Israel: ಸುತ್ತಲೂ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲ್ ನ ತಾಕತ್ತಿನ ಹಿಂದಿರುವ ಪ್ರಬಲ ಅಸ್ತ್ರವೇನು ಗೊತ್ತೆ?!! ಗಾಜಾ ಪುಡಿ ಪುಡಿ!!!

World news this is the powerful weapon behind the strength of Israel

Israel: ಇಸ್ರೇಲ್ ಭೌಗೋಳಿಕವಾಗಿ ಅತೀ ಸಣ್ಣ ದೇಶವಾಗಿದ್ದು 420 KM ಉದ್ದ ಮತ್ತು 60 KM ಅಗಲ ಹೊಂದಿದೆ. ಗಡಿಗೆ ಹೊಂದಿಕೊಂಡಿರುವ ಗಾಜಾ ಪಟ್ಟಿ , ಜೋರ್ಡಾನ್ ಹಾಗು ಲೆಬನಾನ್ ರಾಷ್ಟ್ರ ಗಳು ಇಸ್ರೇಲ್ ನ ಶತ್ರು ರಾಷ್ಟ್ರ ಗಳಾಗಿವೆ. ಪ್ರತಿದಿನ ಅಪಾಯವನ್ನೇ ಎದುರಿಸುತ್ತಿರುವ ಇಸ್ರೇಲ್ (Israel) ಮೇಲೆ ಇತ್ತಿಚೆಗೆ ಭಯೋತ್ಪಾದಕ ದಾಳಿ ನಡೆಸಿದ ಗಾಜಾಪಟ್ಟಿಯ ಹಮಾಸ್ ಉಗ್ರರು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಹಮಾಸ್ ಉಗ್ರರಿಗೆ ಬೆಂಬಲವಾಗಿ ಲೆಬನಾನ್ ನ ನೇರ ಬೆಂಬಲ, ಈಜಿಪ್ಟ್ , ಇರಾನ್ , ಕತಾರ್ ಸೌದಿ ರಾಷ್ಟ್ರಗಳ ಬಾಹ್ಯ ಬೆಂಬಲವಿದ್ದರೂ ಯಾವುದೇ ರಾಷ್ಟ್ರದ ಸಹಾಯ ತೆಗೆದುಕೊಳ್ಳುದೇ ಏಕಾಂಗಿಯಾಗಿ ಹಮಾಸ್ ಉಗ್ರರನ್ನು ಸದೆಬಡಿಯುತ್ತಿರುವ ಇಸ್ರೇಲ್ ನ ತಾಕತ್ತಿನ ಹಿಂದಿರುವ ಅಸಲಿ ಸತ್ಯವಾದರೂ ಏನು ಎಂಬುದನ್ನು ತಿಳಿಯೋಣ.

ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ (IISS) ಮಿಲಿಟರಿ ಬ್ಯಾಲೆನ್ಸ್ 2023 ರ ಪ್ರಕಾರ, ಇಸ್ರೇಲ್ ಸೇನೆ, ನೌಕಾಪಡೆ ಮತ್ತು ಅರೆಸೇನಾಪಡೆಗಳಲ್ಲಿ 169,500 ಸಕ್ರಿಯ ಮಿಲಿಟರಿ ಸಿಬ್ಬಂದಿಯನ್ನು ಹೊಂದಿದೆ. ಇನ್ನೂ 465,000 ಅದರ ಮೀಸಲು ಪಡೆಗಳನ್ನು ಹೊಂದಿದೆ.

ಇಸ್ರೇಲ್‌ನ( Israel) ಎಲ್ಲಾ 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮಿಲಿಟರಿ ಸೇವೆ ಕಡ್ಡಾಯವಾಗಿದೆ – ಒಮ್ಮೆ ಸೇರ್ಪಡೆಗೊಂಡರೆ, ಪುರುಷರು 32 ತಿಂಗಳುಗಳು ಮತ್ತು ಮಹಿಳೆಯರು 24 ತಿಂಗಳುಗಳವರೆಗೆ ಸೇವೆ ಸಲ್ಲಿಸುತ್ತಾರೆ. ಯುದ್ಧದ ಸಮಯ ಎಲ್ಲೇ ಇದ್ದರೂ ಈ ನಾಗರಿಕರು ಕೈಯ್ಯಲ್ಲಿ ಬಂದೂಕು ಹಿಡಿದು ಸನ್ನದ್ದರಾಗುತ್ತಾರೆ.

ಸುಧಾರಿತ ಕಣ್ಗಾವಲು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಅತ್ಯಂತ ಶಕ್ತಿಶಾಲಿ ಮಿಲಿಟರಿಯನ್ನು ಹೊಂದಿದೆ. ಅದರ ವ್ಯಾಪಕವಾದ ಸೇನಾ ಶಸ್ತ್ರಾಗಾರದಲ್ಲಿ ಇವು ಸೇರಿವೆ:

ಸಿಬ್ಬಂದಿ
169,500 ಸಕ್ರಿಯ ಸೇನಾ ಸಿಬ್ಬಂದಿ
465,000 ಮೀಸಲು ಪಡೆಗಳು
ಭೂ ಸೇನೆ
2,200+ ಟ್ಯಾಂಕ್‌ಗಳು
530 ಫಿರಂಗಿ (SP, ಟೋವೆಡ್, MRL, MOR)

ವಾಯು ಸೇನೆ
309 ಫೈಟರ್ ಗ್ರೌಂಡ್ ಅಟ್ಯಾಕ್ ಜೆಟ್‌ಗಳು ಸೇರಿದಂತೆ 339 ಯುದ್ಧ ಸಾಮರ್ಥ್ಯದ ವಿಮಾನಗಳು
196 ಎಫ್-16 ಜೆಟ್‌ಗಳು
83 ಎಫ್-15 ಜೆಟ್‌ಗಳು
30 ಎಫ್-35 ಜೆಟ್‌ಗಳು
142 ಹೆಲಿಕಾಪ್ಟರ್‌ಗಳು
43 ಅಪಾಚೆ ದಾಳಿ ಹೆಲಿಕಾಪ್ಟರ್‌ಗಳು

ನೌಕಾ ಸೇನೆ
5 ಜಲಾಂತರ್ಗಾಮಿ ನೌಕೆಗಳು
49 ಗಸ್ತು ಮತ್ತು ಕರಾವಳಿ ಯೋಧರು
ಇಸ್ರೇಲ್‌ನ ಐರನ್ ಡೋಮ್ ಸಿಸ್ಟಮ್ ರೇಡಾರ್ ತಂತ್ರಜ್ಞಾನವನ್ನು ಬಳಸಿಕೊಂಡು ಕಡಿಮೆ-ಶ್ರೇಣಿಯ ರಾಕೆಟ್‌ಗಳನ್ನು ಪ್ರತಿಬಂಧಿಸಲು ಮತ್ತು ನಾಶಮಾಡಲು ವಿನ್ಯಾಸಗೊಳಿಸಲಾದ ಮೊಬೈಲ್ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಇದನ್ನು 2006 ರಲ್ಲಿ ಅಭಿವೃದ್ಧಿಪಡಿಸಲಾಯಿತು.

 

ಐಐಎಸ್ಎಸ್ ಪ್ರಕಾರ, ಇಸ್ರೇಲ್ನ ಐರನ್ ಡೋಮ್ ಸಿಸ್ಟಮ್ ಹಮಾಸ್ ಮತ್ತು ಇತರ ಪ್ಯಾಲೇಸ್ಟಿನಿಯನ್ ಗುಂಪುಗಳಿಂದ ಹಾರಿಸಲಾದ 90 ಪ್ರತಿಶತಕ್ಕಿಂತ ಹೆಚ್ಚು ರಾಕೆಟ್ಗಳನ್ನು ಆಕಾಶದಲ್ಲೇ ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ.ಇಸ್ರೇಲ್ ಪರಮಾಣು ಸಾಮರ್ಥ್ಯಗಳನ್ನು ಹೊಂದಿದ್ದು IISS ಪ್ರಕಾರ, ದೇಶವು ಜೆರಿಕೊ ಕ್ಷಿಪಣಿಗಳು ಮತ್ತು ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವಿರುವ ವಿಮಾನಗಳನ್ನು ಹೊಂದಿದೆ.

ಜೊತೆಗೆ ಪ್ರಬಲ ಅಸ್ತ್ರವಾಗಿ ಇಸ್ರೇಲ್ ನಿರ್ಮಿತ ಸ್ಪೈಸ್ 2000 GPS ಆಧಾರಿತ ಬಾ೦ಬ್ ಯಾವುದೇ ಗುರಿಯನ್ನು ಆಗಸದಲ್ಲೇ ಪತ್ತೆಹಚ್ಚಿ ಸಂಪೂರ್ಣ ಧ್ವ೦ಸಗೈಯ್ಯುವ ಸಾಮರ್ಥ್ಯ ಹೊಂದಿದ್ದು ಗಾಜಾಪಟ್ಟಿಯ ಹಮಾಸ್ ಗೆ ಸಂಬಂಧಿತ ದೊಡ್ಡ ದೊಡ್ಡ ಕಟ್ಟಡಗಳನ್ನು ಈ ಬಾ೦ಬ್ ಧ್ವ೦ಸಗೈಯುತ್ತಿದೆ. ಇದೇ ಸ್ಪೈಸ್ 2000 ಬಾ೦ಬ್ ನ್ನು ಭಾರತವೂ ಆಮದು ಮಾಡಿಕೊಂಡಿದೆ. 2019 ರಲ್ಲಿ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಯೋತ್ಪಾದಕ ಶಿಬಿರಗಳನ್ನು ಇದೇ ಬಾ೦ಬ್ ಮೂಲಕ ಸಂಪೂರ್ಣ ನಿರ್ನಾಮಗೊಳಿಸಿದ್ದು ಇಸ್ರೇಲ್ ನ ತಂತ್ರಜ್ಞಾನದ ಶಕ್ತಿ ಏನೆ೦ದು ತಿಳಿಯುತ್ತದೆ.

ಜೊತೆಗೆ ಇಸ್ರೇಲ್ ವಿಶ್ವದಲ್ಲೇ ಅತ್ಯುನ್ನತ ಗುಪ್ತಚರ ತಂಡ ಮೊಸ್ಸಾದ್ ನ್ನು ಹೊಂದಿದ್ದು ವಿಶ್ವದ ಯಾವುದೇ ರಾಷ್ಟ್ರವನ್ನು ಮಕಾಡೆ ಮಲಗಿಸುವ ಶಕ್ತಿ ಹೊಂದಿದೆ. ಒಟ್ಟಾರೆ ಇಸ್ರೇಲ್ ಈ ಬಾರಿ ಹಮಾಸ್ ಉಗ್ರರ ಸ೦ತತಿಯನ್ನೇ ನಾಶಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ

ಇದನ್ನೂ ಓದಿ: Interesting: ಎಲ್ಲಾದರೂ ವಾಹನ ಆಕ್ಸಿಡೆಂಟ್ ಆದ್ರೆ ನೀವು ತಕ್ಷಣ ಏನು ಗಮನಿಸ್ತೀರಿ ?! ಅದೊಂದನ್ನು ನೀವು ನೋಡಲೇ ಬೇಕು……!!!

Leave A Reply

Your email address will not be published.