New Rule: ರಾತ್ರೋ ರಾತ್ರಿ ಎಲ್ಲಾ ವಾಹನ ಮಾಲೀಕರಿಗೆ ಬಂತು ಹೊಸ ರೂಲ್ಸ್ !! ಪಾಲಿಸದಿದ್ದರೆ ಜೈಲಂತೂ ಫಿಕ್ಸ್ !

National news New vehicle rules minors will drive all these cases will be fined against parents

New Vehicle rule  : ರಾತ್ರೋ ರಾತ್ರಿ ಎಲ್ಲಾ ವಾಹನ (vehical) ಮಾಲಿಕರಿಗೆ ಹೊಸ ರೂಲ್ಸ್ (New Rule) ಬಂದಿದೆ. ಹೌದು, ವಾಹನ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗಳು ಮತ್ತು ಆಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಪರಾಧವಾಗಿದೆ(New Vehicle rule). ಈ ಬಗ್ಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಅ‌. 10 ರಿಂದ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗಳು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನ ಚಾಲನೆ ಹಾಗೂ ವೀಲಿಂಗ್ ಮತ್ತು ರೇಸಿಂಗ್ ಮಾಡುವವರ ವಿರುದ್ಧ ಕಾನೂನಿನಾತ್ಮಕ ಕ್ರಮ ಜರುಗಿಸಲಾಗುವುದು.

ನಗರದಾದ್ಯಂತ ಶಾಲಾ ಕಾಲೇಜು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಇಂತಹ ಅಪರಾಧ ಹಾಗೂ ವಾಹನ ಪರಿಶೀಲನೆ ಮಾಡುವ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನಗಳನ್ನು ಚಾಲನೆ ಮಾಡಿದರೆ ಅಂತಹ ವಾಹನಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗುವುದು.

ಅಲ್ಲದೆ, ಪೋಷಕರ ವಿರುದ್ಧ ಕಲಂ 5(1) ಆಧಾರ 180 ಐ.ಎಂ.ಎ ಕಾಯ್ದೆ ಅಡಿ (ರೂ.25,000 ದಂಡ ಮತ್ತು 03 ವರ್ಷಗಳ ಜೈಲುವಾಸ ಶಿಕ್ಷೆ) ಹಾಗೂ ಇತರ ಸೂಕ್ತ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi : ರಾಹುಲ್ ಗಾಂಧಿ ಒಳ್ಳೆಯ ನಾಯಕ, ಆದರೆ…. !! ಶಾಕಿಂಗ್ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ !

Leave A Reply

Your email address will not be published.