Annabhagya Yojana: ಕೆಲವೇ ದಿನಗಳಲ್ಲಿ ಮನೆ ಬಾಗಿಲಿಗೇ ಬರಲಿದೆ ‘ಅನ್ನಭಾಗ್ಯ’ದ ಅಕ್ಕಿ – ಆದ್ರೆ ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ

Karnataka government news Congress guarantee free delivery service of Anna Bhagya scheme rice

Annabhagya Yojana: ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ (Annabhagya Yojana) ಜಾರಿಗೆ ಮಾಡಿದ್ದರು. ಇದೀಗ ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಅನುಕೂಲಕರವಾದ ಜನಸ್ನೇಹಿ ವ್ಯವಸ್ಥೆಯನ್ನು ಜನರಿಗೆ ಒದಗಿಸಲು ಮುಂದಾಗಿದ್ದಾರೆ. ಹೌದು, ಅನ್ನಭಾಗ್ಯದ ಉಚಿತ ಅಕ್ಕಿ ಜೊತೆಗೆ ಶೀಘ್ರದಲ್ಲಿಯೇ ಅನ್ನಭಾಗ್ಯ ಡೋರ್ ಡೆಲಿವರಿ ಸರ್ವಿಸ್ ಸಿಗಲಿದ್ದು ರಾಜ್ಯದ ಜನರಿಗೆ ಕಾಂಗ್ರೆಸ್‌ ಸರ್ಕಾರದಿಂದ ಹೊಸ ಉಡುಗೊರೆ ದೊರೆಯಲಿದೆ.

ಮಾಹಿತಿ ಪ್ರಕಾರ, 5 ಕೆಜಿ ಅಕ್ಕಿ ಬದಲು ದುಡ್ಡು ಹಾಕುವ ಅನ್ನಭಾಗ್ಯ ಹಣದ ಯೋಜನೆ ಈ ತಿಂಗಳು ಮುಂದುವರೆಯುವ ಸಾಧ್ಯತೆ ಇದೆ. ಇದರ ಮಧ್ಯೆ ಶೀಘ್ರದಲ್ಲಿಯೇ ಅನ್ನಭಾಗ್ಯದ ಡೋರ್‌ ಡೆಲಿವರಿ ಸರ್ವಿಸ್ ಆರಂಭವಾಗಲಿದೆ. ಸದ್ಯ ಈ ಅನ್ನಭಾಗ್ಯದ ಡೋರ್‌ ಡೆಲಿವರಿ ಎಲ್ಲರಿಗೂ ಈ ಸೇವೆ ಲಭ್ಯ ಇರುವುದಿಲ್ಲ. ಬದಲಾಗಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಹಾಗೂ ಅವರು ಮನೆಯಲ್ಲಿ ಒಬ್ಬರೇ ಇದ್ದರೆ ಅಂದರೆ ಪಡಿತರ ಚೀಟಿ ಪ್ರಕಾರ ಒಬ್ಬರೇ ಸದಸ್ಯರಾಗಿದ್ದರೆ, ಅವರ ಮನೆಬಾಗಿಲಿಗೆ ಅನ್ನಭಾಗ್ಯದ ಅಕ್ಕಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಇತರ ಸೌಲಭ್ಯವನ್ನು ತಲುಪಿಸುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯಾದ್ಯಂತ ಕೆಲವೇ ದಿನದಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದೆ. ಸದ್ಯ ಕರ್ನಾಟಕದಲ್ಲಿ ಒಟ್ಟು 10 ಸಾವಿರ ರೇಷನ್ ಕಾರ್ಡ್‌ನಲ್ಲಿ 60 ವರ್ಷ ಮೇಲ್ಪಟ್ಟ ಏಕಸದಸ್ಯರಿರುವ ಪಡಿತರ ಚೀಟಿ ಹೊಂದಿರುವವರು ಇದ್ದಾರೆ. ಈ ತಿಂಗಳಲ್ಲಿಯೇ ಈ ಯೋಜನೆ ಜಾರಿಗೆ ತರಲು ಆಹಾರ ಇಲಾಖೆ ಚಿಂತನೆ ನಡೆಸಿದೆ.

ಇದನ್ನೂ ಓದಿ: Deadly Accident: ಊಟಕ್ಕೆಂದು ಹೊರಗೆ ಬಂದಿದ್ದ ಸ್ನೇಹಿತರಿಗೆ ಯಮರೂಪದಲ್ಲಿ ಬಂದ ಲಾರಿ! ಸ್ಥಳದಲ್ಲೇ ನಾಲ್ವರು ಗೆಳೆಯರ ಸಾವು!!

1 Comment
Leave A Reply

Your email address will not be published.