House Construction : ಈ ಜಿಲ್ಲೆಯ ಜನರಿಗೆ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸೈಟ್- ಕೊಳ್ಳಲು ಮುಗಿಬಿದ್ದ ಜನ !

Latest news government gives the site for house construction

House Construction : ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಜನ ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಜಿಲ್ಲೆಯ ಜನರಿಗೆ ಮನೆ ನಿರ್ಮಾಣಕ್ಕೆ ಸರ್ಕಾರವೇ ಸೈಟ್ ನೀಡುತ್ತದೆ. ಸದ್ಯ ಜನರು ಕೊಳ್ಳಲು ಮುಗಿಬಿದ್ದಿದ್ದಾರೆ.

ಇತ್ತೀಚಿಗೆ ಮನೆ ನಿರ್ಮಾಣದ ಬಗ್ಗೆ ಟ್ವಿಟ್ಟರ್ (Twitter) ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಮಾಹಿತಿ ನೀಡಿದ್ದಾರೆ. ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿ ಮನೆ ಹಂಚಿಕೆ ಮಾಡಲು ರಾಜ್ಯದ 7 ಜಿಲ್ಲೆಗಳಿಗೆ ಅನುಮತಿ ನೀಡಲಾಗಿದೆ. ಅಲ್ಲದೆ, ಅತಿ ಕಡಿಮೆ ದರದಲ್ಲಿ ಸರ್ಕಾರಿ ಸೈಟ್ ಗಳನ್ನು (Government site) ಕೂಡ ಖರೀದಿ ಮಾಡಬಹುದಾಗಿದೆ.

ಸರ್ಕಾರ ವಸತಿ ಬಡಾವಣೆ ಯೋಜನೆಯ ಅಡಿಯಲ್ಲಿ ರಾಜ್ಯದ 7 ಜಿಲ್ಲೆಗಳಿಗೆ ಅತಿ ಕಡಿಮೆ ದರದಲ್ಲಿ ಸೈಟ್ ಹಾಗೂ ಮನೆ ಕಟ್ಟಿಕೊಳ್ಳುವುದಕ್ಕೆ ಸಬ್ಸಿಡಿ ದರದಲ್ಲಿ ಸಾಲ (subsidy loan) ಸೌಲಭ್ಯವನ್ನು ಕೂಡ ನೀಡುತ್ತಿದೆ.

ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಕಲಬುರಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ವಸತಿ ಬಡಾವಣೆ ಯೋಜನೆ ಜಾರಿಯಲ್ಲಿದ್ದು, ರಾಜ್ಯ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೊಸೈಟಿ ಬಡಾವಣೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ನಿವೇಶನ ನೀಡಲು ಸರ್ಕಾರ ಮುಂದಾಗಿದೆ. ಸದ್ಯದಲ್ಲಿಯೇ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.