Krishna byre gowda: ಬರ ಪರಿಹಾರದ ಬಗ್ಗೆ ಕಂದಾಯ ಇಲಾಖೆಯಿಂದ ಬಂತು ಬಿಗ್ ಅಪ್ಡೇಟ್ – ಈ ದಿನವೇ ನಿಮ್ಮ ಖಾತೆ ಸೇರಲಿದೆ ಪರಿಹಾರ ಹಣ !

Karnataka news revenue minister Krishna byre gowda give big update about drought relief

Krishna byre gowda: ಇನ್ನು ಎರಡೇ ಹೆಜ್ಜೆ, ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬಂದು ಬೀಳಲು. ಬೆಳೆವಾರು ವಿವಿಧ ರೀತಿಯ ಬೆಳೆ ಪರಿಹಾರ ನಿಗದಿಪಡಿಸಲಾಗಿದ್ದು, ಬರ ಪೀಡಿತ ತಾಲ್ಲೂಕುಗಳ ರೈತರಿಗೆ ಹಂತ ಹಂತವಾಗಿ ಪರಿಹಾರ ವಿತರಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನವೆಂಬರ್ 10 ರ ಸುಮಾರಿಗೆ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ರಾಜ್ಯದ 13 ಜಿಲ್ಲೆಗಳ ಬರ ಅಧ್ಯಯನ ಪ್ರವಾಸ (Drought study tour) ಪೂರ್ಣಗೊಳಿಸಿ ಬೆಂಗಳೂರಿಗೆ ಹಿಂದಿರುಗಿದ ಕೇಂದ್ರದ ಅಧಿಕಾರಿಗಳ ತಂಡದೊ೦ದಿಗೆ ನಡೆಸಿದ ಸಭೆಯ ಬಳಿಕ ಕಂದಾಯ ಸಚಿವ (Revenue Minister) ಕೃಷ್ಣ ಬೈರೇಗೌಡ (Krishna byre gowda) ಮಾತಾಡಿದ್ದಾರೆ. ಅವರು ರಾಜ್ಯದಲ್ಲಿ ಬರದ ತೀವ್ರತೆ ಕೇಂದ್ರ ತಂಡಕ್ಕೆ ಮನವರಿಕೆ ಆಗಿದೆ’ ಎಂದಿದ್ದಾರೆ. “ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿರುವ ಕೇಂದ್ರ ಸರ್ಕಾರದ (Central Govt) ಅಧಿಕಾರಿಗಳ ಅಧ್ಯಯನ ತಂಡಕ್ಕೆ ರಾಜ್ಯದಲ್ಲಿನ ಬರದ ತೀವ್ರತೆಯ ಮನವರಿಕೆಯಾಗಿದೆ. ತಂಡವು ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ” ಎಂದವರು ತಿಳಿಸಿದ್ದಾರೆ. ಹಾಗಾಗಿ ಬರದ ದುಡ್ಡು ಬರಲು ಕ್ಷಣಗಣನೆ ಆರಂಭವಾಗಿದೆ.

ಮೊದಲಿಗೆ ಸರಕಾರ ರಾಜ್ಯದ 195 ತಾಲ್ಲೂಕುಗಳನ್ನು ಬರದ ತಾಲೂಕುಗಳು ಎಂದು ಘೋಷಿಸಿತ್ತು. ಇದಕ್ಕೆ ಹೆಚ್ಚುವರಿಯಾಗಿ 2ನೇ ಹಂತದಲ್ಲಿ ಇನ್ನೂ 21 ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕುಗಳೆಂದು (Drought affected taluk) ಗುರುತಿಸಿದೆ. ಅಲ್ಲಿಗೆ ರಾಜ್ಯದ ಉಳಿದ ಕೇವಲ 20 ತಾಲ್ಲೂಕುಗಳನ್ನು ಹೊರತುಪಡಿಸಿ ಇಡೀ ರಾಜ್ಯಕ್ಕೇ ಬರಗಾಲ ಬಡಿದ ಹಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬರದ ಛಾಯೆ ಇಷ್ಟು ವಿಸ್ತಾರವಾಗಿ ವ್ಯಾಪಿಸಿದ್ದು, ದಿನೇ ದಿನೇ ಆತಂಕ ತೀವ್ರವಾಗುತ್ತಿದೆ.

ಶೇ.60ರಷ್ಟು ಮಳೆ ಕೊರತೆ, ಸತತ 3 ವಾರಗಳ ಕಾಲ ಮಳೆಯಾಗದಿರುವುದು, ಮಣ್ಣಿನಲ್ಲಿ ತೇವಾಂಶವಿಲ್ಲದ ಶುಷ್ಕ ವಾತಾವರಣ ಮತ್ತಿತರ ಮಾನದಂಡ ಆಧರಿಸಿ 2ನೇ ಪಟ್ಟಿಯಲ್ಲಿ 21 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಗುರುತಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಪೈಕಿ ಚಾಮರಾಜನಗರ, ಕೃಷ್ಣರಾಜನಗರ, ಅಣ್ಣಿಗೇರಿ, ಆಲೂರು ಮತ್ತು ಹಾಸನ ಸೇರಿ ಐದು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು, ಯಳಂದೂರು, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವ ಕಲಘಟಗಿ, ಅಳ್ಳಾವರ ಅರಸೀಕೆರೆ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ ಹೆಬ್ರಿ ಸಿದ್ದಾಪುರ ಮತ್ತು ದಾಂಡೇಲಿ ತಾಲ್ಲೂಕುಗಳನ್ನು ಭಾಗಶಃ ಬರಪೀಡಿತ ತಾಲ್ಲೂಕುಗಳೆಂದು ಗುರುತಿಸಲಾಗಿದೆ.

ರಾಜ್ಯ ಸರಕಾರ ಸಲ್ಲಿಸಿರುವ ಮನವಿ (Memorandum) ವಸ್ತುಸ್ಥಿತಿಯಿಂದ ಕೂಡಿದೆ ಎಂದು ಕೇಂದ್ರ ತಂಡವು ಮೆಚ್ಚು ಸಕಾರಾತ್ಮಕವಾಗಿ ಸ್ಪಂದಿಸಿದೆ. ರಾಜ್ಯದ ಕೆಲವೆಡೆ ಹಸಿರು ಬರ ಇರುವುದನ್ನು ತಂಡ ಒಪ್ಪಿಕೊಂಡಿದೆ. 10 ದಿನಗಳೊಳಗೆ ಅಧಿಕಾರಿಗಳ ತಂಡವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಶೀಘ್ರದಲ್ಲೇ ಪರಿಹಾರದ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.

ಕೃಷಿ ಸಚಿವ (Agriculture Minister) ಎನ್ ಚಲುವರಾಯಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರವು ಅಧಿಕಾರಿಗಳ ವರದಿಯನ್ನು ಪರಿಶೀಲಿಸಿ, ಪರಿಹಾರದ ಹಣ ಬಿಡುಗಡೆ ಮಾಡಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೂ ಕಾಯುತ್ತೇವೆ. ಕೇಂದ್ರದಿ೦ದ ಪರಿಹಾರ ಬರದಿದ್ದರೆ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

ಬೆಳೆವಾರು ಯಾವುದಕ್ಕೆ ಎಷ್ಟೆಷ್ಟು ಪರಿಹಾರ:
*ಮಳೆಯಾಶ್ರಿತ ಬೆಳೆಗೆ (rain fed crop), ಒಟ್ಟು 2 ಹೆಕ್ಟೇರ್ಗೆ ಸೀಮಿತ ಮಾಡಿ ಪ್ರತಿ ಹೆಕ್ಟೇರ್ಗೆ (ಪ್ರತಿ 2 ಎಕರೆ 20 ಗುಂಟೆ) 8,500 ಪರಿಹಾರ ಕೊಡಲಾಗುತ್ತದೆ.
* ನೀರಾವರಿ ಬೆಳೆಗೆ (Irrigated Crop) ಪ್ರತಿ ಹೆಕ್ಟೇರ್ ಗೆ 17,000, ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್ಗೆ 22,500 ಪರಿಹಾರ ಸಿಗಲಿದೆ.
ಅದೇ ರೀತಿ ರೇಷ್ಮೆ ಬೆಳೆಗೆ (Silk Crop) ಪ್ರತಿ ಹೆಕ್ಟೇರ್ಗೆ 6,000 ಪರಿಹಾರ ಮೊತ್ತ ನಿಗದಿಪಡಿಸಲಾಗುತ್ತದೆ.

ಇದನ್ನೂ ಓದಿ: Pejavara Shree: ‘ಸನಾತನ’ ಇದೆ ಎಂದು ಮೈಮರೆತರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾದೀತು- ಪೇಜಾವರ ಶ್ರೀಗಳಿಂದ ಅಚ್ಚರಿ ಹೇಳಿಕೆ !!

Leave A Reply

Your email address will not be published.