Belthangady: ಕಳೆಂಜ ಮೀಸಲು ಅರಣ್ಯ ಪ್ರದೇಶ ಪ್ರಕರಣ: ಇಂದಿನಿಂದ (ಅ.11) ಸರ್ವೆ ಕಾರ್ಯ ಆರಂಭ

belthangady news kalenja forest place issue survey matter begins

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್‌ 309ರ ಅಂದರೆ ನಿಡ್ಲೆ ವಿಸ್ತೃತ ಬ್ಲಾಕ್‌ 2 ರ ಮತ್ತು ಕಳೆಂಜ ವಿಸ್ತೃತ ಬ್ಲಾಕ್‌ ನ ಜಂಟಿ ಸರ್ವೆ ಕಾರ್ಯ ಇಂದು (ಅ.11) ರಿಂದ ಆರಂಭಗೊಳ್ಳಲಿದೆ.

ಅರಣ್ಯ ಅಧಿಕಾರಿಗಳು ತಾಲೂಕು ತಹಶೀಲ್ದಾರ್‌, ಉಪ್ಪಿನಂಗಡಿ ವಲಯ ಅಧಿಕಾರಿ, ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಡಿಎಲ್‌ಆರ್‌ ಸರ್ವೆ ಮೂಲಕ ಸುಮಾರು 8446 ಎಕರೆಯಷ್ಟು ಪ್ರದೇಶ ಸರ್ವೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ವಿವರ: ಕಳೆಂಜ ಗ್ರಾಮದ ಅಮ್ಮಿಡ್ಕ ಕುದ್ದಮನೆ ಸೇಸ ಗೌಡ ಎಂಬುವವರ ಕುಟುಂಬವು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಅ.6 ರಂದು ಅರಣ್ಯ ಇಲಾಖೆ ಬಡ ಕುಟುಂಬದ ಫೌಂಡೇಶನ್‌ ಕಿತ್ತೆಸೆದಿದೆ. ಇದರಿಂದ ನೊಂದ ಮನೆ ಮಗ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ.

ನಂತರ ಸ್ಥಳಕ್ಕೆ ಬಂದ ಶಾಸಕ ಹರೀಶ್‌ ಪೂಂಜ ಅವರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ಚಕಮಕಿ ನಡೆಯಿತು. ನಂತರ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರಿಗೆ ಕರೆ ಮಾಡಿದ ಹರೀಶ್ ಪೂಂಜಾ ಸಮಸ್ಯೆ ಬಗ್ಗೆ ಹೇಳಿದ್ದು, ಸಚಿವರು ಸದ್ಯ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮೇಲಾಧಿಕಾರಿಗಳಿಂದ ವರದಿ ಪಡೆದು ಬಳಿಕ ನಿರ್ಧಾರ ಕೈಗೊಳ್ಳಲು ಆದೇಶ ನೀಡಿದ್ದರು.

ಅನಂತರ ಈ ಘಟನೆಯ ಕುರಿತು ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅ.7 ರಂದು ಅಕ್ರಮವಾಗಿ ಮನೆ ನಿರ್ಮಾಣ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರ ಬಗ್ಗೆ ಅ.7ರಂದು ರಾತ್ರಿ ಪ್ರಕರಣ ದಾಖಲು ಮಾಡಿದ್ದಾರೆ.

ಅ.9 ರಂದು ಮತ್ತೆ ಅರಣ್ಯ ಅಧಿಕಾರಿಗಳು ಈ ಶೆಡ್‌ ನ ತೆರವು ಕಾರ್ಯಕ್ಕೆ ಬಂದಿದ್ದರು. ಈ ಸಂದರ್ಭ ಶಾಸಕರು, ಎಂಎಲ್ಸಿ, ಹಿಂದೂ ಮುಖಂಡರು ಸ್ಥಳೀಯ ಜನಪ್ರತಿನಿಧಿಗಳು ಶೆಡ್‌ ತೆರವುಗೊಳಿಸದಂತೆ ಹೇಳಿದ್ದು, ಅಲ್ಲದೆ ಅರಣ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಕೆಲ ಕಾಲ ವಾಗ್ವಾದ ನಡೆದಿತ್ತು.

 

ಇದನ್ನು ಓದಿ: Mangaluru: ನವ ವಿವಾಹಿತೆ ಅನುಮಾನಾಸ್ಪದ ಸಾವು!

Leave A Reply

Your email address will not be published.