Physical Assault: ಅಣ್ಣ ಕರೆದನೆಂದು ಗೆಳೆಯನಿಂದಲೇ ಕಾಲೇಜು ಹುಡುಗಿಯ ಕಿಡ್ನ್ಯಾಪ್- ಬಿಯರ್ ಕುಡಿಸಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ !!

Karnataka crime news Physical assault on ballary student by her friends at koppala

Physical assault: ಕೊಪ್ಪಳದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಕಾಲೇಜಿನ(College Student) ತಂಡವೊಂದು ಕಾಲೇಜಿನಿಂದಲೇ ಅಪಹರಿಸಿ ಸಾಮೂಹಿಕ ಅತ್ಯಾಚಾರ (Mass Physical assualt)ನಡೆಸಿ ವಿಕೃತಿ ಮೆರೆದ ಘಟನೆ ನಡೆದಿದೆ.

ಕೊಪ್ಪಳದಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಪರೀಕ್ಷೆ ಮುಗಿಸಿ ಹೊರ ಬಂದ ಸಂದರ್ಭದಲ್ಲಿ ಆಕೆಯನ್ನು ಕರೆದ ವ್ಯಕ್ತಿಯೊಬ್ಬ ಅಣ್ಣ ಹೊರಗೆ ಕಾಯುತ್ತಿದ್ದಾನೆ ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿ ಆಕೆ ಅಣ್ಣ ಬಂದಿದ್ದಾನೆಂದು ಹೊರಗೆ ಬಂದು ನೋಡಿದಾಗ ಆಕೆಯ ಸ್ನೇಹಿತನ ಜೊತೆಗೆ ಮೂವರು ಮಂದಿ ಮನೆಗೆ ಕರೆದೊಯ್ಯುವುದಾಗಿ ತಿಳಿಸಿ ಕೊಪ್ಪಳ ಜಿಲ್ಲೆಯ ಸಣಾಪುರಕ್ಕೆ ಕರೆದೊಯ್ದಿದ್ದಾರೆ. ಆ ಬಳಿಕ, ಅಂತರಾಳ ಕೆಫೆ ಹೋಟೆಲ್ಗೆ ಕರೆದೊಯ್ದು ಆಕೆಗೆ ಬಿಯರ್ ಕುಡಿಸಿದ ಪಾಪಿಗಳು ಆಕೆಯ ಮೇಲೆ ಅತ್ಯಾಚಾರ (Physical assault)ನಡೆಸಿದ್ದಾರೆ.

ಬಳ್ಳಾರಿಯ ಕಾಲೇಜು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳಕ್ಕೆ ಕರೆ ತಂದು ಅಲ್ಲಿ ಬಿಯರ್‌ ಕುಡಿಸಿ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿರುವ (Girl kidnapped and Raped) ಕುರಿತು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಬಳ್ಳಾರಿ ನಗರದ ಕೌಲ್ ಬಜಾರ್ನ ನವೀನ್, ಸಾಕೀಬ್, ತನು ಸೇರಿದಂತೆ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ನಾಲ್ವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Actress Sreeleela: ಬಾಲಯ್ಯನ ಮಗನ ಕೈಹಿಡಿಯುತ್ತಾರಾ ಕನ್ನಡದ ಕಿಸ್ ಬೆಡಗಿ ಶ್ರೀಲೀಲಾ ಮದುವೆ?! ಟಾಲಿವುಡ್ ಅಂಗಳದಲ್ಲಿ ಶುರುವಾಯ್ತು ಹೊಸ ಗುಸು ಗುಸು ?!

Leave A Reply

Your email address will not be published.