K. J. George Missing: ಕಾಣೆಯಾದ ಇಂಧನ ಸಚಿವ ಕೆ. ಜೆ ಜಾರ್ಜ್, ಹುಡುಕಿಕೊಟ್ಟವರಿಗೆ ವಿಚಿತ್ರ ಬಹುಮಾನ ಘೋಷಿಸಿದ ಬಿಜೆಪಿ !!

Karnataka politics news KJ George missing those who find him single phase electricity will be free

KJ George missing : ರಾಜಕೀಯ ಪಕ್ಷಗಳು ಒಂದರ ಮೇಲೊಂದು ಟೀಕಾ ಪ್ರಹಾರ ನಡೆಸುವುದು ಮಾಮೂಲಿ. ಇದೀಗ, ರಾಜ್ಯದ ಜನತೆಗೆ ಕಿವಿಗೆ ಹೂವಿಟ್ಟು ಸದ್ದಿಲ್ಲದೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಹೀಗಾಗಿ, ಬಿಜೆಪಿ ಕಾಂಗ್ರೆಸ್ (BJP vs Congress)ವಿರುದ್ಧ ಕಿಡಿ ಕಾರಿದ್ದು, ಇದರ ಮುಂದುವರಿದ ಭಾಗವಾಗಿ ಇಂಧನ ಸಚಿವ ಜಾರ್ಜ್(KJ George Missing)ಕಾಣೆಯಾಗಿದ್ದಾರೆ !! ಹುಡುಕಿಕೊಡಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸರಣಿ ಟ್ವೀಟ್ ಮಾಡಿದ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ಸಚಿವ ಕೆಜೆ ಜಾರ್ಜ್ ಕಾಣೆಯಾಗಿದ್ದಾರೆ, ಹುಡುಕಿ ಕೊಟ್ಟವರಿಗೆ ಸಿಂಗಲ್ ಫೇಸ್ ವಿದ್ಯುತ್ ಫ್ರೀ ನೀಡಲಾಗುವುದು ಎಂದು ಬಿಜೆಪಿ ಪೋಸ್ಟ್ ಮಾಡಿದೆ. ಮೊದಲ ಅವಧಿಯಲ್ಲೂ ಮೊಬೈಲ್ ಟಾರ್ಚ್ ಹಿಡಿದು ಬಜೆಟ್ ಮಂಡಿಸಿದ ಸಾಧನೆ ನಿಮ್ಮದಾಗಿದ್ದು, ಎರಡನೇ ಅವಧಿಯಲ್ಲೂ ಕೂಡ ಇಡೀ ರಾಜ್ಯಕ್ಕೆ ಕತ್ತಲು ಭಾಗ್ಯ ನೀಡಿ ಕತ್ಲೇರಾಮಯ್ಯ ಬಿರುದು ನಿಮ್ಮದಾಗಿಸಿಕೊಂಡಿದ್ದೀರಿ ಎಂದು ಬಿಜೆಪಿ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದೆ.

ರಾಜ್ಯದೆಲ್ಲೆಡೆ ಕತ್ತಲೆ ಭಾಗ್ಯ ನೀಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಜಾರ್ಜ್ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ಕಾಲೆಳೆಯುವ ಪ್ರಯತ್ನ ಮಾಡಿದೆ. ಕಾಣೆಯಾಗಿದ್ದ ಬಸ್ ಸ್ಟಾಂಡ್ ಅನ್ನು ಅಂತಿಮವಾಗಿ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ!!! ಇರಲಿ …ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ!!ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಲೇವಡಿ ಮಾಡಿದೆ.

ಇದನ್ನೂ ಓದಿ: Honeytrap : ನರ್ಸ್ ಅನ್ನು ಗರ್ಭಿಣಿ ಮಾಡಿದ ಡಾಕ್ಟರ್- ಮಾಡೋದೆಲ್ಲಾ ಮಾಡಿ, ಆಕೆಯ ಮೇಲೆ ಹನಿಟ್ರ್ಯಾಪ್ ಕೇಸ್ ದಾಖಲಿಸಿದ ಭೂಪ

Leave A Reply

Your email address will not be published.