Bhupesh Baghel: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆ- ಮೊಬೈಲ್ ನಲ್ಲಿ ಸಿಎಂ ಭೂಪೇಶ್‌ ಬಘೇಲ್‌ ಮಾಡಿದ್ದೇನು ?!

Chhattisgarh CM Bhupesh Baghel taunts to BJP on viral ‘Candy Crush’ photo latest news

Bhupesh Baghel:ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ಅವರು ಸಭೆಯೊಂದರಲ್ಲಿ ಕ್ಯಾಂಡಿ ಕ್ರಶ್‌ (Candy Crush) ಗೇಮ್‌ ಆಡಿದ ಫೋಟೊವನ್ನು ಬಿಜೆಪಿ ವೈರಲ್‌ ಮಾಡಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ರವರು ಬಿಜೆಪಿಗೆ ಟಕ್ಕರ್ ನೀಡಿದ್ದಾರೆ.

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ (Election)ಸಲುವಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಭೂಪೇಶ್‌ ಬಘೇಲ್‌ ಅವರು ಕ್ಯಾಂಡಿ ಕ್ರಶ್‌ ಆಡಿದ ಫೋಟೊ ಒಂದನ್ನು ಬಿಜೆಪಿಯ ಅಮಿತ್‌ ಮಾಳವೀಯ ಹಂಚಿಕೊಂಡಿದ್ದರು. “ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದು, ಏನು ಮಾಡಿದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಚಾರ ಅವರ ಗಮನಕ್ಕೆ ಬಂದಂತಿದೆ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್‌ ಆಡುವುದೇ ಒಳಿತು ಎಂದು ಅವರು ಭಾವಿಸಿದ್ದಾರೆ” ಎಂದು ಅಮಿತ್‌ ಮಾಳವೀಯ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಸದ್ಯ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಪ್ರತಿಕ್ರಿಯೆ ನೀಡಿದ್ದಾರೆ.

“ಕ್ಯಾಂಡಿ ಕ್ರಶ್ ನನ್ನ ಫೇವರಿಟ್‌ ಗೇಮ್.‌ ನಾನು ಕ್ಯಾಂಡಿ ಕ್ರಶ್ ಗೇಮ್‌ನಲ್ಲಿ ಹಲವು ಉನ್ನತ ಹಂತಗಳನ್ನು ದಾಟಿದ್ದೇನೆ” ಎಂದು ಟ್ವೀಟ್‌ ಮಾಡುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ. “ನಾನು ಯಾವಾಗಲೂ ಕ್ಯಾಂಡಿ ಕ್ರಶ್‌ ಆಡುವುದನ್ನು ಇಚ್ಛಿಸುತ್ತೇನೆ. ನಾನು ಇತ್ತೀಚೆಗೆ ಜಟಕಾ ಓಡಿಸಿದ ಸಂದರ್ಭ ಕೂಡ ಬಿಜೆಪಿಯವರು ಅಸಮಾಧಾನ ಹೊರಹಾಕಿದ್ದರು. ನಾನೇಕೆ ಗಿಲ್ಲಿ ದಾಂಡು ಆಡುತ್ತೇನೆ? ಛಥ್ತೀಸ್‌ಗಢದಲ್ಲಿ ಒಲಿಂಪಿಕ್ಸ್‌ ಏಕೆ ಆಯೋಜನೆ ಮಾಡಲಾಗುತ್ತಿದೆ? ಹೀಗೆ ಬಿಜೆಪಿಯವರು ಹಲವು ಬಾರಿ ಪ್ರಶ್ನೆ ಮಾಡಿ ಆಕ್ಷೇಪ ಹೊರ ಹಾಕುತ್ತಲೇ ಬಂದಿದ್ದು, ಬಿಜೆಪಿಯವರಿಗೆ ನನ್ನ ಅಸ್ತಿತ್ವವೇ ಮುಳುವಾಗಿದೆ. ಆದರೆ, ಇಲ್ಲಿ ಯಾರು ಅಧಿಕಾರದಲ್ಲಿ ಉಳಿಯಲಿದ್ದಾರೆ, ಯಾರು ಉಳಿಯುವುದಿಲ್ಲ ಎಂಬುದನ್ನು ರಾಜ್ಯದ ಜನ ನಿರ್ಧಾರ ಕೈಗೊಳ್ಳುತ್ತಾರೆ ” ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

 

ಇದನ್ನು ಓದಿ: 7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?!

Leave A Reply

Your email address will not be published.