಂದಾಗ ಎಲ್ಲರೂ ಫಿಕ್ಸಿಡ್ ಡೆಪಾಸಿಟ್ ನ್ನು (Fixed deposit) ಆಯ್ಕೆ ಮಾಡುತ್ತಾರೆ. ಆದರೆ ಠೇವಣಿಗಳನು ಹೇಗೆ ಎಲ್ಲಿ ಇಡಬೇಕು , ಎಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹಾಗಿರುವಾಗ ನಮ್ಮ ಮುಂದೆ ಬರುವ ಆಯ್ಕೆಗಳು ಬ್ಯಾಂಕ್ ಎಫ್‌ಡಿ, ಅಂಚೆ ಕಚೇರಿ ಹೂಡಿಕೆಗಳು(Bank FD-Post Office FD) ಆಗಿದೆ.

ಮೂಲತಃ ಅಂಚೆ ಕಚೇರಿ ಡೆಪಾಸಿಟ್ ಸೇರಿದಂತೆ ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರವು ಇತ್ತೀಚೆಗೆ ಪರಿಷ್ಕರಿಸಿದೆ. ಆರ್‌ಬಿಐ ತನ್ನ ರೆಪೋ ದರವನ್ನು ಸತತವಾಗಿ ಮೂರು ಬಾರಿ ಸ್ಥಿರವಾಗಿರಿಸಿದೆ. ಇದಾದರೂ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಸ್ವಲ್ಪ ಸಮಯದವರೆಗೆ ಸ್ಥಿರವಾಗಿರಿಸಿದೆ.

ಬ್ಯಾಂಕ್ ಎಫ್‌ಡಿ, ಅಂಚೆ ಕಚೇರಿ ಡೆಪಾಸಿಟ್ ಬಡ್ಡಿದರ ಹೋಲಿಕೆ ಮಾಡಿದರೆ, ಅಂಚೆ ಕಚೇರಿಗಳು ಡೆಪಾಸಿಟ್‌ಗಳ ಅವಧಿಯ ಆಧಾರದ ಮೇಲೆ ಶೇಕಡ 7.5 ರವರೆಗಿನ ಟರ್ಮ್ ಡೆಪಾಸಿಟ್ ಬಡ್ಡಿದರವನ್ನು ನೀಡುತ್ತದೆ. ಒಂದು ವರ್ಷದ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳು ಪ್ರಸ್ತುತ ಶೇಕಡ 6.9 ಆಗಿದೆ. 2 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗೆ ಶೇಕಡ 7.0, 3 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳ ಮೇಲೆ ಶೇಕಡ 7 ಮತ್ತು 5 ವರ್ಷಗಳ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳು ಶೇಕಡ 7.5 ರಷ್ಟಿದೆ.

ಮತ್ತೊಂದೆಡೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಪಾಸಿಟ್ ಅವಧಿ ಮತ್ತು ಡೆಪಾಸಿಟ್‌ದಾರರ ಸಮಯ ಅವಲಂಬಿಸಿ ಎಫ್‌ಡಿಯಲ್ಲಿ ಶೇಕಡ 7.75 ರಷ್ಟು ಬಡ್ಡಿದರಗಳನ್ನು ನೀಡುತ್ತಿದೆ. ಎಸ್‌ಬಿಐ ವಾರ್ಷಿಕವಾಗಿ ಶೇಕಡ 7.50 ರವರೆಗೆ ಎಫ್‌ಡಿ ದರಗಳನ್ನು ನೀಡುತ್ತಿದೆ. ಪಿಎನ್‌ಬಿ ವರ್ಷಕ್ಕೆ ಶೇಕಡ 7.75 ವರೆಗೆ ಬಡ್ಡಿದರ ನೀಡುತ್ತಿದೆ. ಐಸಿಐಸಿಐ ಬ್ಯಾಂಕ್ ವಾರ್ಷಿಕವಾಗಿ ಶೇಕಡ 7.60 ರವರೆಗೆ ಎಫ್‌ಡಿ ದರಗಳನ್ನು ನೀಡುತ್ತಿದೆ.

ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ತನ್ನ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ ಮಾಡುವಾಗ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಆದರೆ ಭವಿಷ್ಯದಲ್ಲಿ ರೆಪೋ ದರ ಪರಿಷ್ಕರಣೆ ಮಾಡಬಹುದು. ರೆಪೋ ಹೆಚ್ಚಾದರೆ, ಬಡ್ಡಿದರವೂ ಕೂಡಾ ಹೆಚ್ಚಳವಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೇ ಬರಲಿದೆ ‘ಅನ್ನಭಾಗ್ಯ’ದ ಅಕ್ಕಿ – ಆದ್ರೆ ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ

Leave A Reply

Your email address will not be published.