Varsha-Varun love breakup: ವರುಣ್-ವರ್ಷಾ ಬ್ರೇಕಪ್ ಗೆ ಕಾರಣ ಯಾರು ?! ಸ್ಪೋಟಕ ಸತ್ಯ ಬಿಚ್ಚಿಟ್ಟ ಸೋನು ಗೌಡ

Entertainment Bigg Boss contest Sonu srinivas Gowda reacts about varsha Varun love breakup

Varsha-Varun love breakup: ಇನ್ ಸ್ಟಾಗ್ರಾಮ್ (Instagram) ಅಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ವರ್ಷಾ ಕಾವೇರಿ ಮತ್ತು ವರುಣ್ (Varsha-Varun love breakup) ಬ್ರೇಕಪ್ ವಿಚಾರ ಎಲ್ಲರಿಗೂ ಗೊತ್ತಿದೆ‌. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ರೀಲ್ಸ್​ ಮೂಲಕವೇ ಮನೆ ಮಾತಾಗಿದ್ದರು. ಅಲ್ಲದೆ, ಟ್ರೋಲಿಗರ ಫೇವರಿಟ್​ ಸಹ ಆಗಿದ್ದರು.​ ಆದರೆ, ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಎಲ್ಲರಿಗೂ ನಂಬಲಸಾಧ್ಯವಾಗಿತ್ತು. ಇದೀಗ ವರುಣ್-ವರ್ಷಾ ಬ್ರೇಕಪ್ ವಿಚಾರವಾಗಿ ಸೋನು ಗೌಡಳಿಂದ ಬಿಗ್ ಅಪ್ಡೇಟ್ ಬಂದಿದೆ.

ಕೆಲದಿನಗಳ ಹಿಂದೆ ವರ್ಷ ಕಾವೇರಿ- ವರುಣ್ (Varun Aradhya) ಬ್ರೇಕ್‌ ಅಪ್ ಗೆ ಸೋನುನೇ ಕಾರಣ ಎಂಬಂತೆ ಸೋನು ಮಾಲ್ಡೀವ್ಸ್ ಫೋಟೋ ಸೇರಿಸಿ ಸಖತ್ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಸೋನು (Sonu srinivas Gowda) ಮಾತನಾಡಿ, ಇಬ್ಬರ ಬ್ರೇಕಪ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಟ್ರೋಲ್‌ನವರು ಸಾವಿರ ಕೆಲಸ ಮಾಡುತ್ತಾರೆ. ಈ ಇನ್ಸ್ಟಾಗ್ರಾಂನಲ್ಲಿ ಏನು ಆಗುತ್ತಿದೆ ಎಂದೇ ನನಗೆ ತಿಳಿಯುತ್ತಿಲ್ಲ. ಕೆಲ ದಿನಗಳಿಂದ ನನ್ನ ಮಾಲ್ಡೀವ್ಸ್ ವಿಡಿಯೋಸ್‌ನ ವೈರಲ್ ಮಾಡ್ತಿದ್ದರು. ಈಗ ವರುಣ್ ಬ್ರೇಕಪ್‌ಗೆ ನನ್ನ ಫೋಟೋ ಮ್ಯಾಚ್ ಮಾಡ್ತಿದ್ದಾರೆ.ವರುಣ್-ವರ್ಷ (Varsha Kaveri) ಅವರದ್ದು 5 ವರ್ಷದ ಲವ್. ಇವರಿಬ್ಬರ ಮಧ್ಯೆ ನಾನು ತಗ್ಲಾಕೊಂಡಿದ್ದೀನಿ. ನಾನೇನು ತಪ್ಪು ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: New Rule: ರಾತ್ರೋ ರಾತ್ರಿ ಎಲ್ಲಾ ವಾಹನ ಮಾಲಿಕರಿಗೆ ಬಂತು ಹೊಸ ರೂಲ್ಸ್ !! ಪಾಲಿಸದಿದ್ದರೆ ಜೈಲಂತೂ ಫಿಕ್ಸ್ !

Leave A Reply

Your email address will not be published.