Home International Inbar Lieberman: ದೇಶಭಕ್ತ ಇಸ್ರೇಲ್ ನಲ್ಲೊಬ್ಬ ಆಧುನಿಕ ಒನಕೆ ಓಬವ್ವ, ನಿದ್ದೆಯಿಂದ ದಿಡಗ್ಗನೆ ಎದ್ದು ಹೋರಾಡಿದ...

Inbar Lieberman: ದೇಶಭಕ್ತ ಇಸ್ರೇಲ್ ನಲ್ಲೊಬ್ಬ ಆಧುನಿಕ ಒನಕೆ ಓಬವ್ವ, ನಿದ್ದೆಯಿಂದ ದಿಡಗ್ಗನೆ ಎದ್ದು ಹೋರಾಡಿದ ಮಹಿಳೆ– ದೇಶಕ್ಕೆ ನುಗ್ಗಿದ 25 ಹಮಾಸ್ ಉಗ್ರರು ಮಟಾಷ್ !!

Inbar Lieberman

Hindu neighbor gifts plot of land

Hindu neighbour gifts land to Muslim journalist

Inbar Lieberman: ಕಾವಲುಗಾರ ಗಂಡ ಊಟ ಮಾಡುವಾಗ ಚಿತ್ರದುರ್ಗದ ಕೋಟೆ ಹೊಕ್ಕ ಬ್ರಿಟಿಷರನ್ನು ತನ್ನ ಒನಕೆ ಎತ್ತಿ ಕುಟ್ಟಿ ಹಾಕಿದ ಒನಕೆ ಓಬವ್ವನ ಕಥೆ ಕೇಳಿದ್ದೀರಿ. ಇದೀಗ ಯುದ್ಧಗ್ರಸ್ತ ಇಸ್ಟ್ರೆಲ್ ದೇಶದಲ್ಲಿ ಆಧುನಿಕ ಒನಕೆ ಸದ್ದು ಮಾಡಿದೆ. ರಾತ್ರಿ ನಿದ್ರೆಯಿಂದ ದಿಡಗ್ಗನೆ ಎದ್ದು ಕೂತ ಇಸ್ರೇಲ್ ದೇಶ ಭಕ್ತೆಯೊಬ್ಬಳು 25 ಜನರನ್ನು ಸಾಲಾಗಿ ಮಲಗಿಸಿದ್ದಾಳೆ !!!

ಹೌದು, ಹಮಾಸ್​ ಉಗ್ರರು ಮನಬನದಂತೆ ರಾಕೆಟ್​​ ದಾಳಿ ಮಾಡುತ್ತಾ ಇಸ್ರೇಲಿನತ್ತ ಧಾವಿಸುತ್ತಿದ್ದರು. ಹಮಾಸ್ ಉಗ್ರರು ತಾನಿದ್ದ ಗ್ರಾಮದ ಮೂಲಕ ಕೇಕೆ ಹಾಕುತ್ತಾ ಹಾದುಹೋಗುವುದನ್ನು 25 ವರ್ಷದ ಇನ್ಬಾರ್​​ ಲೈಬರ್ಮನ್ (Inbar Lieberman) ಎಂಬ ವೀರ ಯುವತಿ ನೋಡಿದ್ದಾಳೆ. ನಂತರ ತಾನೇ ತನ್ನ ಗ್ರಾಮದ ರಕ್ಷಣೆಗೆ ಒನಕೆ ಓಬವ್ವ ಆಗಿದ್ದಾಳೆ. ಈಕೆ ಬರೋಬ್ಬರಿ 25 ಭಯೋತ್ಪಾದಕರನ್ನು ಸದೆಬಡಿದಿದ್ದಾಳೆ. ಹೆಣ್ಣು ದುರ್ಬಳಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ.

ಪರಿಸ್ಥಿತಿ ಅರಿವಿಗೆ ಬಂದು ಇನ್ಬಾರ್​​ ಲೈಬರ್ಮನ್ ತಕ್ಷಣ ಪಟ್ಟಣದ ಶಸ್ತ್ರಾಗಾರವನ್ನು ತಲುಪಿ, ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಹೊರತೆಗೆದು ಒಂದೊಂದಾಗಿ ತನ್ನ ಊರಿನ ಯುವಕರ ಪಡೆಗೆ ಹಸ್ತಾಂತರಿಸಿದಳು. 12 ಸದಸ್ಯರ ಯುವ ಭದ್ರತಾ ತಂಡವನ್ನು ರಚಿಸಿಕೊಂಡು ಉಗ್ರರ ಸದೆಬಡಿಯಲು ಮುಂದಾದಳು. ಭಾರೀ ತೂಕದ ಶಸ್ತ್ರಗಳನ್ನು ಸ್ವತಃ ತನ್ನ ಮೈಮೇಲೆ ಹೇರಿಕೊಂಡಳು. ಹಮಾಸ್ ಉಗ್ರರು ಬೇಲಿಯನ್ನು ಹಾರಿ, ಕೆಲವೇ ನಿಮಿಷಗಳಲ್ಲಿ ತನ್ನ ಗ್ರಾಮದ ಮೂಲಕ ದೇಶದೊಳಕ್ಕೆ ನುಗ್ಗುವುದನ್ನು ಅಂದಾಜಿಸಿದಳು. ಕೂಡಲೇ ತನ್ನ ಗ್ರಾಮದ ಯುದ್ಧ ಸನ್ನದ್ಧ ಯುವಪಡೆಯನ್ನು ಹುರಿದುಂಬಿಸುತ್ತಾ ಹಮಾಸ್​​ ಉಗ್ರರ ಮೇಲೆ ದೊಡ್ಡ ಸಮರವನ್ನೇ ಸಾರಿದಳು.

ಉಗ್ರರ ಅ​ರಿವಿಗೆ ಬರುವ ಮುನ್ನವೇ 25ಕ್ಕೂ ಹೆಚ್ಚು ಉಗ್ರರು ನೆಲಕ್ಕುರುಳಿದ್ದರು. ನಾಯಕಿ ಲೈಬರ್ಮನ್ ಸ್ವತಃ ಐವರನ್ನು ಕೊಂದಿದ್ದಳು. ಆ ಮೇಲೆ ‘ಹತ್ಯಾಕಾಂಡ’ದ ಸ್ಥಳಕ್ಕೆ ಟ್ರಕ್‌ ಸಮೇತ ಬಂದ ದೇಶದ ಸೈನಿಕ ಪಡೆ, ಅಷ್ಟೂ ಉಗ್ರರ ದೇಹಗಳನ್ನು ಟ್ರಕ್‌ಗೆ ತುಂಬಿಕೊಂಡು ಹೋದರು. ಇಸ್ರೇಲ್ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಬರುವವರೆಗೂ ಸುಮಾರು ಮೂರು ಗಂಟೆಗಳ ಕಾಲ ಭೀಕರ ಗುಂಡಿನ ಕಾಳಗ ಆ ಗ್ರಾಮದಲ್ಲಿ ನಡೆದಿತ್ತು.

ಅಂದಹಾಗೆ, ಇಸ್ರೇಲ್​​ ಪುಟ್ಟ ಸ್ವಾಭಿಮಾನಿ ರಾಷ್ಟ್ರ. ಇಲ್ಲಿನ ಪ್ರತಿ ಪ್ರಜೆಯೂ ಯುದ್ಧ ತರಬೇತಿ ಪಡೆದಿರುತ್ತಾರೆ. ಮತ್ತು ದೇಶದ ತುಂಬಾ ಅಲ್ಲಲ್ಲಿ ಸ್ಥಳೀಯ ಮಟ್ಟದಲ್ಲಿ ಪುಟ್ಟ ಪುಟ್ಟ ರಕ್ಷಣಾ ಪಡೆಗಳನ್ನು ನಿಯೋಜಿಸಿಕೊಂಡಿರುತ್ತದೆ. ಹಾಗೂ ಇನ್ಬಾರ್​​ ಲೈಬರ್ಮನ್ ತನ್ನ ನಿರ್-ಆಮ್ ಕಿಬ್ಬುಟ್ಜ್ ಎಂಬ ಗ್ರಾಮದ ಭದ್ರತಾ ಮುಖ್ಯಸ್ಥೆಯಾಗಿದ್ದಳು. ಸದ್ಯ ಈಕೆ ಆಧುನಿಕ ಒನಕೆ ಓಬವ್ವ ಎಂದು ಜನಪ್ರಿಯವಾದರು.

ಇದನ್ನೂ ಓದಿ: OnePlus 11R 5G Smartphone: ಮೊಬೈಲ್ ಖರೀದಿಸೋರಿಗೆ ಬಂಪರ್ ಆಫರ್- ಕೇವಲ 4,800ರೂ ಗೆ ಸಿಗುತ್ತಿದೆ Oneplus 11R !! ಮುಗಿಬಿದ್ದ ಜನ !