Gruha Lakshmi Scheme: ಇನ್ನೂ ಕೈ ಸೇರದ ಗೃಹಲಕ್ಷ್ಮೀ ದುಡ್ಡು – ಯಜಮಾನಿಯರೇ ಇಲ್ಲಿವೆ ನೋಡಿ ಹಣ ಬಾರದಿರಲು ಹಲವು ಕಾರಣ!

Karnataka news Congress guarantee here is the reason why gruhalakshmi scheme money is not coming

Gruha Lakshmi Scheme Updates: ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ಆಗಸ್ಟ್‌ 30ರಂದು ಚಾಲನೆ ನೀಡಲಾಗಿದೆ. ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆಯ ಮೊದಲ ಕಂತು ಜಮೆಯಾಗಿದೆ. ಇದೀಗ, ಮನೆಯ ಮಹಿಳಾ ಯಜಮಾನಿಯರು ಎರಡನೇ ಕಂತಿನ ಹಣ ಜಮೆ ಆಗುವ ನಿರೀಕ್ಷೆಯಲ್ಲಿದ್ದಾರೆ.

ಬಿಪಿಎಲ್‌(BPL), ಎಪಿಎಲ್‌(APL), ಅಂತ್ಯೋದಯ ಕಾರ್ಡ್‌ ಹೊಂದಿರುವ ಎಲ್ಲ ಕುಟುಂಬ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2000 ರೂ. ನೀಡುವ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದು, ಯೋಜನೆ ಜಾರಿಯಾದ ಬೆನ್ನಲ್ಲೇ ಜಿಲ್ಲೆಯ ಬಹುತೇಕ ಫಲಾನುಭವಿಗಳ ಮೊಬೈಲ್‌ಗಳಿಗೆ ಸಂದೇಶ ಬಂದಿತ್ತು. ಆದರೆ, ಹಣ ಮಾತ್ರ ಈವರೆಗೂ ಕೆಲವರಿಗೆ ಜಮೆ ಆಗಿಲ್ಲ. ಈ ನಡುವೆ, ಹಣ ಬಾರದ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಸಿಕ್ಕಿದ್ದು, ತಾಂತ್ರಿಕ ಸಮಸ್ಯೆಯಿಂದ ತಡವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಹಣ ಬಾರದೆ ಇರುವ ಫಲಾನುಭವಿಗಳಿಗೆ ಹಂತಹಂತವಾಗಿ ಹಣ ತಲುಪಿಸುವ ವ್ಯವಸ್ಥೆ ನಡೆಯಲಿದ್ದು, ಈಗಿರುವ ಸಮಸ್ಯೆಗಳನ್ನು ಬಗೆಹರಿಸಲು ಇಲಾಖೆಯಿಂದ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ.

ಸರಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಾದ್ಯಂತ 1,82,000 ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಒಟ್ಟು 1,38, 000 ಫಲಾನುಭವಿಗಳಿದ್ದು ಕೆವೈಸಿ (KYC),ಆಧಾರ್‌ ಸಮಸ್ಯೆಯಿಂದ ಜಿಲ್ಲೆಯ 4500 ಮಂದಿಯ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ಲ. ಇದರಲ್ಲಿ ಕೆಲವು ಮಹಿಳೆಯರ ಖಾತೆ ಸಮಸ್ಯೆಯಿದ್ದು, ಇ-ಕೆವೈಸಿ, ಆಧಾರ್‌ ಜೋಡಣೆ ಒಳಗೊಂಡಂತೆ ಅನೇಕ ಸಮಸ್ಯೆಯಿದೆ. ಈ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ನಟರಾಜ್‌ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ, ಮನೆಯ ಯಜಮಾನರ ಹೆಸರು ಪಡಿತರ ಚೀಟಿಯಲ್ಲಿದ್ದ ಹಿನ್ನೆಲೆ ಕೆಲವರ ನೋಂದಣಿಗೆ ಹಿನ್ನೆಡೆಯಾಗಿದೆ. ಈಗ ಸರಕಾರ ಪಡಿತರ ಚೀಟಿ ತಿದ್ದುಪಡಿಗೆ ಅನುವು ಮಾಡಿದ್ದು, ಮನೆಯ ಯಜಮಾನನ ಹೆಸರನ್ನು ತೆಗೆದು ಒಡತಿಯ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: IND vs PAK: ಇಂಡಿಯಾ- ಪಾಕ್ ಮ್ಯಾಚ್ ಎಫೆಕ್ಟ್ ; 3 ಸಾವಿರ ಕಾಂಡೋಮ್, ನಿಮಿಷಕ್ಕೆ 250 ಬಿರಿಯಾನಿ ಸೇಲ್ !!

Leave A Reply

Your email address will not be published.