IND vs PAK: ಇಂಡಿಯಾ- ಪಾಕ್ ಮ್ಯಾಚ್ ಎಫೆಕ್ಟ್ ; 3 ಸಾವಿರ ಕಾಂಡೋಮ್, ನಿಮಿಷಕ್ಕೆ 250 ಬಿರಿಯಾನಿ ಸೇಲ್ !!

sports news swiggy received record breaks order on biryani during India vs Pak match

India vs Pak: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ(IND vs PAK)ರೋಚಕ ಪಂದ್ಯಾಟದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ 86 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನಿಂದ ಭಾರತವು ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ.

ಭಾರತ ಮತ್ತು ಪಾಕಿಸ್ತಾನ(India Vs Pakistan)ನಡುವಿನ ವಿಶ್ವಕಪ್ ಹಣಾಹಣಿ ಪಂದ್ಯದಲ್ಲಿ ಭಾರತ(India)ತಂಡ ಭರ್ಜರಿ ಗೆಲುವು ಸಾಧಿಸಿದೆ. ಇನ್ನು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಬಹುನಿರೀಕ್ಷಿತ ಪಂದ್ಯವನ್ನು ವೀಕ್ಷಿಸಲು 1,00,000 ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗಿದ್ದರು. ಈ ಪಂದ್ಯದ ವಿಶೇಷತೆ ಎಂಬಂತೆ ಕ್ರೀಡಾಂಗಣದ ಒಳಗೆ ಭಾರತ ಗೆದ್ದರೆ,ಸ್ವಿಗ್ಗಿ (Swiggy)ಗ್ರೌಂಡ್ ಹೊರಗೆ ಭರ್ಜರಿ ಬ್ಯಾಟಿಂಗ್ ಮಾಡಿದೆ. ಹೌದು! ಸ್ವಿಗ್ಗಿ ಹಂಚಿಕೊಂಡ ಮಾಹಿತಿ ಅನುಸಾರ, ಪ್ರತಿ ನಿಮಿಷಕ್ಕೆ ಸರಿ ಸುಮಾರು 250ಕ್ಕೂ ಹೆಚ್ಚು ಬಿರಿಯಾನಿ(Biriyani)ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ(Swiggy)ಹೇಳಿಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ( India vs pak) ಆರಂಭವಾದ ಕ್ಷಣದಿಂದ ಸ್ವಿಗ್ಗಿಯಲ್ಲಿ ಪ್ರತಿ ನಿಮಿಷಕ್ಕೆ 250 ಬಿರಿಯಾನಿ ಆರ್ಡರ್‌ಗಳನ್ನು ಮಾಡಲಾಗಿದೆ. ಅದರಲ್ಲೂ ಚಂಡೀಗಢದ ಕುಟುಂಬವೊಂದು ಒಂದೇ ಸಲಕ್ಕೆ ಬರೋಬ್ಬರಿ 70 ಬಿರಿಯಾನಿ ಆರ್ಡರ್ ಮಾಡಿದೆಯಂತೆ.ಇದರ ಜೊತೆಗೆ, ಈ ಆಟದ ಸಂದರ್ಭದಲ್ಲಿ ಭಾರತೀಯರು 1 ಲಕ್ಷಕ್ಕೂ ಹೆಚ್ಚು ತಂಪು ಪಾನೀಯಗಳನ್ನು(Cool Drinks)ಆರ್ಡರ್ ಮಾಡಿದ್ದಾರಂತೆ. ಇದರ ಜೊತೆಗೆ 3ಸಾವಿರಕ್ಕೂ ಅಧಿಕ ಕಾಂಡೋಮ್ ಕೂಡ ಸೇಲ್ ಆಗಿದೆಯಂತೆ. ಒಟ್ಟಾರೆಯಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಸಂದರ್ಭ ಬಿರಿಯಾನಿ, ಲೇಸ್‌, ಚಿಪ್ಸ್‌ ಪ್ಯಾಕೇಟ್‌ ಮತ್ತು ಕಾಂಡೋಮ್‌ ಪ್ಯಾಕೇಟ್‌ಗಳು ಸ್ವಿಗ್ಗಿಯಲ್ಲಿ ಭರ್ಜರಿ ಸೇಲ್‌ ಆಗಿ ಬೊಂಬಾಟ್ ಕಲೆಕ್ಷನ್ ಆಗಿದೆಯಂತೆ.

ಸ್ವಿಗ್ಗಿ ಟ್ವಿಟರ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಬ್ಲೂ ಲೇಸ್ (Chips) ಸುಮಾರು 10,916 ಮತ್ತು ಗ್ರೀನ್ ಲೇಸ್ ಸುಮಾರು 8,504 ಪ್ಯಾಕೆಟ್‌ಗಳನ್ನು ಆರ್ಡರ್ ಮಾಡಲಾಗಿದೆ. ಭಾರತ ಮತ್ತು ಪಾಕ್‌ ರೋಚಕ ಪಂದ್ಯದಲ್ಲಿ 3,509 ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿದೆ. ಕೆಲವು ಆಟಗಾರರು ಇಂದು ಮೈದಾನದ ಹೊರಗೆ ಆಡುತ್ತಿದ್ದಾರೆ ಎಂದು ಸ್ವಿಗ್ಗಿ ತಮಾಷೆಯಾಗಿ ಬರೆದುಕೊಂಡಿದ್ದು, ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಈ ಮೂಲಕ ಒಂದೇ ಒಂದು ಪಂದ್ಯದ ಮೂಲಕ ಸ್ವಿಗ್ಗಿ ಕೋಟ್ಯಾಂತರ ರೂ.ಆದಾಯ ಗಳಿಸಿದೆ.

ಇದನ್ನೂ ಓದಿ: Arecanut Price: ಚೇತರಿಕೆ ಕಾಣದ ಅಡಿಕೆ ಮಾರುಕಟ್ಟೆ : ಕುಸಿತದ ಹಾದಿಯಲ್ಲಿ ಬೆಲೆ

Leave A Reply

Your email address will not be published.