Honey trap: ರಾತ್ರೋ ರಾತ್ರಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ! ಅಷ್ಟಕ್ಕೂ ಆಕೆ ಮಾಡಿದ್ದೇನು?

Karnataka news Belagavi woman honey trap news woman was paraded with slipper garland

Honey Trap: ಬೆಳಗಾವಿಯ (Belgavi News) ಘಟಪ್ರಭಾದಲ್ಲಿ ತಡರಾತ್ರಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮರವಣಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀದೇವಿ ಗೊಡಚಿ ಎಂಬಾಕೆ ಮೇಲೆ ಹನಿಟ್ರ್ಯಾಪ್( Honey trap) ಹಾಗೂ ಬ್ಲ್ಯಾಕ್‌ ಮೇಲ್ ಆರೋಪವನ್ನು ಸ್ಥಳೀಯರು ಮಾಡಿದ್ದು, ಮೃತ್ಯುಂಜಯ ಸರ್ಕಲ್‌ನಲ್ಲಿ ಹತ್ತಾರು ಮಹಿಳೆಯರಿಂದ ಶ್ರೀದೇವಿಗೆ ಚಪ್ಪಲಿ ಹಾರ ಹಾಕಿದ್ದಾರೆ.

ಇನ್ನು ಹಲ್ಲೆಗೊಳಗಾದ ಮಹಿಳೆಯು ಸ್ಥಳೀಯವಾಗಿ ಹಲವು ಉದ್ಯಮಿಗಳು, ವ್ಯಾಪಾರಿಗಳು ಹಾಗೂ ನೌಕರರನ್ನು ಹನಿಟ್ರ್ಯಾಪ್ ಮಾಡುತ್ತಾ, ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಾಳೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ಈ ಮಹಿಳೆಯು ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿ, ಬಂಧಿಸಿ ಕ್ರಮ ಕೈಗೊಳ್ಳಲು ಸ್ಥಳೀಯರಿಂದ ಮನವಿ ಮಾಡಲಾಗಿತ್ತು. ಆದರೆ ಅವರು ಯಾವುದೇ ಕ್ರಮಕೈಗೊಳದೇ ಇದ್ದಾಗ ಈ ರೀತಿ ತಾವೇ ಶಿಕ್ಷಿಸಲು ಸ್ಥಳೀಯರು ಮುಂದಾಗಿದ್ದಾರೆ.

ಸದ್ಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಶ್ರೀದೇವಿ ಹನಿಟ್ರ್ಯಾಪ್‌ ಮಾಡಿ ಬಳಿಕ ಲಕ್ಷಾಂತರ ರೂಪಾಯಿ ಹಣವನ್ನು ದೋಚಿಸಿದ್ದಾರೆ. ರೌಡಿಸಂ ಮಾಡಿ ಹಲ್ಲೆಗೂ ಮುಂದಾಗಿದ್ದಾಳೆ. ಬೆಳಗಾವಿಯಿಂದಲೇ ಈಕೆಯನ್ನು ಗಡಿಪಾರು ಮಾಡಬೇಕು. ಪೊಲೀಸರು ಕೂಡಲೇ ಈಕೆಯನ್ನು ಬಂಧಿಸಿ ಶಿಕ್ಷೆಯನ್ನು ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಲೂಲು ಮಾಲ್’ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ವಿಚಾರ- ಸುಳ್ಳು ಸುದ್ದಿ ಹರಡಿದರಾ ಬಿಜೆಪಿ ಕಾರ್ಯಕರ್ತೆ ಶಕುಂತಲಾ ?!

Leave A Reply

Your email address will not be published.