Akrama Sakrama: ರೈತರಿಗೆ ಗುಡ್‌ನ್ಯೂಸ್; ಅಕ್ರಮ ಸಕ್ರಮ ಮಂಜೂರಾತಿ, ಅರ್ಜಿಗಳ ಶೀಘ್ರ ವಿಲೇವಾರಿಗೆ ಸಚಿವರ ಕಟ್ಟಪ್ಪಣೆ!!!

akrama sakrama news good news for farmers cultivating in bagar hukum latest news

Akrama Sakrama: ರೈತರಿಗೆ ಸಿಹಿ ಸುದ್ದಿಯೊಂದನ್ನು ರಾಜ್ಯ ಸರಕಾರ ನೀಡಿದೆ. ಇದು ಮುಖ್ಯವಾಗಿ ಬಗರ್‌ ಹುಕುಂ ಸಾಗುವಳಿ ಮಾಡುವ ರೈತರಿಗೆ ಸಂಬಂಧಪಟ್ಟದ್ದಾಗಿದೆ. ರಾಜ್ಯ ಸರಕಾರ ಹೇಳಿರುವ ಪ್ರಕಾರ, ಅಕ್ರಮ ಸಕ್ರಮ (Akrama Sakrama)ಯೋಜನೆಯಡಿ ನಮೂನೆ 50,53,57 ಅಡಿ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಲು ಬಗರ್‌ ಹುಕುಂ ತಂತ್ರಾಂಶ ಅನುಷ್ಠಾನ ಮಾಡಲಾಗಿದೆ ಎಂದು ವರದಿಯಾಗಿದೆ.

ನ್ಯಾಯಯುತ ವಿಲೇವಾರಿ ಮತ್ತು ಅನಧಿಕೃತ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವ ಪ್ರಕ್ರಿಯೆ ಶೀಘ್ರವೇ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ. ಇನ್ನು ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಈ ತಂತ್ರಾಂಶದಿಂದ ಅಕ್ರಮ ಸಾಗುವಳಿ ಭೂಮಿಯಲ್ಲಿ ಸ್ಯಾಟ್‌ಲೈಟ್‌ ಚಿತ್ರದ ಮೂಲಕ ಮಾಹಿತಿ ಪಡೆಯಲು ಸಾಧ್ಯ. ಹಾಗಾಗಿ ಕೃಷಿ ಅಥವಾ ಇತರ ಚಟುವಟಿಕೆ ಬಗ್ಗೆ ತಿಳಿಯಲು ಈ ಆಪ್‌ ಸಹಾಯ ಮಾಡಲಿದೆ. ಹಾಗೂ ಈ ತಂತ್ರಾಂಶದಿಂದ ಅರ್ಜಿ ವಿಲೇವಾರಿ ನ್ಯಾಯಸಮ್ಮತವಾಗಿ ಆಗಲಿದೆ.

ಇದನ್ನೂ ಓದಿ: ಡಿಸಿಸಿ‌ ಬ್ಯಾಂಕ್ ಅಧ್ಯಕ್ಷರ ಮನೆಗೆ ಇಡಿ ಅಧಿಕಾರಿಗಳ ದಾಳಿ ,ಪೊಲೀಸ್ ಬಂದೋ ಬಸ್ತ್

Leave A Reply

Your email address will not be published.