K S Bhagavan: ಒಕ್ಕಲಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಭಗವಾನ್ ಗೆ ಬಿಗ್ ಶಾಕ್

Karnataka news KS Bhagavan okkaliga community controversy Bhagwan out from Mysuru Dasara poetry festival

KS Bhagavan controversy : ಕೆಲವು ದಿನಗಳ ಹಿಂದಷ್ಟೇ, ಮೈಸೂರಿನ ಪುರಭವನದ ಆಭರಣದಲ್ಲಿ ನಡೆದ ‘ಮಹಿಷ ದಸರಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್ ಅವರು ಒಕ್ಕಲಿಗರ ಕುರಿತು ವಿವಾದಾತ್ಮಕ (KS Bhagavan controversy) ಹೇಳಿಕೆಯನ್ನು ನೀಡಿ ಚರ್ಚೆಗೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಭಗವಾನ್ ಅವರಿಗೆ ಬಿಗ್ ಶಾಕ್ ನೀಡಿದೆ.

ಹೌದು, ಒಕ್ಕಲಿಗರು ಸಂಸ್ಕೃತಿ ಇಲ್ಲದವರು, ಪಶುಗಳಿಗೆ ಸಮ ಎಂದು ಕುವೆಂಪು ಅವರು ಉಲ್ಲೇಖಿಸಿದ್ದಾರೆ ಎಂದು ಮಹಿಷ ದಸಾರದಲ್ಲಿ ಹೇಳಿಕೆ ನೀಡಿ, ನಾಡಿನ ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಕೆ ಎಸ್ ಭಗವಾನ್ ಅವರಿಗೆ ಇದೀಗ ಬಿಗ್ ಶಾಕ್ ಉಂಟಾಗಿದ್ದು, ದಸರಾ ಪ್ರಯುಕ್ತ ನಡೆಯಬೇಕಿದ್ದ ಕವಿಗೋಷ್ಟಿಯಿಂದ ಅವರಿಗೆ ಕೋಕ್ ನೀಡಲಾಗಿದೆ.

ಅಂದಹಾಗೆ ನಾಡಹಬ್ಬ ದಸರಾ ಪ್ರಯುಕ್ತ ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ವಿಜಯನಗರ ಮೊದಲ ಹಂತದಲ್ಲಿರುವ ಕಸಪಾ ಭವನದಲ್ಲಿ ಅ.16ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ದಸರಾ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಕವಿಗೋಷ್ಠಿಗೆ ಪ್ರೊ.ಭಗವಾನರು ಚಾಲನೆ ನೀಡಬೇಕಿತ್ತು. ಆದರೆ ಸಮಿತಿಯು ಉದ್ಘಾಟಕರಾಗಿ ಪಾಲ್ಗೊಳ್ಳಬೇಕಿದ್ದ ವಿವಾದದ ಸುಳಿಯಲ್ಲಿ ಸಿಲುಕಿರುವ ಭಗವಾನ್‌ ಹೆಸರನ್ನು ಕೈಬಿಟ್ಟು ಅವರ ಬದಲಿಗೆ ಜನಪದ ತಜ್ಞರಾದ ಡಾ.ಡಿ.ಕೆ.ರಾಜೇಂದ್ರ ಅವರ ಹೆಸರನ್ನು ಸೇರಿಸಲಾಗಿದ್ದು, ಅವರು ಸೋಮವಾರ ನಡೆಯುವ ದಸರಾ ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: Health Tips: ನಿತ್ಯವೂ ಕಾಫಿ ಕುಡುದ್ರೆ ಸಣ್ಣ ಆಗ್ತಾರಾ ?! ಏನ್ ಹೇಳುತ್ತೆ ಸೈನ್ಸ್ ?!

Leave A Reply

Your email address will not be published.