Netflix: ನೆಟ್‌ಫ್ಲಿಕ್ಸ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್- ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

World news technology news Netflix ad free plans may be more expensive soon latest news

Netflix: ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾ ಮುಂದು ತಾ ಮುಂದು ಅಂತ ಓಡುವ ನಡುವೆಯೂ ಮನೋರಂಜನೆಗೂ ಹೆಚ್ಚಿನ ಬೇಡಿಕೆ ಇದೆ. ಇದೀಗ ಅಂತ್ಯತ ಬೇಡಿಕೆ ಮತ್ತು ಮನೋರಂಜನೆ ನೀಡಬಲ್ಲ ನೆಟ್‌ಫ್ಲಿಕ್ಸ್ ಒಟಿಟಿ ಪ್ರಿಯರಿಗೆ ಶಾಕಿಂಗ್ ನ್ಯೂಸ್‌ ನೀಡಲಾಗಿದೆ. ಹೌದು, ವೆಬ್‌ ಸೀರೀಸ್, ಟಿವಿ ಶೋ, ಸಿನಿಮಾ, ಇತರೆ ಮನರಂಜನೆಗಳ ಸೇವೆ ನೀಡುವ ಜನಪ್ರಿಯ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ (Netflix) ಸದ್ಯದಲ್ಲೇ ತನ್ನ ಚಂದಾದಾರರಿಗೆ ಬಿಗ್‌ ಶಾಕ್‌ ನೀಡಲಿದೆ ಎನ್ನಲಾಗಿದೆ.

ಮುಖ್ಯವಾಗಿ, ಪಾಸ್‌ವರ್ಡ್‌ ಶೇರಿಂಗ್ ಬ್ಯಾನ್‌ ಹಾಗೂ ಜಾಹೀರಾತು ಇರುವ ಪ್ಲಾನ್‌ಗಳನ್ನು ಪರಿಚಯಿಸಿದ್ದ ನೆಟ್‌ಫ್ಲಿಕ್ಸ್‌ ಈಗ ಚಂದಾದಾರರಿಗೆ ಜಾಹೀರಾತು ಉಚಿತ ಪ್ಲಾನ್‌ಗಳ ದರವನ್ನು ಹೆಚ್ಚಿಸಲು ಮುಂದಾಗಿದೆ ಎನ್ನಲಾಗಿದೆ.

ಮನರಂಜನೆಗಳ ಸ್ಟ್ರೀಮಿಂಗ್ ಧೈತ್ಯ ನೆಟ್‌ಫ್ಲಿಕ್ಸ್‌ ಪ್ರಸ್ತುತ ಹಲವು ಜಾಗತಿಕ ಮಾರುಕಟ್ಟೆಗಳಲ್ಲಿ ದರ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಸುತ್ತಿದೆ, ಆರಂಭಿಕವಾಗಿ ಅಮೆರಿಕ ಹಾಗೂ ಕೆನಡಾ ದೇಶಗಳ ಗಮನಹರಿಸಿದ್ದು ಇಲ್ಲಿ ದರ ಹೆಚ್ಚಿಸುವ ಕುರಿತು ಗಮನಹರಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ವರದಿಗಳ ಪ್ರಕಾರ ನೆಟ್‌ಫ್ಲಿಕ್ಸ್‌ ಈ ಬದಲಾವಣೆಗಳನ್ನು ಮುಂದಿನ ವಾರಗಳಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಆದರೆ ಜಾಹೀರಾತು ಉಚಿತ ಪ್ಲಾನ್‌ಗಳ ದರ ಹೆಚ್ಚಳ ಮಾಹಿತಿಗಳು ಇನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ. ಅಲ್ಲದೇ ರಾಯಿಟರ್ಸ್‌ ಮನವಿಗೂ ಸಹ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ನೆಟ್‌ಫ್ಲಿಕ್ಸ್‌ ಕಳೆದ ಜುಲೈನಲ್ಲಿ ಅಮೆರಿಕದಲ್ಲಿ ತನ್ನ ಬಜೆಟ್‌ ಬೆಲೆಯ ಬೇಸಿಕ್ ಪ್ಲಾನ್‌ $9,99 ಅನ್ನು ಸಹ ಸ್ಥಗಿತಗೊಳಿಸಿದೆ. $15,49 ಡಾಲರ್‌ನ ಸ್ಟ್ಯಾಂಡರ್ಡ್ ಜಾಹೀರಾತು ಉಚಿತ ಪ್ಲಾನ್‌ ಅನ್ನು ಮಾತ್ರ ನೀಡುತ್ತಿದೆ. ಇನ್ನು $6.99 ಡಾಲರ್‌ಗೆ ಜಾಹೀರಾತು ಸಹಿತ ಪ್ಲಾನ್‌ ನೀಡುತ್ತಿದೆ. ಆದರೆ ಈಗ ಹೊಸ ಬದಲಾವಣೆಯನ್ನು ಕಂಪನಿ ತನ್ನ ಲಾಭಾಂಶ ಹೆಚ್ಚಳವನ್ನು ಗುರಿಯಾಗಿಸಿ ಬಿಡುಗಡೆ ಮಾಡುವ ದಿನಗಳು ಸನಿಹದಲ್ಲಿವೆ.

ಸ್ಟ್ರೀಮಿಂಗ್ ಧೈತ್ಯವು ಒರಿಜಿನಲ್ ಶೋಗಳು ಹಾಗೂ ಸಿನಿಮಾಗಳು ಸೇರಿದಂತೆ ಹೊಸ ಕಂಟೆಂಟ್‌ಗಳ ಮೇಲೆ ಬಿಲಿಯನ್‌ ಡಾಲರ್‌ಗಳನ್ನು ಹೂಡಿದೆ. ಈ ಗಣನೀಯ ವೆಚ್ಚವು ಕಂಪನಿಗೆ ಲಾಭವನ್ನು ತಗ್ಗಿಸಲಿದ್ದು, ಈ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್‌ ಜಾಹೀರಾತು ಉಚಿತ ಪ್ಲಾನ್‌ಗಳ ದರ ಹೆಚ್ಚಳ ಮಾಡಲು ಮುಂದಾಗಿದೆ ಎನ್ನಲಾಗಿದೆ. ಕಳೆದ ಜುಲೈನಲ್ಲಿ ಪಾಸ್‌ವರ್ಡ್‌ ಶೇರ್‌ ಮಾಡುವುದನ್ನು ನಿಲ್ಲಿಸಿರುವುದು ಸಹ ಈ ಕ್ರಮದ ಭಾಗವಾಗಿದೆ. ಅಲ್ಲದೇ ಪಾಸ್‌ವರ್ಡ್‌ ಇತರರಿಗೆ ಶೇರ್‌ ಮಾಡಲು $7.99 ಡಾಲರ್‌ ಮಾಸಿಕ ಶುಲ್ಕ ವಿಧಿಸಿದೆ.

ನೆಟ್‌ಫ್ಲಿಕ್ಸ್‌ ಕಳೆದ ವರ್ಷ ಅಮೆರಿಕದಲ್ಲಿ ಮಾಸಿಕ $6.99 ಡಾಲರ್‌ಗೆ ಜಾಹೀರಾತು ಸಪೋರ್ಟ್‌ ಮಾಡುವ ಪ್ಲಾನ್‌ ಪರಿಚಯಿಸಿದೆ. ಇದರಲ್ಲಿ ಒಂದು ಗಂಟೆಗೆ 4 ರಿಂದ 5 ಜಾಹೀರಾತುಗಳು ಪ್ರದರ್ಶಿತವಾಗಲಿದ್ದು, ಪ್ರತಿಯೊಂದು 15-30 ಸೆಕೆಂಡ್ ಇವೆ.
ಆದಾಗ್ಯೂ, ಭಾರತದಲ್ಲಿ ಜಾಹೀರಾತು ಸಹಿತ ಪ್ಲಾನ್‌ ಬದಲಾಗಿ, ನೆಟ್‌ಫ್ಲಿಕ್ಸ್‌ ಮೊಬೈಲ್‌ ಓನ್ಲಿ ಪ್ಲಾನ್‌ ಆಫರ್‌ ಮಾಡಿದೆ. ಚಂದಾದಾರರು ಇದನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ನೋಡಬಹುದಾಗಿದೆ. ಇದರ ಬೆಲೆ ಕೇವಲ ರೂ.149 ಪ್ರತಿ ತಿಂಗಳಿಗೆ. ನೆಟ್‌ಫ್ಲಿಕ್ಸ್‌ನ ಮೊಬೈಲ್ ಓನ್ಲಿ ಪ್ಲಾನ್‌ನಿಂದ ಯಾವುದೇ ಜಾಹೀರಾತು ಇಲ್ಲದೆ ಅಪರಿಮಿತ ಸಿನಿಮಾಗಳು, ಟಿವಿ ಶೋಗಳು, ಮೊಬೈಲ್‌ ಗೇಮ್ಸ್‌ ಅನ್ನು ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್, ಐಫೋನ್‌ ಹಾಗೂ ಇ-ಪ್ಯಾಡ್‌ನಲ್ಲಿ ವೀಕ್ಷಿಸಬಹುದಾಗಿದೆ. ಆದರೆ ಭಾರತಕ್ಕೆ ಈ ಹೊಸ ಬದಲಾವಣೆ ಜಾರಿ ಮಾಡುವುದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: 100 ರೂಪಾಯಿ ಟಿಕೆಟ್ ಕೊಂಡ್ರು, 1.5 ಕೋಟಿ ಬಂಪರ್ ಲಾಟ್ರಿ ಹೊಡುದ್ರು- ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಈ ಕುಚುಕು ದೊಸ್ತ್

Leave A Reply

Your email address will not be published.