Honeytrap : ನರ್ಸ್ ಅನ್ನು ಗರ್ಭಿಣಿ ಮಾಡಿದ ಡಾಕ್ಟರ್- ಮಾಡೋದೆಲ್ಲಾ ಮಾಡಿ, ಆಕೆಯ ಮೇಲೆ ಹನಿಟ್ರ್ಯಾಪ್ ಕೇಸ್ ದಾಖಲಿಸಿದ ಭೂಪ

Karnataka crime news Rane bennuru doctor honeytrap case file against nurse at haveri

Honeytrap: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ(Doctor)ನರ್ಸ್ ಜೊತೆ ಪ್ರೀತಿಯ ನಾಟಕವಾಡಿ ಆಕೆಯನ್ನು ಗರ್ಭಿಣಿ (Preganancy)ಮಾಡಿ ಮೋಸ ಮಾಡಿದ್ದು ಸಾಲದೆಂಬಂತೆ ಆಕೆಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ ಘಟನೆ ವರದಿಯಾಗಿದೆ.

ರಾಣೆಬೆನ್ನೂರಿನ ಪ್ರತಿಷ್ಠಿತ ಹಿತ್ತಲಮನಿ ದಂತ ಆಸ್ಪತ್ರೆಯ ವೈದ್ಯನಾಗಿದ್ದ ಡಾ.ವಿಜಯ್ ಕುಮಾರ್, ಅದೇ ಆಸ್ಪತ್ರೆಯ ನರ್ಸ್ ರೇಖಾಳನ್ನು ಪ್ರೀತಿಸುತ್ತಿದ್ದನಂತೆ(Love). ಇದೇ ರೀತಿ ನರ್ಸ್ ರೇಖಾಳನ್ನು ವೈದ್ಯ ಮೂರು ಬಾರಿ ಗರ್ಭಿಣಿಯನ್ನಾಗಿ ಮಾಡಿದ್ದನಂತೆ ಭೂಪ!!! ರೇಖಾ ಮದುವೆ ವಿಚಾರವನ್ನು ಪ್ರಸ್ತಾಪಿಸುವಾಗಲೆಲ್ಲ ವೈದ್ಯ ನಿರಾಕರಿಸುತ್ತಿದ್ದನಂತೆ. ವೈದ್ಯನ ವರ್ತನೆಗೆ ಬೇಸತ್ತ ನರ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಸಂದರ್ಭ ವೈದ್ಯ ಹೊಸ ನಾಟಕ ಪ್ರಹಸನ ಶುರು ಮಾಡಿಕೊಂಡಿದ್ದಾನೆ.ಪೊಲೀಸರಿಗೂ ಹಣದ ಆಮಿಷವೊಡ್ಡಿ ಆಕೆ ತನ್ನಿಂದ ದೂರಾಗುವಂತೆ ಮನವಿ ಮಾಡಿದ್ದನಂತೆ. ಇದಲ್ಲದೆ, ನರ್ಸ್ ರೇಖಾಳ ಮೊಬೈಲ್ ನಲ್ಲಿದ್ದ ಎಲ್ಲಾ ದಾಖಲೆಗಳನ್ನು ಪೊಲೀಸರಿಂದ ಡಿಲಿಟ್ ಮಾಡಿಸಿ ಲಕ್ಷಾಂತರ ರೂಪಾಯಿ ಹಣ ನೀಡಲು ಮುಂದಾಗಿ ಆಕೆಯ ವಿರುದ್ಧವೇ ಹನಿಟ್ರ್ಯಾಕ್ (Honeytrap)ಕೇಸ್ ಕೂಡ ದಾಖಲಿಸಿದ್ದನಂತೆ.

ನರ್ಸ್ ರೇಖಾ ತನಗಾದ ಅನ್ಯಾಯದ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ವೈದ್ಯನಿಂದ ತನಗಾದ ಅನ್ಯಾಯ ಹಾಗೂ ಪೊಲೀಸ್ ಠಾಣೆಯಲ್ಲಿಯೂ ಅನ್ಯಾಯ ನಡೆದಿರುವ ಕುರಿತು ಹೇಳಿಕೊಂಡದ್ದಲ್ಲದೆ ವೈದ್ಯಕೀಯ ಪರೀಕ್ಷೆಗೂ ಸಿದ್ಧ ಎಂದು ನರ್ಸ್ ಹೇಳಿಕೊಂಡಿದ್ದಳು. ಈ ವೇಳೆ ಪೊಲೀಸರು ಆರೋಪಿ ವೈದ್ಯ ವಿಜಯ್ ಕುಮಾರ್ ವಿರುದ್ಧ ಪೊಲೀಸರು ಅತ್ಯಾಚಾರ(Rape)ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಇದನ್ನೂ ಓದಿ: Mangaluru Dasara: ದಸರಾ ಉತ್ಸವಕ್ಕೆ ಭರ್ಜರಿಯಾಗೆ ಸಿಂಗಾರವಾಗ್ತಿದೆ ಕರಾವಳಿ ‘ಕುದ್ರೋಳಿ’ – ಆದ್ರೆ ಈ ಸ್ತಬ್ಧಚಿತ್ರಗಳಿಗೆ ಇರೋದಿಲ್ಲ ಅವಕಾಶ!

Leave A Reply

Your email address will not be published.