Cricketer Adam Gilchrist : ಈ ಸಲ ಕ್ರಿಕೆಟ್ ವಿಶ್ವಕಪ್ ಗೆಲ್ಲೋದು ಯಾರು ಗೊತ್ತಾ ?! ಸ್ಪೋಟಕ ಭವಿಷ್ಯ ನುಡಿದ ಆಡಂ ಗಿಲ್‌ಕ್ರಿಸ್ಟ್‌ !

cricket news cricketer Adam Gilchrist prediction about World Cup 2023 winner

Cricketer Adam Gilchrist : ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ದು, ಅಕ್ಟೋಬರ್ 05ರಂದು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.

ಇದೀಗ ವಿಶ್ವಕಪ್ ಗೆಲ್ಲುವ ತಂಡದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್‌ (Cricketer Adam Gilchrist) ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಈ ಸಲ ಕ್ರಿಕೆಟ್ ವಿಶ್ವಕಪ್ ಗೆಲ್ಲೋದು ಯಾರು ಗೊತ್ತಾ ?!

ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಗಿಲ್‌ಕ್ರಿಸ್ಟ್ ಪ್ರಕಾರ, ನವೆಂಬರ್ 19ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಕಾಂಗರೂ ಪಡೆ ಆರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

“ಏಕದಿನ ವಿಶ್ವಕಪ್ ಟೂರ್ನಿಯ ಈ ಸಂದರ್ಭದಲ್ಲಿ ಎಲ್ಲಾ ತಂಡಗಳಿಗೂ ಆಲ್ ದಿ ಬೆಸ್ಟ್ ಹೇಳುತ್ತಿದ್ದೇನೆ. ನನ್ನ ಪ್ರಕಾರ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಲಿದೆ. ನಿಮ್ಮ ಕಾಮೆಂಟ್‌ಗಳಿಗೆ ಸ್ವಾಗತ” ಎಂದು ಗಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Gold Silver Price Today : ಪಾತಾಳಕ್ಕೆ ಕುಸಿಯುತ್ತಿದೆ ಚಿನ್ನದ ದರ !! ಇನ್ಮುಂದೆ ಕೇವಲ ಈ ಬೆಲೆಗೆ ಸಿಗಲಿದೆ ಬಂಗಾರ ?!

Leave A Reply

Your email address will not be published.