Punjab lottery: 100 ರೂಪಾಯಿ ಟಿಕೆಟ್​ ಕೊಂಡ್ರು, 1.5 ಕೋಟಿ ಬಂಪರ್ ಲಾಟ್ರಿ ಹೊಡುದ್ರು- ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಈ ಕುಚುಕು ದೊಸ್ತ್

National news Punjab lottery best friends won 1.5 crore bumper lottery latest news

Punjab Lottery: ಕೆಲವರಿಗೆ ಬಂಪರ್ ಲಾಟರಿ (Lottery) ಹೊಡೆದು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ. ಅಂತೆಯೇ ಕಳೆದ 14 ವರ್ಷಗಳಿಂದ ಸತತವಾಗಿ ಲಾಟರಿ ಖರೀದಿಸುತ್ತಿದ್ದ ಇಬ್ಬರು ಕುಚುಕು ಗೆಳೆಯರು 200 ರೂ ನೀಡಿ ಖರೀದಿಸಿದ್ದ ಲಾಟರಿಯಿಂದ 1.5 ಕೋಟಿ ತಮ್ಮದಾಗಿಸಿಕೊಂಡಿದ್ದಾರೆ.

ಹೌದು, ಪಂಜಾಬ್‌ನ ಅಬೋಹರ್ ನಗರದ ಇಬ್ಬರು ಸ್ನೇಹಿತರಾದ ಜೋಗಿಂದರ್ ಮತ್ತು ಆತನ ಸ್ನೇಹಿತ ರಮೇಶ್ ಸಿಂಗ್​ಗೆ ಅದೃಷ್ಟ ಒಲಿದಿದ್ದು, ಬರೋಬ್ಬರಿ ₹ 1.5 ಕೋಟಿ ಲಾಟರಿ( Punjab lottery) ಗೆದ್ದಿದ್ದಾರೆ. ಈ ಇಬ್ಬರು ಕಳೆದ 14 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಘಂಟಾಘರ್‌ನ ಅಂಗಡಿಯಲ್ಲಿ ಈ ಇಬ್ಬರು 100 ರೂ ನೀಡಿ 2 ಲಾಟರಿ ಟಿಕೆಟ್ ಖರೀದಿಸಿದ್ದರು. ಭಾನುವಾರ ಸ್ನೇಹಿತರು ಖರೀದಿಸಿದ್ದ ಆ ಟಿಕೆಟ್ ಇಬ್ಬರನ್ನು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿ ಮಾಡಿದೆ.

ವಿಶೇಷ ಅಂದರೆ, ಜೋಗಿಂದರ್ ಮತ್ತು ರಮೇಶ್ ಅವರ ಮೊದಲ ಲಾಟರಿ ಗೆಲುವು ಅಲ್ಲ. ಈ ಸ್ನೇಹಿತ ಜೋಡಿಯು ಈ ಹಿಂದೆ 45,000 ಮತ್ತು ಒಮ್ಮೆ 20,000 ಮೊತ್ತವನ್ನು ಗೆದ್ದಿದ್ದಾಗಿ ತಿಳಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕೋಟಿ ಲೆಕ್ಕದಲ್ಲಿ ಗೆದ್ದಿದ್ದಾರೆ.

ಮೂಲತಃ ಜೋಗಿಂದರ್ ಅವರು ಸಣ್ಣ ಬಟ್ಟೆ ಅಂಗಡಿಯನ್ನು ಹೊಂದಿದ್ದಾರೆ ಮತ್ತು ಲಾಟರಿ ಟಿಕೆಟ್‌ಗಳನ್ನು ಕೂಡ ಮಾರಾಟ ಮಾಡುತ್ತಾರೆ. ಇನ್ನು ಘಂಟಾಘರ್‌ನಲ್ಲಿರುವ ಜ್ಞಾನ್ ಲಾಟರಿ ಕೇಂದ್ರಕ್ಕೆ ಜೋಗಿಂದರ್ ಮತ್ತು ರಮೇಶ್ ಟಿಕೆಟ್‌ ಸಹಿತ ಬಂದಿದ್ದು, ಅವರನ್ನು ಸ್ಥಳೀಯರು ಅಭಿನಂದಿಸುತ್ತಿದ್ದ ಸಂತೋಷದ ದೃಶ್ಯಗಳು ಕಂಡುಬಂದವು. ನಂತರ ಸ್ನೇಹಿತರಿಬ್ಬರು ಸಿಹಿ ಹಂಚಿ ಸಂಭ್ರಮವನ್ನು ಹಂಚಿಕೊಂಡರು.

ಮಾಹಿತಿ ಪ್ರಕಾರ, 1968 ರಲ್ಲಿ ಸ್ಥಾಪಿತವಾದ ಪಂಜಾಬ್ ರಾಜ್ಯ ಲಾಟರಿಗಳ ನಿರ್ದೇಶನಾಲಯವು ಪಂಜಾಬ್ ಸರ್ಕಾರದ ಹಣಕಾಸು ಇಲಾಖೆಯ ಒಂದು ವಿಭಾಗವಾಗಿದೆ. ತನ್ನ ವೆಬ್‌ಸೈಟ್‌ನಲ್ಲಿ, ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ನಿಜವಾದ ಮತ್ತು ಪಾರದರ್ಶಕ ಯೋಜನೆಗಳನ್ನು ನಡೆಸುವುದು ಮತ್ತು ಉತ್ತೇಜಿಸುವುದು ಲಾಟರಿಗಳ ಗುರಿಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ..

ಇದನ್ನೂ ಓದಿ: ದೇವಾಲಯದಲ್ಲಿ ವಿದೇಶಿಗನಿಂದ ಬೆತ್ತಲೆ ಧ್ಯಾನ – ಸರ್ಕಾರ ಮಾಡಿದ್ದೇನು ?!

Leave A Reply

Your email address will not be published.