Pejawara shree: ‘ಸನಾತನ’ ಇದೆ ಎಂದು ಮೈಮರೆತರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾದೀತು- ಪೇಜಾವರ ಶ್ರೀಗಳಿಂದ ಅಚ್ಚರಿ ಹೇಳಿಕೆ !!

Karnataka news Pejawara shree talks over sanatana Dharma at Hubballi

Share the Article

Pejawara shree: ಉಡುಪಿ(Udupi)ಪೇಜಾವರ ಮಠದ(Pejawara Shree) ವಿಶ್ವಪ್ರಸನ್ನತೀರ್ಥ ಶ್ರೀಗಳು ಸನಾತನ ಧರ್ಮದ ಉಳಿವಿಗೆ ಹಿಂದೂಗಳು ಮಹತ್ತರ ಹೆಜ್ಜೆ ಇಡಲು ಕರೆ ನೀಡಿದ್ದಾರೆ. ಸನಾತನ ಸಂಸ್ಕೃತಿ ಅಳಿವು-ಉಳಿವಿನ ಕಾಲಘಟ್ಟದಲ್ಲಿ ನಾವಿದ್ದೇವೆ. ಸನಾತನ ಸದಾ ನಮ್ಮೊಂದಿಗಿದೆ ಎಂದೇನಾದರೂ ನಾವು ಮೈ ಮರೆತು ಕುಳಿತಿ ಬಿಟ್ಟರೆ ಇದರ ಗಂಭೀರ ಪರಿಣಾಮವನ್ನು ಇನ್ನು ಕೆಲವೇ ದಿನಗಳಲ್ಲಿ ಎದುರಿಸಬೇಕಾದ ಪರಿಸ್ಥಿತಿ ನಮಗೆ ಎದುರಾಗಲಿದೆ ಎಂದು ಎಚ್ಚರಿಕೆಯನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ನೀಡಿದ್ದಾರೆ.

ನಮ್ಮ ದೇಶ ಉತ್ತಮ ವಿಚಾರಗಳು ಬಂದಾಗ ಹೃದಯ ತೆರೆದಿಟ್ಟು ಒಪ್ಪಿಕೊಂಡಿದ್ದೇವೆ. ನ್ಯಾಯಯುತವಾಗಿ ಹೋರಾಟ ಮಾಡಿದ್ದರಿಂದ ನಮಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಅವಕಾಶ ಒದಗಿ ಬಂದಿದೆ. ಆದರೆ, ಇಂದು ನಮ್ಮ ಮನೆಯ ಮಕ್ಕಳನ್ನೇ ಎಗರಿಸಿಕೊಂಡು ಹೋಗುತ್ತಿದ್ದರು ಕೂಡ ಅದನ್ನು ನೋಡಿಕೊಂಡು ನಾವು ಸುಮ್ಮನೆ ಕೂರಲು ಸಾಧ್ಯವೆ ಇಲ್ಲ!!! ಸನಾತನ ಧರ್ಮ ಕಿತ್ತೆಸೆಯುತ್ತೇವೆ ಎನ್ನುವ ಸಂದರ್ಭ ನಾವು ಸುಮ್ಮನೆ ಕುಳಿತುಬಿಟ್ಟರೆ ಆಗದು!! ಈ ಕುರಿತು ಎಲ್ಲ ಹಿಂದೂಗಳು ಜಾಗೃತರಾಗುವ ಕಾಲ ಬಂದಿದೆ.ಮಕ್ಕಳಿಗೆ ಸಂಸ್ಕೃತಿಯನ್ನು ಅರ್ಥ ಮಾಡಿಸುವ ಅವಶ್ಯಕತೆ ಎದುರಾಗಿದೆ. ರಾಮಮಂದಿರ ರಾಮಮಂದಿರವಾಗಿಯೇ ಉಳಿಯಬೇಕು ಎಂದಾದರೆ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು. ಇಲ್ಲದೇ ಹೋದರೆ, ಮುಂದೆ ನಮ್ಮ ಮಕ್ಕಳಿಂದಲೇ ನಮ್ಮ ಸಂಸ್ಕೃತಿಗೆ, ರಾಮ ಮಂದಿರಕ್ಕೆ ದೊಡ್ದ ಅಪಾಯ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಶ್ರೀಗಳು ಹಿಂದೂಗಳು ಜಾಗೃತರಾಗಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: Udupi: ಮಹಿಷಾ ದಸರಾಗೆ ನಿರ್ಬಂಧ ಹೇರಿ 2 ದಿನ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ

Leave A Reply

Your email address will not be published.