7th pay commission: NPS ರದ್ದು, 7ನೇ ವೇತನ ಆಯೋಗದ ಕುರಿತು ಬಂತು ಬಿಗ್ ಅಪ್ಡೇಟ್- ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Karnataka 7th pay commission government employees requested to cancel NPS scheme latest updates

Government employee: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದೆ. ಕರ್ನಾಟಕ ಸರ್ಕಾರದ ಮುಂದೆ ಸರ್ಕಾರಿ ನೌಕರರು(Government employees)ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈ ವರದಿ ಮೂಲಕ ಹೊಸ ಪಿಂಚಣಿ ಯೋಜನೆಯನ್ನು ಏಕೆ ರದ್ದು ಮಾಡಬೇಕು ಎಂಬುದಕ್ಕೆ ಕಾರಣ ಸಹಿತ ವಿವರಣೆ ನೀಡಲಾಗಿದೆ.

ಷೇರು ಮಾರುಕಟ್ಟೆ ನಿರ್ಧರಿತ (National Pension System) (NPS) ಯೋಜನೆಯನ್ನು ರದ್ದು ಮಾಡಿ, ಈ ಮೊದಲು ಇದ್ದಂತೆ ನಿಶ್ಚಿತ ಪೆನ್ಷನ್ ಯೋಜನೆಯನ್ನು (Defined Pension Scheme) ಜಾರಿಗೆ ತರುವಂತೆ ಸರ್ಕಾರಕ್ಕೆ 7ನೇ ವೇತನ ಆಯೋಗದ ವರದಿಯಲ್ಲಿ ಶಿಫಾರಸು ಮಾಡಬೇಕೆಂದು ಮನವಿ ಮಾಡಲಾಗಿದೆ.

ಸರ್ಕಾರವು ತನ್ನ ಖಾಯಂ ನೌಕರರಲ್ಲಿ ಪೆನ್ಷನ್ ಸಹಿತ ನೌಕರರು Defined Pension Scheme ನಡಿಯಲ್ಲಿ ಮತ್ತು ನೌಕರರ ವಂತಿಗೆಯಿಂದ ರೂಪಿಸಿದ NPS ಅಡಿಯಲ್ಲಿ ಬರುವ ನೌಕರರು ಎಂಬ ಎರಡು ವರ್ಗಗಳನ್ನು 1/4/2006ರಿಂದ ಈಚೆಗೆ ನೇಮಕವಾದ ನೌಕರರಲ್ಲಿ ಸೃಷ್ಟಿಸಿದೆ ಎಂದು ವರದಿ ಹೇಳಿದೆ.

ನೂತನ ಪಿಂಚಣಿ ಯೋಜನೆಯಡಿ ನೌಕರರಿಗೆ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರನ ವೇತನದಿಂದ ಶೇ 10ರಷ್ಟನ್ನು ಕಡಿತ ಮಾಡಿದ್ದು, ಇದರ ಜೊತೆಗೆ ಸರ್ಕಾರವು ಅದಕ್ಕೆ ಸಮಾನವಾದ ಮೊತ್ತವನ್ನು ವಂತಿಗೆ ರೂಪದಲ್ಲಿ ನೀಡುತ್ತದೆ. ಈ ರೀತಿ ಸಂಗ್ರಹವಾಗುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಷೇರು ಪೇಟೆಯಲ್ಲಿ ತೊಡಗಿಸಲಾಗುತ್ತದೆ. ನೌಕರರ ಮತ್ತು ಸರ್ಕಾರವು ತೊಡಗಿಸಿದ ಹಣಕ್ಕೆ ಯಾವುದೇ ಭದ್ರತೆ ನೀಡದೆ, ಈ ಹೊಸ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದ್ದು, ಇದು ನೌಕರರ ವೃದ್ಧಾಪ್ಯದ ಜೀವನಕ್ಕೆ ಯಾವುದೇ ಭದ್ರತೆ ನೀಡುತ್ತದೆ ಎನ್ನಲಾಗದು. ನೂತನ ಪಿಂಚಣಿ ವ್ಯವಸ್ಥೆಯು ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವೆ ಇರುವ ಸಂಬಂಧವನ್ನು ದೂರ ಮಾಡುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವರದಿಯಲ್ಲಿ ಹೇಳಿರುವ ಅಂಶಗಳು ಹೀಗಿವೆ:
# NPS ಯೋಜನೆಯಡಿಯಲ್ಲಿ ನೌಕರನು (Government Employee)ಇತರೆ ನಿವೃತ್ತ ನೌಕರರು ಪಡೆಯುವಂತೆ ಪೆನ್ಷನ್ ಮೊಬಲಗನ್ನು ಪಡೆಯುವ ಹಾಗಿರಬೇಕು.

# NPS ಯೋಜನೆಯಡಿಯಲ್ಲಿ ನೌಕರನು ತೊಡಗಿಸಿದ ಹಣಕ್ಕೆ ನಿಶ್ಚಿತ ಮೊಬಲಗು ಮತ್ತು ಪೆನ್ಷನ್ ನೀಡುವ ಕುರಿತು ಯಾವುದೇ ಖಾತ್ರಿಯಿಲ್ಲ. ಸದರಿ NPS ನಲ್ಲಿ FDI ಕೇವಲ ಶೇ 26 ನಿಗದಿಪಡಿಸಲು ಸಲಹೆ ನೀಡಲಾಗಿದ್ದರು ಕೂಡ ಪ್ರಸ್ತುತ, ಶೇಕಡ 100 ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ.

# ಪೆನ್ಷನ್ ಫಂಡ್ ಹಣಕ್ಕೆ Employees Provident Fund Scheme ನಲ್ಲಿ ನೀಡುವ ಬಡ್ಡಿ ದರಕ್ಕೆ ಕಡಿಮೆ ಆಗದಂತೆ ಉಪಧನವನ್ನು ನೀಡಬೇಕೆಂದು ಸಲಹೆ ನೀಡಲಾಗಿದೆ

# ದೇಶದ ಸರ್ವೋಚ್ಚ ನ್ಯಾಯಾಲಯವು ಪಿಂಚಣಿ ಎಂಬುವುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ಎಂದು ಹೇಳಿದೆ. ‘Deferred Wages’ ಎಂದು ಹೇಳಿದ್ದು, ‘ಪಿಂಚಣಿ’ ಎಂಬುವುದು ನೌಕರರು ಮಾಡಿದ ಸರ್ಕಾರಿ ಸೇವೆಗಾಗಿ, ಇಳಿ ವಯಸ್ಸಿನಲ್ಲಿ ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ನೀಡುವ ಹಕ್ಕಿನಂಶದ ಹಣವೆಂದು ಪರಿಗಣಿಸುವಂತೆ ಹೇಳಿದೆ.

# ಪಿಂಚಣಿಯನ್ನು ಸೇವೆಯಲ್ಲಿರುವ ನೌಕರರ ವೇತನ ಪರಿಷ್ಕರಿಸಿದಂತೆ ಆಗಾಗ್ಗೆ ಪರಿಷ್ಕರಿಸಿ, ನಿಗದಿ ಮಾಡಬೇಕೆಂದು ಕೇಂದ್ರ ಸರ್ಕಾರದ 5ನೇ ವೇತನ ಆಯೋಗವು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ನೀಡಿ ಶಿಫಾರಸ್ಸು ಮಾಡಿದೆ. ಆದರೂ, ಇವೆಲ್ಲವುಗಳನ್ನು ಧಿಕ್ಕರಿಸಲಾಗಿದೆ. ಇದರಲ್ಲಿ ನೌಕರರ ಹಣಕ್ಕೆ 30-35 ವರ್ಷಗಳ ಸೇವೆಯ ನಂತರ ದೊರೆಯಬೇಕಾದ ಪೆನ್ಷ್ಗೆ ಯಾವುದೇ ಭದ್ರತೆ ಹಾಗೂ ನಿಶ್ಚಿತ ಪೆನ್ಷ್ನ್ ಇಲ್ಲದಂತಾಗಿದೆ. ಹೀಗಾಗಿ, ನೌಕರರ ಸಂಘಟನೆಗಳು ನೀಡಿದ ಕಾರಣಗಳನ್ನು NPS ರದ್ದು ಪಡಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: EMRS Recruitment 2023: ಶಾಲೆಗಳಲ್ಲಿ ಭರ್ಜರಿ 4062 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ಕೂಡಲೇ ಅರ್ಜಿ ಸಲ್ಲಿಸಿ, 10th, 12th ಪಾಸಾದವರಿಗೆ ಆದ್ಯತೆ!!!

Leave A Reply

Your email address will not be published.