America : ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದ ಖತರ್ನಾಕ್ ಮಹಿಳೆ !! ಏರ್ ಪೋರ್ಟಿನಲ್ಲಿ ಸಿಕ್ಕಿಬಿದ್ದು ಕೊಟ್ಲು ನೋಡಿ ಶಾಕಿಂಗ್ ರೀಸನ್ !!

woman who had gone America was caught by customs officials with giraffe excrement

America: ಖತರ್ನಾಕ್ ಮಹಿಳೆಯೋರ್ವಳು ವಿದೇಶಕ್ಕೆ ಹಾರಿ ಜಿರಾಫೆಯ ಲದ್ದಿ ತಂದು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಘಟನೆ ಅಮೆರಿಕದ (America) ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೂಡಲೇ ಮಹಿಳೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಈಕೆಯ ರೀಸನ್ ಕೇಳಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದಾದರೂ ಏನು?!

ವಿಚಾರಣೆ ವೇಳೆ ಆಕೆ ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ಜಿರಾಫೆಯ ಮಲವನ್ನು ತಂದಿರುವುದಾಗಿ ಹೇಳಿದ್ದಾರೆ. ಹಾಗೂ ನೆಕ್ಲೆಸ್ ಮಾಡಿಕೊಳ್ಳಲು ಜಿರಾಫೆಯ ಮಲವನ್ನು ತಂದಿದ್ದಾಗಿ ಮಹಿಳೆ ಹೇಳಿದ್ದಾರೆ. ಈ ಹಿಂದೆ ಕೂಡಾ ತಾವು ಕಡವೆಯ ಮಲವನ್ನು ಸಂಗ್ರಹಿಸಿ ತಂದು ಅದರಲ್ಲಿ ಆಭರಣ ಮಾಡಿದ್ದಾಗಿ ಮಹಿಳೆ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಸ್ಟಮ್ಸ್​ನ ಹಿರಿಯ ಅಧಿಕಾರಿಯೊಬ್ಬರು ಆಕೆ ಕೀನ್ಯಾದಿಂದ ಹೊತ್ತು ತಂದ ಜಿರಾಫೆ ಮಲವನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಅಮೆರಿಕದ ಕೃಷಿ ಇಲಾಖೆ ಅಧಿಕಾರಿಗಳು ಮಹಿಳೆ ತಂದ ಜಿರಾಫೆ ಮಲವನ್ನು ಪರಿಶೀಲಿಸಿ ಅದನ್ನು ಕ್ರಿಮಿನಾಶಕ ಬಳಸಿ ನಾಶ ಮಾಡಿದ್ದಾರೆ. ಈ ರೀತಿಯ ವಸ್ತುಗಳನ್ನು ಬೇರೆ ದೇಶ, ಬೇರೆ ಖಂಡಗಳಿಂದ ಅಮೆರಿಕ ದೇಶಕ್ಕೆ ತರೋದು ಅಪಾಯಕಾರಿ. ಈ ರೀತಿಯ ವಸ್ತುಗಳು ನನ್ನಲ್ಲಿ ಇವೆ ಎಂದು ಮೊದಲೇ ಘೋಷಣೆ ಮಾಡದೆ ಅಮೆರಿಕ ದೇಶವನ್ನು ಪ್ರವೇಶ ಮಾಡೋದು ಕೂಡಾ ಅಪರಾಧ.

ಈ ರೀತಿಯ ವಸ್ತುಗಳನ್ನು ಮುಟ್ಟುವ, ಸಂಗ್ರಹಿಸುವ ಹಾಗೂ ತನ್ನ ಜೊತೆ ತರುವ ವೇಳೆ ಹಲವು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಕೆ ಮಾಡೋದು, ಅದನ್ನು ಬಳಸೋದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು ಎಂದು ಕಸ್ಟಮ್ಸ್​ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂದಹಾಗೆ, ಈ ಘಟನೆ ಸೆಪ್ಟೆಂಬರ್ 29 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Leave A Reply

Your email address will not be published.