Atal Pension Scheme: ಇಲ್ಲಿ 210 ರೂ ಗಳನ್ನು ಕಟ್ಟಿರಿ, ತಿಂಗಳಾಂತ್ಯಕ್ಕೆ 5,000 ಪಿಂಚಣಿ ಪಡೆದು ಆನಂದಿಸಿರಿ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

Business news get up to 5000 pension per month using Atal pension scheme

Atal Pension Scheme: ಭಾರತೀಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಅನಿರೀಕ್ಷಿತ ಅನಾರೋಗ್ಯ, ಅಪಘಾತಗಳು ಅಥವಾ ದೀರ್ಘಕಾಲದ ಕಾಯಿಲೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂಬ ನಿಟ್ಟಿನಲ್ಲಿ ಸರ್ಕಾರವು (government )ಅಟಲ್ ಪಿಂಚಣಿ ಯೋಜನೆಯ ಸೌಲಭ್ಯವನ್ನು ಜಾರಿ ತಂದಿದೆ.

ಭಾರತ ಸರ್ಕಾರವು ಪ್ರಾರಂಭಿಸಿದ, ಈ ಅಟಲ್ ಪಿಂಚಣಿ ಯೋಜನೆಯು (APY)ಎಲ್ಲಾ ಭಾರತೀಯ ನಾಗರಿಕರಿಗೆ 18ರಿಂದ 40 ವರ್ಷದೊಳಗಿನ ಕಡಿಮೆ ಆದಾಯ ಗುಂಪಿನ ವ್ಯಕ್ತಿಗಳ ನಿವೃತ್ತಿ ಜೀವನಕ್ಕೆ ಆಧಾರವಾಗಿರಲೆಂದು ರೂಪಿಸಿದ ಯೋಜನೆಯಾಗಿದೆ. ಇದು 60 ವರ್ಷದ ಬಳಿಕ ತಿಂಗಳಿಗೆ 1,000 ರೂನಿಂದ 5,000 ರೂವರೆಗೆ ಪಿಂಚಣಿ ಪಡೆಯಲು ಈ ಯೋಜನೆ ಸಹಾಯವಾಗುತ್ತದೆ. ಈ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆಯ ಜೊತೆಗೆ ಸರ್ಕಾರ ಕೂಡ ವರ್ಷಕ್ಕೆ 1,000 ರೂವರೆಗೂ ಧನಸಹಾಯ ನೀಡುತ್ತದೆ. ಇದೊಂದು ವಿಶ್ವಾಸಾರ್ಹ ಆದಾಯವನ್ನು ನೀಡುವ ಗುರಿಯನ್ನು ಹೊಂದಿರುವ ಸಾಮಾಜಿಕ ಭದ್ರತಾ ಕಾರ್ಯಕ್ರಮವಾಗಿದೆ. ಹೌದು, ರಿಸ್ಕ್ ಇಲ್ಲದ ಹೂಡಿಕೆ ಆಯ್ಕೆಗಳಲ್ಲಿ ಅಟಲ್ ಪೆನ್ಷನ್ ಯೋಜನಾ (Atal Pension Scheme) ಒಂದು.

ಅಟಲ್ ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಪಿಂಚಣಿ ಪಡೆಯಲು, ಗರಿಷ್ಠ ವಯಸ್ಸು 40 ವರ್ಷ. ಆ ವಯಸ್ಸಿನಲ್ಲಿ ನೀವು ಸ್ಕೀಮ್ ಪಡೆಯುವುದಾದರೆ 20 ವರ್ಷ ಕಾಲ ಹೂಡಿಕೆ ಮಾಡಬಹುದು. ತಿಂಗಳಿಗೆ 1,454 ರೂನಂತೆ ಹಣ ಪಾವತಿಸುತ್ತಾ ಹೋದರೆ 5,000 ರೂಗಳ ಮಾಸಿಕ ಪಿಂಚಣಿ ಪಡೆಯಬಹುದು.

ಇನ್ನೂ ಕಡಿಮೆ ಪಿಂಚಣಿ ಬೇಕೆಂದರೆ ಮಾಸಿಕ ಕಂತು ಕಡಿಮೆ ಇರುತ್ತದೆ. ಉದಾಹರಣೆಗೆ, ನೀವು ಮಾಸಿಕ ಪಿಂಚಣಿ 1,000 ರೂ ಬೇಕೆಂದರೆ ತಿಂಗಳಿಗೆ 291 ರೂ ಹೂಡಿಕೆ ಮಾಡಿದರೆ ಸಾಕು. ಅಥವಾ 18ರ ವಯಸ್ಸಿನಿಂದಲೇ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವಿರಾದರೆ ತಿಂಗಳಿಗೆ 210 ರೂ ಕಟ್ಟಿದರೆ 5,000 ರೂ ಮಾಸಿಕ ಪಿಂಚಣಿ ಪಡೆಯಬಹುದು.

ಮುಖ್ಯವಾಗಿ 18 ವರ್ಷದಿಂದ 40 ವರ್ಷ ವಯಸ್ಸಿನ ಭಾರತೀಯ ಈ ಅಟಲ್ ಪೆನ್ಷನ್ ಯೋಜನೆ ಪಡೆಯಬಹುದು. ಆದರೆ, ಆ ವ್ಯಕ್ತಿ ಬೇರೆ ಯಾವುದೇ ಸರ್ಕಾರಿ ಸಾಮಾಜಿಕ ಭದ್ರತಾ ಸ್ಕೀಮ್​ಗಳನ್ನು ಹೊಂದಿರಬಾರದು. ಮತ್ತು ತೆರಿಗೆ ಪಾವತಿದಾರರೂ ಆಗಿರಬಾರದು ಎಂಬ ನಿಯಮ ಇದೆ.

ಇದನ್ನೂ ಓದಿ: Green Card: ಭಾರತೀಯರಿಗೆ ಗುಡ್ ನ್ಯೂಸ್! ಅಮೆರಿಕದ ಈ ನಿರ್ಧಾರದಿಂದ ಭಾರತೀಯರಿಗಂತೂ ಜಾಕ್ ಪಾಟ್ !

Leave A Reply

Your email address will not be published.