Good News for Farmers : ರೈತರೇ ನಿಮಗಿದೋ ಭರ್ಜರಿ ಸುದ್ದಿ, ಸಾಲದ ಹೊರೆಯಿಂದ ಸಿಗಲಿದೆ ಬಿಗ್ ರಿಲೀಫ್ !!

Good news from the government about farmers' loans

Good News for Farmers : ರೈತರಿಗೆ ಭರ್ಜರಿ ಸುದ್ದಿ (Good News for Farmers) ಇಲ್ಲಿದೆ. ಸಾಲದ ಹೊರೆಯಿಂದ ಸಿಗಲಿದೆ ಬಿಗ್ ರಿಲೀಫ್. ಹೌದು, ರೈತರಿಗೆ ಆಸರೆಯಾಗಲು ಬ್ಯಾಂಕ್‌ಗಳು ಮುಂದೆ ಬಂದಿದ್ದು, ಸಾಲ ಮರು ಪಾವತಿ ಹೊರೆಗೆ ತಾತ್ಕಾಲಿಕ ರಿಲೀಫ್ ಸಿಗಲಿದೆ.

ಮುಂಗಾರು ಮಳೆ ವೈಲ್ಯ, ತೀವ್ರತರ ಶುಷ್ಕ ವಾತಾವರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿ, ಅಗತ್ಯ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಈಗಾಗಲೇ 161 ತೀವ್ರ, 34 ಸಾಧಾರಣ ಬರಪೀಡಿತ ತಾಲೂಕಗಳನ್ನು ಗುರುತಿಸಿದ್ದು, ಇನ್ನೂ 21 ತಾಲೂಕುಗಳನ್ನು ಬರ ಪೀಡಿತಪಟ್ಟಿಗೆ ಸೇರಿಸಲು ತಯಾರಿ ನಡೆಸಿದೆ.

ಸರ್ಕಾರ ಕೈಗೊಳ್ಳಲಿರುವ ಪರಿಹಾರ ಕ್ರಮಗಳನ್ನು ವಿಸ್ತರಿಸುವ ಭಾಗವಾಗಿ ಅರ್ಹ ರೈತರ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸಾಲಗಳನ್ನು ಪುನರ್ ರಚಿಸಬೇಕೆಂಬ ಸೂಚನೆ ರವಾನೆಯಾಗಿದೆ. ಹಾಗಾಗಿ ಅಲ್ಪಾವಧಿ ಸಾಲಗಳು ದೀರ್ಘಾವಧಿ ಸಾಲದ ರೂಪದಲ್ಲಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನದಂತೆ ಪರಿಹಾರ ಕ್ರಮಗಳನ್ನು ಬ್ಯಾಂಕ್‌ಗಳು ಕೈಗೊಳ್ಳಲಿವೆ.

 

ಇದನ್ನು ಓದಿ: ಭೂಮಿಯಲ್ಲಿರೋ ಚಿನ್ನ ಹುಡುಕಲು ಬಂತು ಹೊಸ ಮಷಿನ್ !! ನೀವು ಕೊಳ್ಳೋದಾದ್ರೆ ಎಷ್ಟಕ್ಕೆ ಸಿಗುತ್ತೆ ?!

Leave A Reply

Your email address will not be published.