ಡಿಸಿಸಿ‌ ಬ್ಯಾಂಕ್ ಅಧ್ಯಕ್ಷರ ಮನೆಗೆ ಇಡಿ ಅಧಿಕಾರಿಗಳ ದಾಳಿ ,ಪೊಲೀಸ್ ಬಂದೋ ಬಸ್ತ್

Karnataka news ED officials raid DCC Bank chairman's house at Shivamogga

Shivamogga: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಶಿವಮೊಗ್ಗದಿಂದ(Shivamogga) ವರದಿಯಾಗಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಜುನಾಥ ಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಇರುವ ಮೂರು ಮನೆಗಳ ಮೇಲೆ ಗುರುವಾ್ ಬೆಳಗ್ಗೆ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಮೊಗ್ಗದ ಶರಾವತಿ ನಗರದಲ್ಲಿರುವ ಮನೆ ಹಾಗೂ ತೀರ್ಥಹಳ್ಳಿಯ ಕರಕುಚ್ಚಿ ಮತ್ತು ಬೆಟ್ಟಮಕ್ಕಿಯಲ್ಲಿರುವ ಮನೆಗಳ ಮೇಲೆ ಇ.ಡಿ. ದಾಳಿಯಾಗಿದೆ.

ಸರ್ಕಾರಿ ಕಾರುಗಳಲ್ಲಿ ಆಗಮಿಸಿರುವ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯ ಸುತ್ತಲೂ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: 35% Reservation for Women in Govt Jobs: ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35ರಷ್ಟು ಮೀಸಲಾತಿ; ಸರಕಾರದಿಂದ ಹೊಸ ಘೋಷಣೆ!!!

Leave A Reply

Your email address will not be published.