UGC New Guidelines: ವಿಶ್ವ ವಿದ್ಯಾಲಯ, ಕಾಲೇಜುಗಳಿಗೆ ಬಂತು ಹೊಸ ನಿಯಮ- ಕಡ್ಡಾಯವಾಗಿ ಪಾಲಿಸಬೇಕೆಂದ ಯುಜಿಸಿ

New Rules for Universities, Colleges

UGC New Guidelines: ವಿಶ್ವ ವಿದ್ಯಾಲಯ, ಕಾಲೇಜುಗಳಿಗೆ ಹೊಸ ನಿಯಮ ಮಾಡಿದ್ದು, ಕಡ್ಡಾಯವಾಗಿ ಪಾಲಿಸಬೇಕೆಂದು ಯುಜಿಸಿ ತಿಳಿಸಿದೆ. ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಎಚ್‌ಇಐ) ಯಾವುದೇ ಕೋರ್ಸ್ ಅನ್ನು ಅನುಸರಿಸುವ ಅಥವಾ ನೋಂದಾಯಿಸುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಸಹಾಯ ಆಗಲಿದೆ. ದೇಶದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯವಿಶ್ವವಿದ್ಯಾಲಯಗಳು, ಡೀಮ್ಸ್ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಅವುಗಳಿಗೆ ಸಂಯೋಜಿತವಾಗಿರುವ ಕಾಲೇಜುಗಳು ಈಗ ತಮ್ಮ ವೆಬ್ ಸೈಟ್ ಗಳಲ್ಲಿ ಕೆಲವು ಮೂಲಭೂತ ಮಾಹಿತಿಯನ್ನು ಪ್ರಕಟಿಸಬೇಕಾಗುತ್ತದೆ ಎಂದು ಹೊಸ ನಿಯಮ ತಂದಿದೆ.

ಹೌದು, ವಿಶ್ವ ವಿದ್ಯಾಲಯಗಳು ತಮ್ಮ ವೆಬ್ ಸೈಟ್ ಗಳಲ್ಲಿ ಸಂಸ್ಥೆ ಮತ್ತು ಅದರ ಶ್ರೇಯಾಂಕ , ಕೋರ್ಸ್ ಗಳು, ಶುಲ್ಕ ಗಳು, ಕ್ಯಾಲೆಂಡರ್, ಹಾಸ್ಟೆಲ್ ಗಳು, ಫೆಲೋಶಿಪ್, ವಿದ್ಯಾರ್ಥಿ ವೇತನಗಳು, ಪ್ರಕಟಣೆಗಳು ಮುಂತಾದ ಮಾಹಿತಿ ಯನ್ನು ವೆಬ್ ಸೈಟ್ ನಲ್ಲಿ ನೀಡಬೇಕು. ಅಲ್ಲದೇ ಈ ಸಂಸ್ಥೆ ಗಳು ಕಾಲ ಕಾಲಕ್ಕೆ ಈ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನವೀಕರಿಸಬೇಕಾಗುತ್ತದೆ.

ಈ ಮಾಹಿತಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಅವರು ಮಾಹಿತಿ ನೀಡಿದ್ದು, ವಿದ್ಯಾರ್ಥಿ ಗಳು ಅಥವಾ ಪೋಷಕರು, ಅಥವಾ ಸಂಶೋಧನಾ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಹಳೆಯ ವಿದ್ಯಾರ್ಥಿಗಳು ಅಥವಾ ಇನ್ನಾವುದೇ ನಾಗರಿಕರರಾಗಿರಲಿ ಪ್ರತಿಯೊಬ್ಬರೂ ವಿಶ್ವವಿದ್ಯಾಲಯ ಅಥವಾ ಎಚ್‌ಇಐಗಳ ಬಗ್ಗೆ ಕೆಲವು ಮಾಹಿತಿ ತಿಳಿಯಲು ಬಯಸುತ್ತಾರೆ. ಆದ್ದರಿಂದ ಈ ನಿಯಮ ಕಡ್ಡಾಯ ಎಂದು ಯುಜಿಸಿ ಅಧ್ಯಕ್ಷರು ತಿಳಿಸಿದ್ದಾರೆ .

ಈ ಮೊದಲು ಅನೇಕ ಸಂಸ್ಥೆಗಳ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕಾದ ಕನಿಷ್ಠ ಮೂಲಭೂತ ಮಾಹಿತಿ ಕೂಡ ಲಭ್ಯವಿಲ್ಲ. ಮತ್ತು ಮಾಹಿತಿ ಯನ್ನು ನವೀಕರಿಸಲಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ವೆಬ್ ಸೈಟ್ ಕಾರ್ಯ ನಿರ್ವಹಿಸುತ್ತಿಲ್ಲ ಅಥವಾ
ನವೀಕರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ, ಎಲ್ಲಾ ಪಾಲುದಾರರು ಅನಾನುಕೂಲತೆ
ಮತ್ತು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಸದ್ಯ ನಾವು
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮೂರನೇ ವರ್ಷದಲ್ಲಿರುವ ಸಮಯದಲ್ಲಿ ವಿಶ್ವವಿದ್ಯಾಲಯಗಳು ತಮ್ಮ ವೆಬ್ಬೆಟ್ಗಳಲ್ಲಿ ಮೂಲಭೂತ ಮಾಹಿತಿಯನ್ನು ಲಭ್ಯವಾಗುವಂತೆ ಅವುಗಳನ್ನು ನವೀಕರಿಸುವುದು ವಿವೇಕಯುತವಾಗಿದೆ’ ಎಂದು ಯುಜಿಸಿ ಅಧ್ಯಕ್ಷರು ಹೇಳಿದರು.

ಸದ್ಯ ಎಲ್ಲಾ ವಿವಿಗಳು ಮತ್ತು ಕಾಲೇಜುಗಳು ಈ ಮಾಹಿತಿಯನ್ನು ವೆಬ್ಬೆಟ್ನಲ್ಲಿ ನೀಡಬೇಕಾಗುತ್ತದೆ.
ವಿಶ್ವವಿದ್ಯಾಲಯಗಳು ಮತ್ತು ಇತರ ಎಚ್‌ಇಐಗಳು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕಾದ ಕನಿಷ್ಠ ಮೂಲಭೂತ ಮಾಹಿತಿಯ ಪಟ್ಟಿಯನ್ನು ಆಯೋಗ ಸಿದ್ದಪಡಿಸಿದೆ ಎಂದು ಯುಜಿಸಿ ಅಧ್ಯಕ್ಷರು ಮಾಹಿತಿ ನೀಡಿದರು. ಈ ಪಟ್ಟಿಯ ಪ್ರಕಾರ, ಎಲ್ಲಾ ಸಂಸ್ಥೆಗಳು ಈಗ ತಮ್ಮ ವೆಬ್ ಸೈಟ್ ನಲ್ಲಿ ಮೂಲಭೂತ ಮಾಹಿತಿಯನ್ನು ಪ್ರಕಟಿಸುವುದು ಕಡ್ಡಾಯವಾಗಲಿದೆ.

ಯುಜಿಸಿಯ ಮಾರ್ಗಸೂಚಿ ಇಂತಿವೆ:
ಎಚ್‌ಇಐ / ವಿಶ್ವವಿದ್ಯಾಲಯದ ಬಗ್ಗೆ – ಅವಲೋಕನ, ಸಂಬಂಧಿತ ಕಾಯ್ದೆಗಳು, ಅಭಿವೃದ್ಧಿ ಯೋಜನೆಗಳು, ವಾರ್ಷಿಕ ವರದಿಗಳು, ಸಂಯೋಜಿತ ಸಂಸ್ಥೆಗಳು / ಕಾಲೇಜುಗಳು, ಭಾರತ ಮತ್ತು ವಿದೇಶಗಳಲ್ಲಿನ ಕ್ಯಾಂಪಸ್ ಗಳು.

ಆಡಳಿತ(ಪ್ರೊಫೈಲ್ ಮತ್ತು ಫೋಟೋದೊಂದಿಗೆ) ರಚನೆ, ವಿಶ್ವವಿದ್ಯಾಲಯದ ಉಪಕುಲಪತಿ,
ಉಪಕುಲಪತಿ ರಿಜಿಸ್ಟ್ರಾರ್, ಹಣಕಾಸು ಅಧಿಕಾರಿ, ಪರೀಕ್ಷಾ ನಿಯಂತ್ರಕ, ಮುಖ್ಯ ಜಾಗೃತ ಅಧಿಕಾರಿ, ನಾಯಕತ್ವ (ಡೀನ್, ವಿಭಾಗದ ಮುಖ್ಯಸ್ಥರು, ವಿಭಾಗ,
ಕೇಂದ್ರ, ಇತ್ಯಾದಿ).

ಶೈಕ್ಷಣಿಕ – ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಲೆಂಡರ್ ಶಾಲೆಗಳು, ಇಲಾಖೆಗಳು, ಕೇಂದ್ರ ಗಳು, ಗ್ರಂಥಾಲಯಗಳು, ಇತ್ಯಾದಿ.

ಪ್ರವೇಶ ಮತ್ತು ಶುಲ್ಕಗಳು ಪ್ರಾಸ್ಪೆಕ್ಟಸ್, ಪ್ರವೇಶ, ಪ್ರವೇಶ ನಿಯಮಗಳು, ಶುಲ್ಕಗಳು, ಶುಲ್ಕ ಮರುಪಾವತಿ ನಿಯಮಗಳು, ಇತ್ಯಾದಿ.

ಸಂಶೋಧನೆ – ಸಂಶೋಧನೆ ಮತ್ತು ಅಭಿವೃದ್ಧಿ ಮಾರಾಟ, ಪ್ರಕಟಣೆಗಳು, ಪೇಟೆಂಟ್ಗಳು, ವಿದೇಶಿ / ಉದ್ಯಮ ಸಹಯೋಗಗಳು, ತಿಳುವಳಿಕಾ ಒಡಂಬಡಿಕೆಗಳು, ಇತ್ಯಾದಿ

ವಿದ್ಯಾರ್ಥಿ ಬೆಂಬಲ ಸೇವೆಗಳು
– ಹಾಸ್ಟೆಲ್ ಗಳು, ಫೆಲೋಶಿಪ್ ಗಳು, ವಿದ್ಯಾರ್ಥಿವೇತನಗಳು, ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್, ಡಿಜಿಲಾಕರ್, ಇತ್ಯಾದಿ.

ಕ್ಯಾಂಪಸ್ ಸಾಮರಸ್ಯ, ಯೋಗಕ್ಷೇಮ ಸಮಿತಿ, ಇ-ಪರಿಹಾರ, ವಿದ್ಯಾರ್ಥಿ ಕುಂದು ಕೊರತೆ ಪರಿಹಾರ ಸಮಿತಿ , ಆಂತರಿಕ ಗುಣಮಟ್ಟ ಕೋಶ, ರ್ಯಾಗಿಂಗ್ ವಿರೋಧಿ ಕೋಶ, ಒಂಬುಡನ್ ಇತ್ಯಾದಿ.

ಹಳೆಯ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳ ಸಂಘ, ಅಲ್ಯುಮಿನಾಟಿ ಸಮನ್ವಯ ಕೋಶ.

ಮಾಹಿತಿ ಕಾರ್ನರ್ ಆರ್ಟಿಐ, ಸುತ್ತೋಲೆ, ಸೂಚನೆಗಳು, ಪ್ರಕಟಣೆಗಳು, ಸುದ್ದಿಪತ್ರಗಳು, ಸುದ್ದಿ, ಇತ್ತೀಚಿನ ಘಟನೆಗಳು, ಸಾಧನೆಗಳು, ಉದ್ಯೋಗಾವಕಾಶಗಳು, ಮೀಸಲಾತಿ, ರೋಸ್ಟರ್, ಇತ್ಯಾದಿ.

ಚಿತ್ರ ಗ್ಯಾಲರಿ ಸಂಪರ್ಕ – ಫೋನ್ ಸಂಖ್ಯೆ, ಇಮೇಲ್, – ವಿಳಾಸ.
ಅಲ್ಲದೆ, ಸಂಸ್ಥೆಗಳು ತಮ್ಮ ವೆಬ್ ಸೈಟ್ನಲ್ಲಿ ಕೆಳಭಾಗದಲ್ಲಿ ಶಿಕ್ಷಣ ಸಚಿವಾಲಯ ಮತ್ತು ಯುಜಿಸಿಯ ವೆಬ್ ಸೈಟ್ ಗಳಿಗೆ ಪ್ರಮುಖ ಅಥವಾ ನಿರಂತರ ಲಿಂಕ್ ಗಳ ಅಡಿಯಲ್ಲಿ ಲಿಂಕ್ ಗಳನ್ನು ಒದಗಿಸಬೇಕಾಗುತ್ತದೆ.

 

ಇದನ್ನು ಓದಿ: Bengaluru Kambala 2023: ಬೆಂಗಳೂರು ಕಂಬಳಕ್ಕೆ ಹೊಡೀತು ಬಂಪರ್ ಲಾಟ್ರಿ- ಸರ್ಕಾರದಿಂದ 1 ಕೋಟಿ ಸಹಾಯಧನ ಘೋಷಿಸಿದ ಡಿಸಿಎಂ

Leave A Reply

Your email address will not be published.