Bangalore airport recruitment: ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ- ಬೆಂಗಳೂರು ವಿಮಾನ ನಿಲ್ದಾಣದಲ್ಲಿದೆ ಭರ್ಜರಿ 12 ಸಾವಿರ ಹೊಸ ಜಾಬ್ ಆಫರ್

Job news Bangalore airport recruitment 2023 12000 post apply now

Bangalore airport recruitment : ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ (Kempegowda International airport) ಸಾಕಷ್ಟು ಅಭಿವೃದ್ಧಿ ಹೊಂದಿರುವ ವಿಮಾನ ನಿಲ್ದಾಣ ಆಗಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದ ಪ್ರಗತಿ ಇಡೀ ದೇಶಕ್ಕೆ ಮಾದರಿಯಾಗಿದೆ.

ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ ಎರಡನೇ ಟರ್ಮಿನಲ್‌ ಆರಂಭಕ್ಕೆ ಮುನ್ನ ವಿಮಾನ ನಿಲ್ದಾಣದಲ್ಲಿ 25 ಸಾವಿರ ಜನ ಉದ್ಯೋಗಿಗಳಿದ್ದರು. ಈಗ ಸಂಖ್ಯೆ ಈಗ 38 ಸಾವಿರಕ್ಕೆ ಏರಿದೆ. ಮುಂದಿನ ಎರಡು ವರ್ಷಗಳಲ್ಲಿ ಇದು 50 ಸಾವಿರಕ್ಕೆ ಏರಲಿದೆ. ಅಂದರೆ 12 ಸಾವಿರ ಹೊಸ ಜಾಬ್‌ಗಳು (Bangalore airport recruitment) ಸೃಷ್ಟಿಯಾಗಲಿವೆ.

ಹೌದು, ಈ ಕುರಿತು ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್. ಅವರು ಉದ್ಯೋಗಾಂಕ್ಷಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದು ಅಕ್ಟೋಬರ್‌ 11ರಂದು ರಾಜಧಾನಿಯಲ್ಲಿ ನಡೆದ ಸೋಲ್ ಬೆಂಗಳೂರು ಬಿಸಿನೆಸ್ ಕಾನ್‌ಕ್ಲೇವ್‌ನಲ್ಲಿ ‘ಬೆಂಗಳೂರು ರೂಪಾಂತರ’ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದರು. ಜೊತೆಗೆ ಮುಂದಿನ 2 ವರ್ಷಗಳಲ್ಲಿ ಇಂಡಿಗೋ, ವಿಮಾನ ನಿಲ್ದಾಣ ಆವರಣದಲ್ಲಿ ಏರ್ ಇಂಡಿಯಾ ಹಬ್ ನಿರ್ಮಾಣ ಆಗಲಿದೆ. ಇದರಿಂದ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಸದ್ಯ ನಿರ್ಮಾಣವಾಗಿರುವ ಎರಡನೇ ಟರ್ಮಿನಲ್‌ನ ಉಳಿದ ಭಾಗದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರ ಜತೆಗೆ 2,500 ಕೋಟಿ ವೆಚ್ಚದ ಏರ್‌ಪೋರ್ಟ್ ಸಿಟಿಯ ನಿರ್ಮಾಣ ಕಾರ್ಯ ನಡೆಯಬೇಕಾಗಿದೆ. ಈ ಮೂಲಕ ಮುಂದಿನ 2 ವರ್ಷದಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದರು.

ಬೆಂಗಳೂರು ವಿಮಾನದಲ್ಲಿ ಪ್ರಯಾಣಿಕರ ಸಂಖ್ಯೆ 2021-22ರಲ್ಲಿ 1.62 ಕೋಟಿ ಇತ್ತು. ಅದು 2022-23ರ ಹೊತ್ತಿಗೆ 3.19 ಕೋಟಿಗೆ ಏರಿತ್ತು. 2024ರ ಹೊತ್ತಿಗೆ ಇದು 4 ಕೋಟಿಗೆ ಏರುವ ಸಾಧ್ಯತೆ ಇದೆ. ಇಷ್ಟೊಂದು ಪ್ರಯಾಣ ದಟ್ಟಣೆ ನಿಭಾಯಿಸಲು ಇನ್ನೊಂದು ವಿಮಾನ ನಿಲ್ದಾಣದ ಅಗತ್ಯತೆ ಇದೆ ನಿರ್ದೇಶಕ, ಸಿಇಒ ಹರಿ ಮರಾರ್ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ನೀವು ಹೆಣ್ಣು ಮಗುವಿನ ತಂದೆಯೇ ? ಹಾಗಿದ್ರೆ ಹೆಚ್ಚು ಸಮಯ ಬದುಕುತ್ತೀರಂತೆ !! ಯಾಕೆ ಗೊತ್ತಾ ?!

Leave A Reply

Your email address will not be published.