EMRS Recruitment 2023: ಶಾಲೆಗಳಲ್ಲಿ ಭರ್ಜರಿ 4062 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈ ಕೂಡಲೇ ಅರ್ಜಿ ಸಲ್ಲಿಸಿ, 10th, 12th ಪಾಸಾದವರಿಗೆ ಆದ್ಯತೆ!!!

Job openings eklavya model residential school recruitment application for 4062 different posts apply now

EMRS Recruitment 2023: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಏಕಲವ್ಯ ಮಾದರಿ ವಸತಿ ಶಾಲೆಗಳ 4062 ಹುದ್ದೆಗೆ(eklavya model residential school recruitment 2023) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ (eklavya model residential school recruitment 2023 application end date extended)ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಪಿಜಿಟಿ, ಟಿಜಿಟಿ, ಲೆಕ್ಕಿಗರು, ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್, ಲ್ಯಾಬ್ ಟೆಕ್ನೀಷಿಯನ್ ಸೇರಿದಂತೆ ಒಟ್ಟು 4062 ಹುದ್ದೆಗೆ(EMRS Recruitment 2023) ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಹುದ್ದೆಗಳಿಗೆ ಈ ಹಿಂದೆ ಜುಲೈ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ ಆಗಸ್ಟ್‌ ಅಂತ್ಯದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 19-10-2023 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 4062
ಹುದ್ದೆಯ ವಿವರ: ಬೋಧಕ, ಬೋಧಕೇತರ ಹುದ್ದೆಗಳ ನೇಮಕ
ನೇಮಕಾತಿ ಸಂಸ್ಥೆ – ನ್ಯಾಷನಲ್ ಎಜುಕೇಷನ್‌ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್ಸ್‌
ವೆಬ್‌ಸೈಟ್‌ ವಿಳಾಸ – https://emrs.tribal.gov.in/
ಪೋಸ್ಟ್‌ ಗ್ರಾಜುಯೇಟ್‌ ಟೀಚರ್ : 2266
ಪ್ರಾಂಶುಪಾಲರು : 303
ಲೆಕ್ಕಿಗರು : 361
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ : 759
ಲ್ಯಾಬ್ ಟೆಕ್ನೀಷಿಯನ್ : 373
ಉದ್ಯೋಗ ಸ್ಥಳ – ನವದೆಹಲಿ

ಶೈಕ್ಷಣಿಕ ಅರ್ಹತೆ:
* ಪ್ರಾಂಶುಪಾಲ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಗಮನಿಸಿದರೆ, ಪಿಜಿ ಇಎಂಆರ್‌ಎಸ್‌ ಹಾಗೂ ನಿಗದಿತ ಕಾರ್ಯಾನುಭವ ಹೊಂದಿರಬೇಕು.
* ಪೋಸ್ಟ್‌ ಗ್ರಾಜುಯೇಟ್‌ ಟೀಚರ್ ಹುದ್ದೆಗೆ ಪಿಜಿ ಜತೆಗೆ ಬಿ.ಇಡಿ / ಎಂ.ಇಡಿ ಶಿಕ್ಷಣ ಮಾಡಿರಬೇಕು.
*ಲೆಕ್ಕಿಗರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ, ಬಿಬಿಎಂ ಅಥವಾ ಎಂ.ಕಾಂ, ಎಂಬಿಎ ಮಾಡಿರಬೇಕು.
* ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ ಹುದ್ದೆಗೆ ಪದವಿ ಮುಗಿಸಿರಬೇಕು.
* ಲ್ಯಾಬ್ ಟೆಕ್ನೀಷಿಯನ್ ಹುದ್ದೆಗೆ ಎಸೆಸೆಲ್ಸಿ ಇಲ್ಲವೇ 12ನೆಯ ತರಗತಿ ಆಗಿರಬೇಕು.

ವಯೋಮಿತಿ:
ಏಕಲವ್ಯ ಮಾದರಿ ಶಾಲೆಗಳ ಟೀಚಿಂಗ್ ಪೋಸ್ಟ್‌ಗಳಿಗೆ ಗರಿಷ್ಠ ವಯೋಮಿತಿ 50 ವರ್ಷವಾಗಿದ್ದು, ನಾನ್‌ ಟೀಚಿಂಗ್ ಪೋಸ್ಟ್‌ಗಳಿಗೆ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.

ಹುದ್ದೆವಾರು ಅರ್ಜಿ ಶುಲ್ಕ ವಿವರ:
ಪ್ರಾಂಶುಪಾಲರು ಹುದ್ದೆಗೆ ಅರ್ಜಿ ಶುಲ್ಕ Rs.2000 ಆಗಿದೆ.
ಪೋಸ್ಟ್‌ ಗ್ರಾಜುಯೇಟ್‌ ಟೀಚರ್ ಹುದ್ದೆಗೆ Rs.1500 ಅರ್ಜಿ ಶುಲ್ಕವಾಗಿದೆ.
ನಾನ್‌ ಟೀಚಿಂಗ್ ಹುದ್ದೆಗೆ Rs.1000.ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು (ಒಎಂಆರ್‌ ಆಧಾರಿತ) ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ವಿಳಾಸ – https://emrs.tribal.gov.in/ ಭೇಟಿ ನೀಡಿ ಮಾಹಿತಿ ಪಡೆಯಬಹುದು..

ಇದನ್ನೂ ಓದಿ: Gruha Lakshmi Scheme: ಇನ್ನೂ ಕೈ ಸೇರದ ಗೃಹಲಕ್ಷ್ಮೀ ದುಡ್ಡು – ಯಜಮಾನಿಯರೇ ಇಲ್ಲಿವೆ ನೋಡಿ ಹಣ ಬಾರದಿರಲು ಹಲವು ಕಾರಣ!

Leave A Reply

Your email address will not be published.