Hike bus ticket fare: ಬಸ್ ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ – ಟಿಕೆಟ್ ದರದಲ್ಲಿ ದುಪ್ಪಟ್ಟು ಏರಿಕೆ !!

Karnataka news hike bus ticket fare ticket price increase in buses latest news

Hike bus ticket fare: ನಾಡಹಬ್ಬದ ಸರ ಪ್ರಯುಕ್ತ ರಾಜ್ಯ ಸರ್ಕಾರವು ಜನರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತಿದೆ. ಅದೇ ರೀತಿ ಕೆ ಎಸ್ ಆರ್ ಟಿ ಸಿ(KSRTC) ಸಂಸ್ಥೆಯು ಕೂಡ ಜನರು ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಬಸ್ ಗಳನ್ನು ನೀಡಿ ಹಾಗೂ ರಿಯಾರಿತಿ ದರದಲ್ಲಿ ಟಿಕೆಟ್ ಅನ್ನು ಕೊಡುವ ಮೂಲಕ ಅನುಕೂಲ ಮಾಡಿಕೊಡುತ್ತಿದೆ. ಆದರೆ ಈ ಬೆನ್ನೆಲ್ಲೇ ಖಾಸಗೀ ವಾಹನಗಳು ತಮ್ಮ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದೆ.

ಹೌದು, ದಸರಾ ಹಬ್ಬದ ರಜೆ (Dasara festival holiday) ಶುರುವಾಯ್ತು. ಹೀಗಾಗಿ ಒಂದೆಡೆ ಸರ್ಕಾರಿ ಬಸ್ ಗಳ ಜನರಿಗೆ ಅನುಕೂಲ ಮಾಡಿಕೊಟ್ರೆ ಮತ್ಯೊಂದೆಡೆ ದಸರಾ ನೆಪದಲ್ಲಿ ಖಾಸಗಿ ಬಸ್‌ಗಳು (Private bus) ತಮ್ಮ ಟಿಕೆಟ್ ದರವನ್ನು ದುಪ್ಪಟ್ಟು(hike bus ticket fare) ಮಾಡಿಕೊಂಡು ಜನರನ್ನು ಸುಲಿಗೆ ಮಾಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಅಕ್ಟೋಬರ್ 20 ರಿಂದ 26ರ ವರೆಗೆ ಜನರ ಜೇಬಿಗೆ ಕತ್ತರಿ ಹಾಕಲು ರೆಡಿಯಾಗಿವೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಅಂತಾ ಬಸ್ ಟಿಕೆಟ್ ಬುಕ್ಕಿಂಗ್‌ಗೆ ಮುಂದಾವರಿಗೆ ಖಾಸಗೀ ಬಸ್ ಗಳು ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ.

ಅಂದಹಾಗೆ ದುಪ್ಪಟ್ಟು ದರ ವಸೂಲಿ ಮಾಡಿದರೆ ಪರ್ಮೀಟ್ ರದ್ದು ಎಚ್ಚರಿಕೆ ಸಾರಿಗೆ ಇಲಾಖೆ ಕೊಡುತ್ತಲೇ ಬಂದರೂ ಕ್ಯಾರೆ ಎನ್ನದ ಬಸ್ ಮಾಲೀಕರು ಈಗ ದಸರಾಗೆ ಕೂಡ ದರ ಏರಿಕೆ ಮಾಡಿದ್ದು, ಇವರಿಗೆ ಹೇಳೋರಿಲ್ಲ ಕೇಳೋರಿಲ್ಲ ಅನ್ನೋ ಹಾಗಾಗಿದೆ. ಮುಖ್ಯವಾಗಿ ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್​ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹೆಚ್ಚಳ?
1. ಬೆಂಗಳೂರು-ಶಿವಮೊಗ್ಗ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1150-₹1400
2. ಬೆಂಗಳೂರು- ಹುಬ್ಬಳಿ
ಅಕ್ಟೋಬರ್ 16 ದರ ₹600-₹850
ಅಕ್ಟೋಬರ್ 20 ದರ ₹1600-₹2000
3. ಬೆಂಗಳೂರು-ಮಂಗಳೂರು
ಅಕ್ಟೋಬರ್ 16 ದರ ₹650-₹900
ಅಕ್ಟೋಬರ್ 20 ದರ ₹1600-₹2000
4. ಬೆಂಗಳೂರು – ಉಡುಪಿ
ಅಕ್ಟೋಬರ್ 16 ದರ ₹700-₹850
ಅಕ್ಟೋಬರ್ 20 ದರ ₹1600-₹1900
5. ಬೆಂಗಳೂರು-ಧಾರವಾಡ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1500-₹2100
6. ಬೆಂಗಳೂರು-ಬೆಳಗಾವಿ
ಅಕ್ಟೋಬರ್ 16 ದರ ₹700-₹900
ಅಕ್ಟೋಬರ್ 20 ದರ ₹1500-₹2100
7. ಬೆಂಗಳೂರು – ದಾವಣಗೆರೆ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1300-₹1650
8. ಬೆಂಗಳೂರು – ಚಿಕ್ಕಮಗಳೂರು
ಅಕ್ಟೋಬರ್ 16 ದರ ₹600-₹650
ಅಕ್ಟೋಬರ್ 20 ದರ ₹1250-₹1500
9. ಬೆಂಗಳೂರು – ಹಾಸನ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1600-₹1850

ಬೆಂಗಳೂರಿನಿಂದ ಹೊರರಾಜ್ಯಕ್ಕೆ:
1. ಬೆಂಗಳೂರು-ಚೆನೈ
ಅಕ್ಟೋಬರ್ 16 ದರ ‌‌‌ ₹620-₹850
ಅಕ್ಟೋಬರ್ 20 ದರ ₹1800-₹2100
2. ಬೆಂಗಳೂರು- ಹೈದರಾಬಾದ್
ಅಕ್ಟೋಬರ್ 16 ದರ ₹1300-₹1900
ಅಕ್ಟೋಬರ್ 20 ದರ ₹2800-₹3300
3. ಬೆಂಗಳೂರು-ಕೊಯಮತ್ತೂರು
ಅಕ್ಟೋಬರ್ 16 ದರ ₹700-₹1100
ಅಕ್ಟೋಬರ್ 20 ದರ ₹2300-₹2800
4. ಬೆಂಗಳೂರು – ಮುಂಬೈ
ಅಕ್ಟೋಬರ್ 16 ದರ ₹1300-₹1600
ಅಕ್ಟೋಬರ್ 20 ದರ ₹2300-₹2700
5. ಬೆಂಗಳೂರು-ಗೋವಾ
ಅಕ್ಟೋಬರ್ 16 ದರ ₹1000-₹1300
ಅಕ್ಟೋಬರ್ 20 ದರ ₹2800-₹3100

ಇದನ್ನೂ ಓದಿ: K S Bhagavan: ಒಕ್ಕಲಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರೊ. ಭಗವಾನ್ ಗೆ ಬಿಗ್ ಶಾಕ್

Leave A Reply

Your email address will not be published.