Petrol-Diesel Price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ – ವಾಹನ ಸವಾರರು ಕಂಗಾಲು

Latest national news petrol diesel price today petrol diesel price increase

Karnataka Petrol-Diesel Price: ಇಂದು ವಾಹನಗಳ ಓಡಾಟಕ್ಕೆ ಅತಿ ಅವಶ್ಯಕವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು(Petrol-Diesel Price) ತೈಲ ಮಾರುಕಟ್ಟೆ ಕಂಪನಿಗಳ ನವೀಕರಣಗಳ ಪ್ರಕಾರ, ಕೆಲವು ನಗರಗಳಲ್ಲಿ ಸಣ್ಣ ಬದಲಾವಣೆ ಮಾಡಿವೆ.

ಈ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆ:
ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆ 55 ಪೈಸೆ ಮತ್ತು ಡೀಸೆಲ್ 54 ಪೈಸೆ ಹೆಚ್ಚಾಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 37 ಪೈಸೆ ಮತ್ತು ಡೀಸೆಲ್ 34 ಪೈಸೆ ಏರಿಕೆಯಾಗಿದೆ. ಉತ್ತರ ಪ್ರದೇಶ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ.

ಈ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಇಳಿಕೆ:
ಪೆಟ್ರೋಲ್ ಬೆಲೆ ಪಶ್ಚಿಮ ಬಂಗಾಳದಲ್ಲಿ 44 ಪೈಸೆ ಮತ್ತು ಛತ್ತೀಸ್‌ಗಢದಲ್ಲಿ 47 ಪೈಸೆ ಇಳಿಕೆಯಾಗಿದೆ. ಮತ್ತು ಡೀಸೆಲ್ ಬೆಲೆ ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 41 ಮತ್ತು 47 ಪೈಸೆಗಳಷ್ಟು ಕಡಿಮೆಯಾಗಿದೆ.

ವಿವಿಧ ನಗರಗಳಲ್ಲಿ ಇಂಧನ ಬೆಲೆಗಳು:
ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ., ಡೀಸೆಲ್ ಲೀಟರ್‌ಗೆ 89.62 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 106.03 ರೂ ಮತ್ತು ಡೀಸೆಲ್ 92.76 ರೂ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 102.63 ರೂ ಮತ್ತು ಡೀಸೆಲ್ 94.24 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರೇ ಎಚ್ಚೆತ್ತುಕೊಳ್ಳಿ!!! ನಿಮ್ಮ ಖಾಸಗಿ ಅಂಗ ತುರಿಕೆಗೆ ಇದು ಕಾರಣ!

Leave A Reply

Your email address will not be published.