7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?!

7th pay commission salary details latest news

7th Pay Commission: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ(7th Pay Commission) ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳದ ಕುರಿತು ಬೇಡಿಕೆ, ವಿವರಣೆಯನ್ನು ನೀಡಲಾಗಿದ್ದು, ಈ ಕುರಿತ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ 7ನೇ ವೇತನ ಆಯೋಗಕ್ಕೆ ಹಿರಿಯ ಸಹಾಯಕರು (Senior Assistant)/ ಹಿರಿಯ ಶೀಘ್ರಲಿಪಿಗಾರರು (Senior Steno)/ಶಾಖಾಧಿಕಾರಿ (Section Officer) ವೃಂದದ ಹುದ್ದೆಗಳ ವೇತನದ ಕುರಿತ ಮಾಹಿತಿ ಇಲ್ಲಿದೆ ನೋಡಿ.ಕೇಂದ್ರ ಸಚಿವಾಲಯದಲ್ಲಿ ಹಾಗೂ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಸದರಿ ಹುದ್ದೆಯ ಸಹಾಯಕ ಶಾಖಾಧಿಕಾರಿಯಾಗಿರುವ ಜೊತೆಗೆ ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ಈ ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ವೇತನ ಶ್ರೇಣಿ ರೂ. 37,900-70,850 ರಿಂದ ರೂ. 10,900-78,200ಕ್ಕೆ ಹೆಚ್ಚಿಸಲು ಬೇಡಿಕೆ ಇಡಲಾಗಿದೆ.

ಅತ್ಯಂತ ಜವಾಬ್ದಾರಿಯುತವಾದ ಹುದ್ದೆಗಳಲ್ಲಿ ಹಿರಿಯ ಶೀಘ್ರಲಿಪಿಗಾರರ ಹುದ್ದೆ ಕೂಡ ಒಂದಾಗಿದ್ದು, ಪ್ರಸ್ತುತ ಹಿರಿಯ ಸಹಾಯಕ ಹುದ್ದೆಯ ಸಮಾನಾಂತರ ಹುದ್ದೆಯಾಗಿರುತ್ತದೆ. ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಂತಹ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಆಪ್ತ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರ ವೇತನ ಶ್ರೇಣಿಯನ್ನು 37,900-70,850 ಹೆಚ್ಚಿಸಲು ಬೇಡಿಕೆ ಇಡಲಾಗಿದೆ.

ಶಾಖಾಧಿಕಾರಿ ಹುದ್ದೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಯು ಅತ್ಯಂತ ಪ್ರಮುಖವಾದ ಹುದ್ದೆಯಾಗಿದ್ದು, ಒಂದು ಶಾಖೆಯ ಸಮಸ್ತ ಉಸ್ತುವಾರಿಯನ್ನು ಹೊಂದಿರುತ್ತದೆ. ತಹಶೀಲ್ದಾರ್ ಹುದ್ದೆಯನ್ನು ಗ್ರೇಡ್-1 ಮತ್ತು ಗ್ರೇಡ್ -2 ತಹಶೀಲ್ದಾರ್ ಹುದ್ದೆಗಳನ್ನಾಗಿ ಬೇರ್ಪಡೆ ಮಾಡಿ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ. ಗ್ರೇಡ್ -1 ತಹಶೀಲ್ದಾರ್ ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಯ ವೇತನ ಶ್ರೇಣಿಗಿಂತ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಗೆ ನೀಡಿಲ್ಲ. ಪ್ರಸಕ್ತ ವೇತನ ಸಮಿತಿಯು ಈ ತಾರತಮ್ಯವನ್ನು ಹೋಗಲಾಡಿಸಬೇಕೆಂಬುದು ಸಂಘದ ಮನವಿಯಾಗಿದೆ.

ಪ್ರಸ್ತುತ ಸಚಿವಾಲಯದ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಪೀಠಾಧಿಕಾರಿ (Desk Officer System) ವ್ಯವಸ್ಥೆಯನ್ನು ಜಾರಿಗೊಳಿಸಲು ನಿಯಮಗಳಲ್ಲಿ ಅನುವು ಮಾಡಿಕೊಡಲಾಗಿದೆ. ಸದರಿ ಹುದ್ದೆಗೆ ಅಧೀನ ಕಾರ್ಯದರ್ಶಿ ಅಥವಾ ಶಾಖಾಧಿಕಾರಿಗಳನ್ನು ನಿಯೋಜಿಸಬಹುದಾಗಿರುತ್ತದೆ. ಈ ತತ್ಸಬಂಧ ಪ್ರಸ್ತುತ ವೇತನ ಶ್ರೇಣಿಯನ್ನು ರೂ. 43,100-83,900 ರಿಂದ 52,650-97,100ಕ್ಕೆ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೀಠಾಧಿಕಾರಿ ಹುದ್ದೆಯಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸುವ ಹಿನ್ನೆಲೆ ಶಾಖಾಧಿಕಾರಿಗಳಿಗೆ ಇತರೆ ಇಲಾಖೆಗಳಲ್ಲಿ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುವವರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನೇ ನಿಗದಿ ಮಾಡಿರುವುದು ಸರಿಯಲ್ಲ ಎಂದು ಹೇಳಲಾಗಿದೆ.

 

ಇದನ್ನು ಓದಿ: UGC New Guidelines: ವಿಶ್ವ ವಿದ್ಯಾಲಯ, ಕಾಲೇಜುಗಳಿಗೆ ಬಂತು ಹೊಸ ನಿಯಮ- ಕಡ್ಡಾಯವಾಗಿ ಪಾಲಿಸಬೇಕೆಂದ ಯುಜಿಸಿ

Leave A Reply

Your email address will not be published.